Honda: 102 ಕಿ.ಮೀ ರೇಂಜ್.. ಕಮ್ಮಿ ಬೆಲೆಯ ಹೋಂಡಾ ಆಕ್ಟಿವಾ ಇ ಕುರಿತ ಪ್ರಮುಖಾಂಶಗಳು!

ಹೋಂಡಾ ಆಕ್ಟಿವಾ ಇ (Honda Activa e) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ನಗರ ಪ್ರದೇಶದ ಚಾಲನೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ನೀವು ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಆಕ್ಟಿವಾ ಇ' ಉತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants):

ಹೊಚ್ಚ ಹೊಸ 'ಹೋಂಡಾ ಆಕ್ಟಿವಾ ಇ' ಸ್ಕೂಟರ್, ಕೈಗೆಟುಕುವ ದರದಲ್ಲೂ ಲಭ್ಯವಿದೆ. ಕನಿಷ್ಠ ರೂ.1.18 ಲಕ್ಷ ಹಾಗೂ ಗರಿಷ್ಠ ರೂ.1.53 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆಕ್ಟಿವಾ ಇ (Standard Activa e) & ಆಕ್ಟಿವಾ ಇ ರೋಡ್‌ಸಿಂಕ್ (Activa e RoadSync) ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.

Honda Activa e Price Design Colours Range Features And All Details

ವಿನ್ಯಾಸ & ಬಣ್ಣಗಳು (Design & Colours):

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಸಿಂಗಲ್-ಪೀಸ್ ಸೀಟ್‌ನ್ನು ಹೊಂದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಲು 12-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಸೆರಿನಿಟಿ ಬ್ಲೂ ಹಾಗೂ ಮ್ಯಾಟ್ ಫಾಗಿ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಸುತ್ತಳತೆ (Dimensions):

ಈ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,854 ಮಿ.ಮೀ ಉದ್ದ, 700 ಮಿ.ಮೀ ಅಗಲ ಹಾಗೂ 1,125 ಮಿ.ಮೀ ಎತ್ತರವಿದೆ. 171 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,310 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 119 ಕೆಜಿ ತೂಕವಿದೆ.

Honda Activa e Price Design Colours Range Features And All Details

ಕಾರ್ಯಕ್ಷಮತೆ (Performance):

ನೂತನ 'ಹೋಂಡಾ ಆಕ್ಟಿವಾ ಇ' ಸ್ಕೂಟರ್, ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯವಿರುವ 2 ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಮೋಟಾರ್ 22 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ.

ವೈಶಿಷ್ಟ್ಯಗಳು (Features):

ಇದು 7.0-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಯುಎಸ್‌‍ಬಿ-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಹೆಚ್-ಸ್ಮಾರ್ಟ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇಕಾನ್, ಸ್ಟ್ಯಾಂಡರ್ಡ್ ಹಾಗೂ ಸ್ಪೋರ್ಟ್ ಎಂಬ 3 ಆಕರ್ಷಕವಾದ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 7.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

Honda Activa e Price Design Colours Range Features And All Details

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಈ ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಜೊತೆಗೆ ಸಿಬಿಎಸ್ (ಕಾಂಬಿ - ಬ್ರೇಕ್ ಸಿಸ್ಟಮ್), ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಒಟ್ಟಾರೆಯಾಗಿ ಹೊಸ 'ಹೋಂಡಾ ಆಕ್ಟಿವಾ ಇ' ತುಂಬಾ ಚೆನ್ನಾಗಿದೆ. ಆದರೆ, ಮಾರಾಟ ಸಂಖ್ಯೆ ಕುಸಿತದ ಹಿನ್ನೆಲೆ, 2025ರ ಜುಲೈ ತಿಂಗಳಲ್ಲೇ ಈ ಸ್ಕೂಟರ್‌ನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಬಹುತೇಕ ಸ್ಟಾಕ್ ಖಾಲಿಯಾಗುವವರೆಗೆ ಮಾರಾಟಗೊಳಿಸಬಹುದು ಎನ್ನಲಾಗಿದೆ.

More from DriveSpark

Article Published On: Saturday, March 14, 2026, 21:11 [IST]
English summary
Honda activa e price design colours range features and all details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+