Honda: ಅಬ್ಬರಿಸಿದ ಆಕ್ಟಿವಾ & ಶೈನ್.. ಹೋಂಡಾ ಬ್ರ್ಯಾಂಡ್ ಟೂ-ವೀಲರ್ಗಳಿಗಾಗಿ ಮುಗಿಬಿದ್ದ ಜನ.. ಫುಲ್ ಡಿಮ್ಯಾಂಡ್!
ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (Honda Motorcycle & Scooter India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿ ಬರೋಬ್ಬರಿ 5,67,351 ಯುನಿಟ್ ದ್ವಿಚಕ್ರ ವಾಹನಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 4,22,449 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 34% ಪ್ರಗತಿಯಾಗಿದೆ.
ಒಟ್ಟು ಮಾರಾಟದಲ್ಲಿ ದೇಶೀಯವಾಗಿ 5,13,190 ಯುನಿಟ್ ಹಾಗೂ ವಿದೇಶಕ್ಕೆ 54,161 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಹೋಂಡಾ ಕಂಪನಿಯು ಈ ಪರಿ ಪ್ರಮಾಣದಲ್ಲಿ ಬೆಳವಣಿಗೆ ಕಾಣಲು ಆಕ್ಟಿವಾ, ಶೈನ್ ಹಾಗೂ ಡಿಯೋ ಮಾಡೆಲ್‌ಗಳು ಬಹುಮುಖ್ಯ ಕಾರಣವಾಗಿವೆ.

ಹೋಂಡಾ ಆಕ್ಟಿವಾ 125 (Honda Activa 125):
ಇದು ಜನಪ್ರಿಯ ಸ್ಕೂಟರ್ ಆಗಿದ್ದು, ಅಗ್ಗದ ದರದಲ್ಲೂ ಲಭ್ಯವಿದೆ. ರೂ.88,339 ರಿಂದ ರೂ.94,096 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 123.92 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 47 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಟಿಎಫ್‌ಟಿ ಕನ್ಸೋಲ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಹೋಂಡಾ ಆಕ್ಟಿವಾ 110 (Honda Activa 110):
ಈ ಸ್ಕೂಟರ್‌ನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ರೂ.75,433 ರಿಂದ ರೂ.89,806 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 109.51 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 50 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ಶೈನ್ 100 (Honda Shine 100):
ಇದೊಂದು ಪ್ರಖ್ಯಾತ ಬೈಕ್ ಎಂದೇ ಹೆಸರುವಾಸಿಯಾಗಿದೆ. ಬಜೆಟ್ ದರದಲ್ಲೂ ಸಿಗುತ್ತದೆ. ರೂ.65,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 98.98 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX):
ಈ ಮೋಟಾರ್‌ಸೈಕಲ್‌ನ್ನು ಜನರು ಮೆಚ್ಚಿಕೊಂಡಿದ್ದಾರೆ. ರೂ.70,500 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 98.98 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 65 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ಶೈನ್ 125 (Honda Shine 125):
ಇದು ಪ್ರಮುಖ ಬೈಕ್ ಆಗಿ ಹೊರಹೊಮ್ಮಿದೆ. ರೂ.80,500 ರಿಂದ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 60 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 102 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಹೋಂಡಾ ಡಿಯೋ 110 (Honda Dio 110):
ಈ ಸ್ಕೂಟರ್‌ನ್ನು ಗ್ರಾಹಕರು ಇಷ್ಟಪಟ್ಟಿದ್ದಾರೆ. ರೂ.70,159 ರಿಂದ ರೂ.81,836 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 109.51 ಸಿಸಿ ಪೆಟ್ರೋಲ್ ಎಂಜಿನ್‌ನ್ನು ತನ್ನದಾಗಿಸಿಕೊಂಡಿದೆ. 50 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 83 ಕೆಎಂಪಿಎಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಚ್-ಸ್ಮಾರ್ಟ್ ಟೆಕ್ನಾಲಜಿ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಡಿಯೋ 125 (Honda Dio 125):
ಇದೊಂದು ವಿಶ್ವಾಸಾರ್ಹ ಸ್ಕೂಟರ್ ಆಗಿದೆ. ರೂ.91,502 ರಿಂದ ರೂ.96,452 ಬೆಲೆಯನ್ನು ಹೊಂದಿದೆ. 123.92 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 48 ಕಿ.ಮೀ ವರೆಗೆ ಮೈಲೇಜ್ ಮೈಲೇಜ್ ನೀಡುತ್ತದೆ. 95 ಕೆಎಂಪಿಎಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








