Ola: ಸ್ಕೂಟರ್ ಮಾಲೀಕರಿಗೆ ಫುಲ್ ಖುಷಿ: ರೂ. 10,000 ಉಳಿಸುವ ಆಫರ್ ಕೊಟ್ಟ ಓಲಾ

ಭಾರತದ ಐತಿಹಾಸಿಕ ಮೂರನೇ ಐಸಿಸಿ ಪುರುಷರ ಟಿ20 ವಿಶ್ವಕಪ್ (ICC Men's T20 World Cup) ವಿಜಯದ ಸ್ಮರಣಾರ್ಥ ಓಲಾ ಎಲೆಕ್ಟ್ರಿಕ್ ಇಂದು #ಚಾಂಪಿಯನ್ ಮಹೋತ್ಸವ (#ChampionMahotsav) ವನ್ನು ಘೋಷಿಸಿದೆ. ದೇಶಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿ, ಓಲಾ ಎಲೆಕ್ಟ್ರಿಕ್ (Ola Electric) ತನ್ನ ಎಲ್ಲಾ ವಾಹನಗಳ ಖರೀದಿಯ ಮೇಲೆ ರೂ. 10,000 ಮೌಲ್ಯದ ಪ್ರಯೋಜನಗಳನ್ನು ನೀಡುವುದಾಗಿ ಹೇಳಿದೆ. ಇದರಿಂದಾಗಿ ಹೆಚ್ಚಿನ ಗ್ರಾಹಕರು ಆಚರಣೆಯಲ್ಲಿ ಸೇರಲು ಸಾಧ್ಯವಾಗುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಓಲಾ ಚಾಂಪಿಯನ್ ಮಹೋತ್ಸವ ಆಚರಣೆಯ ಭಾಗವಾಗಿ, ಗ್ರಾಹಕರು ಮೂರು ದಿನಗಳವರೆಗೆ ಯಾವುದೇ ಓಲಾ ಸ್ಕೂಟರ್ ಅಥವಾ ರೋಡ್‌ಸ್ಟರ್ ಮೋಟಾರ್‌ಸೈಕಲ್‌ ಮೇಲೆ ರೂ. 10,000 ಪ್ರಯೋಜನಗಳನ್ನು ಪಡೆಯಬಹುದು. ವಿವರವಾಗಿ ಹೇಳುವುದಾದರೆ ಕಂಪನಿಯ ಯಾವುದೇ ವಾಹನ ಖರೀದಿಸಿ ಅದರ ಮೇಲೆ ಕಂಪನಿ ನೀಡುವ ವಿವಿಧ ಪ್ರಯೋಜನಗಳ ಮೂಲಕ ವಾಹನದ ಒಟ್ಟಾರೆ ಮೌಲ್ಯದಲ್ಲಿ ರೂ. 10,000 ಉಳಿಸಿಬಹುದು.

ola-electric-champion-mahotsav-with-benefits-worth-rs-10000

ಓಲಾ ಎಲೆಕ್ಟ್ರಿಕ್ ವಕ್ತಾರರು ಮಾತನಾಡಿ, "ಟಿ20 ವಿಶ್ವಕಪ್ ಫೈನಲ್ ಸಮಯದಲ್ಲಿ ನಮ್ಮ ಪಂದ್ಯ ಮಹೋತ್ಸವವು ದೇಶಾದ್ಯಂತ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ. ಭಾರತದ ಐತಿಹಾಸಿಕ ಮೂರನೇ ಟಿ20 ವಿಶ್ವಕಪ್ ವಿಜಯವನ್ನು ಆಚರಿಸಲು, ನಾವು #ಚಾಂಪಿಯನ್ ಮಹೋತ್ಸವದೊಂದಿಗೆ ಆಚರಣೆಯನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಿಸುತ್ತಿದ್ದೇವೆ, ಇದರ ಮೌಲ್ಯದ ಪ್ರಯೋಜನಗಳೊಂದಿಗೆ ಯಾವುದೇ ಓಲಾ ವಾಹನದ ಮೇಲೆ ರೂ. 10,000 ಉಳಿಸಬಹುದು" ಎಂದು ಹೇಳಿದ್ದಾರೆ.

ಓಲಾ ವಾಹನಗಳ ವಿವರ

ಓಲಾ ಎಲೆಕ್ಟ್ರಿಕ್ ಪ್ರಸ್ತುತ ಜೆನ್ 3 ಎಸ್ 1 ಸ್ಕೂಟರ್‌ಗಳು ಮತ್ತು ರೋಡ್‌ಸ್ಟರ್ ಎಕ್ಸ್ ಮೋಟಾರ್‌ಸೈಕಲ್‌ಗಳ ವಿಸ್ತಾರವಾದ ವಾಹನ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಪ್ರೀಮಿಯಂ S1 Gen 3 ಪೋರ್ಟ್‌ಫೋಲಿಯೊದಲ್ಲಿ 5.2kWh ಮತ್ತು 4kWh ಕಾನ್ಫಿಗರೇಶನ್‌ಗಳಲ್ಲಿ S1 Pro+ ಮತ್ತು 4kWh ಹಾಗೂ 3kWh ಕಾನ್ಫಿಗರೇಶನ್‌ಗಳಲ್ಲಿ S1 Pro ಕ್ರಮವಾಗಿ ರೂ. 1,85,338, ರೂ. 1,65,338, ರೂ. 1,39,999 ಮತ್ತು ರೂ. 1,19,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ola-electric-champion-mahotsav-with-benefits-worth-rs-10000

ಕಂಪನಿಯ ರೋಡ್‌ಸ್ಟರ್ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊದಲ್ಲಿ ಕ್ರಮವಾಗಿ ರೂ. 1,04,999, ರೂ. 1,84,999 ಬೆಲೆಯಲ್ಲಿ Roadster X+ ಮತ್ತು 4.1kWh ಕಾನ್ಫಿಗರೇಶನ್‌ಗಳಿವೆ. 2.5kWh, 3.5kWh, ಮತ್ತು 4.5kWh ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುವ ರೋಡ್‌ಸ್ಟರ್ X, ಕ್ರಮವಾಗಿ ರೂ. 74,999, ರೂ. 87,999 ಮತ್ತು ರೂ. 94,999 ಬೆಲೆಗೆ ಲಭ್ಯವಿದೆ.

ಕಂಪನಿಯ ಸಾಮೂಹಿಕ ಮಾರುಕಟ್ಟೆ ಕೊಡುಗೆಗಳಲ್ಲಿ ಕ್ರಮವಾಗಿ ರೂ. 1,14,999, ರೂ. 77,999, ರೂ. 93,999 ಮತ್ತು ರೂ. 1,09,999 ಬೆಲೆಯಲ್ಲಿ Gen 3 S1 X+ (4kWh) ಮತ್ತು Gen 3 S1 X (2kWh, 3kWh, ಮತ್ತು 4kWh) ಸೇರಿವೆ. ಇವುಗಳ ಮೇಲೆ ಈಗ ಮೂರು ದಿನಗಳ ಕಾಲ ಚಾಂಪಿಯನ್ ಮಹೋತ್ಸವದ ಅಡಿಯಲ್ಲಿ ರೂ. 10,000 ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು.

ola-electric-champion-mahotsav-with-benefits-worth-rs-10000

ಓಲಾ ಎಲೆಕ್ಟ್ರಿಕ್ ಬಗ್ಗೆ: ಇದು ಬ್ಯಾಟರಿ ಸೆಲ್‌ಗಳು ಸೇರಿದಂತೆ ಇವಿಗಳು ಮತ್ತು ಅವುಗಳ ಘಟಕಗಳಿಗೆ ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಕೆಲಸ ಮಾಡುತ್ತಿದೆ. ತಮಿಳುನಾಡಿನಲ್ಲಿರುವ ಓಲಾ ಫ್ಯೂಚರ್‌ಫ್ಯಾಕ್ಟರಿ, ಭಾರತದ ದೊಡ್ಡ ಇವಿ ಹಬ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಸೆಲ್ ಮತ್ತು ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮೀಸಲಾಗಿರುವ ಓಲಾದ ಬೆಂಗಳೂರು ಮೂಲದ ಬ್ಯಾಟರಿ ಇನ್ನೋವೇಶನ್ ಸೆಂಟರ್ (ಬಿಐಸಿ) ನಿಂದ ಬೆಂಬಲಿತವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಓಲಾ ಎಲೆಕ್ಟ್ರಿಕ್ ರೂ.10,000 ಮೌಲ್ಯದ ಪ್ರಯೋಜನಗಳೊಂದಿಗೆ ಓಲಾ ಪೋರ್ಟ್‌ಫೋಲಿಯೊದಲ್ಲಿ ಚಾಂಪಿಯನ್ ಮಹೋತ್ಸವವನ್ನು ಪ್ರಾರಂಭಿಸಿರುವುದೆ. ಈಗ ಗ್ರಾಹಕರು ಮೂರು ದಿನಗಳವರೆಗೆ ಯಾವುದೇ ಓಲಾ ವಾಹನದ ಮೇಲೆ ರೂ. 10,000 ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಪ್ರಸ್ತುತ ಕಂಪನಿ ಎದುರಿಸುತ್ತಿರುವ ಟೀಕೆಗಳ ನಡುವೆ ನೀವು ಓಲಾವನ್ನು ಖರೀದಿಸುತ್ತೀರಾ? ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Tuesday, March 10, 2026, 10:20 [IST]
English summary
Ola electric champion mahotsav with benefits worth rs 10000
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+