ಮಾರುತಿ ಕಾರಿನ ಬೆಲೆಯಲ್ಲಿ ಪ್ರೀಮಿಯಂ ಸ್ಕೋಡಾ ಕಾರು: ಯಾವುದು ಬೆಸ್ಟ್?

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಭಾರೀ ಬೇಡಿಕೆ ಇದೆ, ಸುರಕ್ಷತೆ ಕಡಿಮೆ ಇದ್ದರೂ ಸರ್ವಿಸ್ ಹಾಗೂ ಸೇವಾ ಬೆಂಬಲಕ್ಕೆ ಭಾರೀ ಜನಪ್ರಿಯತೆ ಪಡೆದಿವೆ. ಉತ್ತಮ ಫೀಚರ್ಸ್, ಅತ್ಯುತ್ತಮ ಮೈಲೇಜ್‌ನಿಂದಾಗಿ ಪ್ರತಿಸ್ಪರ್ಧಿ ಕಾರುಗಳಿಗೆ ಸಖತ್ ಪೈಪೋಟಿ ನೀಡುತ್ತವೆ. ಆದ್ರೆ ಈಗ ಎಲ್ಲವೂ ಬದಲಾಗಿದೆ, ಪ್ರೀಮಿಯಂ ಬ್ರಾಂಡ್‌ಗಳು ಕೂಡ ಕಡಿಮೆ ಬೆಲೆಗೆ ತಮ್ಮ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇತ್ತೀಚೆಗೆ ಸ್ಕೋಡಾ ತನ್ನ ಅಗ್ಗದ ಬೆಲೆಯ ಕೈಲಾಕ್ (Skoda Kylaq)ಎಂಬ ಹೊಸ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಕಾರು ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx)ಗೆ ಪೈಪೋಟಿ ನೀಡಲಿದ್ದು, ಎರಡೂ ಕಾರುಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ನೋಡೋಣ.

ಬೆಲೆ: ಮಾರುತಿ ಫ್ರಾಂಕ್ಸ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 7.52 ಲಕ್ಷದಿಂದ ರೂ. 13.04 ಲಕ್ಷಗಳಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾಗಿದೆ. ಇದರ ಟಾಪ್‌ ವೇರಿಯೆಂಟ್ ಬೆಲೆ ಬಹಿರಂಗವಾಗಿಲ್ಲ. ಎರಡೂ ಕಾರುಗಳು ಬಹುತೇಕ ಒಂದೇ ಆರಂಭಿಕ ಬೆಲೆಯನ್ನು ಹೊಂದಿದ್ದು, ಸ್ಪರ್ಧಾತ್ಮಕ ಬೆಲೆಗಳನ್ನು ಹೊಂದಿವೆ.

skoda-kylaq-vs-maruti-suzuki-fronx-price-features-engine-comparison

ಸ್ಕೋಡಾ ಕೈಲಾಕ್ ಫೀಚರ್ಸ್: ಇದು ನವೀಕರಿಸಿದ OS, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದ ಸೀಟ್ ವೆಂಟಿಲೇಶನ್, ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.

ಮಾರುತಿ ಫ್ರಾಂಕ್ಸ್ ಫೀಚರ್ಸ್: ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 9-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ಹೊಂದಿದೆ. ಸುರಕ್ಷತೆಗಾಗಿ ಆರು ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ಹಿಲ್-ಹೋಲ್ಡ್ ಅಸಿಸ್ಟ್ 360 ಡಿಗ್ರಿ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳನ್ನು ನೀಡಲಾಗಿದೆ.

skoda-kylaq-vs-maruti-suzuki-fronx-price-features-engine-comparison

ಫ್ರಾಂಕ್ಸ್ ಎಂಜಿನ್: ಮಾರುತಿ ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ, 1.2-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಇನ್ನೊಂದು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುವ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಕಾರು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿದೆ. ಸಿಎನ್‌ಜಿಯು 1.2-ಲೀಟರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿವೆ.

ಸ್ಕೋಡಾ ಕೈಲಾಕ್ ಎಂಜಿನ್: ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ನೋಡುವ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ ಅನ್ನು ಕೈಲಾಕ್ ಎಸ್‌ಯುವಿನಲ್ಲಿ ಬಳಸಲಾಗಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಎರಡೂ ಕಾರುಗಳು ತಮ್ಮದೇ ಆದ ಆಕರ್ಷಕ ಡಿಸೈನ್, ಫೀಚರ್ಸ್ ಹಾಗೂ ಎಂಜಿನ್ ಪರ್ಫಾಮೆನ್ಸ್ ಅನ್ನು ಹೊಂದಿವೆ. ಇದೀಗ ಹೊರಬಂದಿರುವ ಸ್ಕೋಡಾ ಕೈಲಾಕ್ ಕೂಡ ಮಾರುತಿ ಸುಜುಕಿ ಫ್ರಾಂಕ್ಸ್‌ನಂತೆ ಅಗ್ಗದ ಬೆಲೆಗೆ ಬಿಡುಗಡೆಯಾಗಿದೆ. ಈ ಕಾರಿಗೆ ಬುಕಿಂಗ್‌ಗಳು ಕೂಡ ಜೋರಾಗಿ ನಡೆಯುತ್ತಿವೆ. ಈ ಎರಡೂ ಕಾರುಗಳ ನಡುವಿನ ವ್ಯತ್ಯಾಸಗಳ ಕುರಿತು ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 13, 2024, 16:40 [IST]
English summary
Skoda kylaq vs maruti suzuki fronx price features engine comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+