ಹಣ ಉಳಿಸಲು ಸಿಎನ್‌ಜಿ ಕಾರುಗಳನ್ನು ಖರೀದಿಸಿ: ಹೆಚ್ಚು ಮೈಲೇಜ್ ನೀಡುವ ಬೆಸ್ಟ್ ಕಾರುಗಳು

ಸಿಎನ್‌ಜಿ(Compressed Natural Gas) ಯಲ್ಲಿ ಚಲಿಸುವ ವಾಹನಗಳು ಇಂಧನ ಚಾಲಿತ ವಾಹನಗಳಿಗಿಂತ ಅನೇಕ ರೀತಿಯಲ್ಲಿ ಉತ್ತಮವಾಗಿವೆ. ಅಂದರೇ ಮೈಲೇಜ್ ಆಗಿರಲಿ ಪರಿಸರಕ್ಕೆ ಹಾನಿ ಮಾಡುವುದಾಗಿರಲಿ ಇಂಧನ ಚಾಲಿತ ವಾಹನಗಳಿಗಿಂತ ಬೆಸ್ಟ್ ಎಂದು ಹೇಳಬಹುದು. ಸದ್ಯ ಭಾರತದಲ್ಲಿ ಹೆಚ್ಚಿನ ಪೆಟ್ರೋಲ್ ಬೆಲೆಯೊಂದಿಗೆ, ಇಂಧನ ವೆಚ್ಚವನ್ನು ಉಳಿಸಲು ಅನೇಕ ವ್ಯಕ್ತಿಗಳು ಅತ್ಯುತ್ತಮ ಮೈಲೇಜ್ ನೀಡುವ ವಾಹನಗಳನ್ನು ಹುಡುಕುತ್ತಿದ್ದಾರೆ. ಇಂಧನ ವೆಚ್ಚವನ್ನು ಅದಷ್ಟು ಕಡಿಮೆ ಮಾಡಲು ಜನರ ಪ್ರಯತ್ನಿಸುತ್ತಿದ್ದಾರೆ. ಸದ್ಯ, ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳಿಗಿಂತ ಸಿಎನ್‌ಜಿ ಕಾರುಗಳು ಹೆಚ್ಚು ಜನಪ್ರಿಯವಾಗಿವೆ.

ಆದರೆ ಕೆಲವು ಸಿಎನ್‌ಜಿ ಕಾರುಗಳು (CNG Cars) ಕಡಿಮೆ ಇಂಧನ ವೆಚ್ಚದಲ್ಲಿ ಹೆಚ್ಚಿನ ಮೈಲೇಜ್ ನೀಡುವುದು ಮಾತ್ರವಲ್ಲದೆ ಗಮನಾರ್ಹ ಪ್ರಮಾಣದ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಚ್ಚುವರಿಯಾಗಿ, ಸಿಎನ್‌ಜಿ ಕಾರುಗಳು ಕಡಿಮೆ ಮಾಲಿನ್ಯವನ್ನು ಹೊಂದಿವೆ. ಹಾಗಾದರೆ, ಭಾರತದಲ್ಲಿ 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 ಸಿಎನ್‌ಜಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

CNG Cars

ಮಾರುತಿ ಸುಜುಕಿ ವ್ಯಾಗನ್ಆರ್: ಈ ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ರೂಪಾಂತರದಲ್ಲಿ ಲಭ್ಯವಿದೆ. ಇದು ಪೆಟ್ರೋಲ್ ಮೋಡ್‌ನಲ್ಲಿ 65 bhp ಪವರ್ ಮತ್ತು 89Nm ಟಾರ್ಕ್ ಮತ್ತು CNG ಮೋಡ್‌ನಲ್ಲಿ 56bhp ಮತ್ತು 82.1Nm ಟಾರ್ಕ್ ಅನ್ನು ಉತ್ಪಾದಿಸುವ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ.

ಈ ಕಾರಿನಲ್ಲಿ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಪ್ರತಿ ಕೆಜಿ ಸಿಎನ್‌ಜಿಗೆ 34.04 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಮತ್ತು ಇದರ ಬೆಲೆಯು 6.44 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿದೆ. ಈ ಕಾರು ಅದರ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಮೈಲೇಜ್‌ನಿಂದಾಗಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಿಎನ್‌ಜಿ ಕಾರುಗಳಲ್ಲಿ ಒಂದಾಗಿದೆ.

CNG Cars

ಮಾರುತಿ ಸುಜುಕಿ ಆಲ್ಟೊ ಈ ಕೆ10: ಈ ಮಾರುತಿ ಆಲ್ಟೊ ಕೆ10 ಮಾರುತಿಯ ಮತ್ತೊಂದು ಜನಪ್ರಿಯ ಸಿಎನ್‌ಜಿ ರೂಪಾಂತರವಾಗಿದೆ. ಈ ಸಣ್ಣ ಹ್ಯಾಚ್‌ಬ್ಯಾಕ್ ನಿರ್ವಹಿಸಲು ಸುಲಭ ಮತ್ತು ಕೈಗೆಟುಕುವ ಬೆಲೆಯಲ್ಲಿದೆ, ಇದು ಅನೇಕ ಜನರಲ್ಲಿ ನೆಚ್ಚಿನದಾಗಿದೆ. ಕಾರು 1.0-ಲೀಟರ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಪ್ರತಿ ಕೆಜಿ ಸಿಎನ್‌ಜಿಗೆ 33 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಕಾರಿನ ಆರಂಭಿಕ ಬೆಲೆ ರೂ 5.96 ಲಕ್ಷ (ಎಕ್ಸ್ ಶೋ ರೂಂ) ಆಗಿದೆ.

ಟಾಟಾ ಟಿಯಾಗೊ: ಟಾಟಾ ಟಿಯಾಗೊ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಪೆಟ್ರೋಲ್‌ನಲ್ಲಿ 84bhp ಮತ್ತು 113Nm ಟಾರ್ಕ್ ಅನ್ನು ನೀಡುತ್ತದೆ ಮತ್ತು CNG ಮೋಡ್‌ನಲ್ಲಿ 83 bhp ಮತ್ತು 95Nm ಟಾರ್ಕ್ ಅನ್ನು ನೀಡುತ್ತದೆ. ಈ ಕಾರಿನ ಸಿಎನ್‌ಜಿ ರೂಪಾಂತರವು 8.29 ಲಕ್ಷ ರೂ. (ಎಕ್ಸ್ ಶೋರೂಂ) ಮತ್ತು ಪ್ರತಿ ಕೆಜಿ ಸಿಎನ್‌ಜಿಗೆ 26.47 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

CNG Cars

ಮಾರುತಿ ಸುಜುಕಿ ಎಸ್-ಪ್ರೆಸ್ಸೊ: ಈ ಮಾರುತಿ ಎಸ್-ಪ್ರೆಸ್ಸೊ ಸಿಎನ್‌ಜಿ ರೂಪಾಂತರದಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಪೆಟ್ರೋಲ್ ಮೋಡ್‌ನಲ್ಲಿ 65 ಬಿಹೆಚ್‌ಪಿ ಮತ್ತು 89 ಎನ್ಎಂ ಟಾರ್ಕ್ ಮತ್ತು ಸಿಎನ್‌ಜಿ ಮೋಡ್‌ನಲ್ಲಿ 56 ಬಿಹೆಚ್‌ಪಿ ಮತ್ತು 82.1 ಎನ್ಎಂ ಟಾರ್ಕ್ ನೀಡುತ್ತದೆ. ಈ ಕಾರಿನ ಬೆಲೆಯು ರೂ 6.24 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ). ಇದು ಪ್ರತಿ ಕೆಜಿ ಸಿಎನ್‌ಜಿಗೆ 32.12 ಕಿ.ಮೀ ಮೈಲೇಜ್ ನೀಡುತ್ತದೆ.

ಹುಂಡೈ ಗ್ರ್ಯಾಂಡ್ ಐ10 ನಿಯೋಸ್: ಈ ಹುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ ರೂಪಾಂತರದಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ, ಅದು ಸಿಎನ್‌ಜಿಯಲ್ಲಿ 68ಬಿಹೆಚ್‌ಪಿ ಮತ್ತು 95ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಪೆಟ್ರೋಲ್ ಮಾದರಿಯಲ್ಲಿ ಈ ಎಂಜಿನ್ 83ಬಿಎಚ್‌ಪಿ ಮತ್ತು 114ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸಿಎನ್‌ಜಿ ಬೆಲೆಗಳು ರೂ 7.72 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋರೂಂ) ಆಗಿದೆ. ಇದು 25.61 ಕಿ.ಮೀ ಮೈಲೇಜ್ ನೀಡುತ್ತದೆ.

More from DriveSpark

Article Published On: Monday, July 15, 2024, 13:53 [IST]
English summary
Top cng cars in india under 10 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+