ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ನಟ ಕಿಚ್ಚ ಸುದೀಪ್‌ಗೆ ನಟನೆಯಲ್ಲಿ ಅಷ್ಟೇ ಅಲ್ಲದೇ ಕಾರುಗಳ ಬಗ್ಗೆಯು ಎಲ್ಲಿಲ್ಲದ ಕ್ರೇಜ್ ಹೊಂದಿದ್ದಾರೆ. ಈಗಾಗಲೇ ಹಲವಾರು ದುಬಾರಿ ಕಾರುಗಳನ್ನು ಹೊಂದಿರುವ ಸುದೀಪ್ ಇದೀಗ ಮತ್ತೊಂದು ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

By Praveen Sannamani

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ನಟನಾ ಶೈಲಿಯೊಂದಿಗೆ ಮಾಸ್ ಆ್ಯಂಡ್ ಕ್ಲಾಸ್ ಅಭಿಮಾನಿಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್‌ಗೆ ನಟನೆಯಲ್ಲಿ ಅಷ್ಟೇ ಅಲ್ಲದೇ ಕಾರುಗಳ ಬಗ್ಗೆಯು ಎಲ್ಲಿಲ್ಲದ ಕ್ರೇಜ್ ಹೊಂದಿದ್ದಾರೆ. ಈಗಾಗಲೇ ಹಲವಾರು ದುಬಾರಿ ಕಾರುಗಳನ್ನು ಹೊಂದಿರುವ ಸುದೀಪ್ ಇದೀಗ ಮತ್ತೊಂದು ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ದುಬಾರಿ ಬೆಲೆಯ ಕಾರುಗಳು ಮತ್ತು ಬೈಕ್‌ಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ನಟ ಕಿಚ್ಚ ಸುದೀಪ್‌ ಅವರು ಮೊನ್ನೆಯಷ್ಟೇ ಹೊಸದೊಂದು ಜೀಪ್ ಕಂಪಾಸ್ ಖರೀದಿಸಿದ್ದಾರೆ. ಆದರೆ ಈ ಕಾರು ಅವರ ಸ್ವಂತ ಬಳಕೆಗೆ ಅಲ್ಲ ಅನ್ನೊದೇ ಮುಖ್ಯ ವಿಚಾರ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಅಂದಹಾಗೆ ಜೀಪ್ ಕಂಪಾಸ್ ಕಾರನ್ನು ಸುದೀಪ್ ಖರೀದಿಸಿದ್ದು ಅಕ್ಕ ಸುಜಾತ ಸಂಜೀವ್ ಅವರ ಮಗಳು ಶ್ರೇಯಾ ಹುಟ್ಟುಹಬ್ಬಕ್ಕಾಗಿ ಅಂತೆ. ಹೌದು, ಶ್ರೇಯಾ ಅವರಿಗೆ ಮಾವ ಸುದೀಪ್ ಅವರಿಂದ ಕಪ್ಪು ಬಣ್ಣದ ಜೀಪ್ ಕಂಪಾಸ್ ಉಡುಗೊರೆಯಾಗಿ ಸಿಕ್ಕಿದೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಬೆಂಗಳೂರು ಯಶವಂತಪುರದಲ್ಲಿ ಕೆಎಚ್‌ಟಿ ಜೀಪ್ ಡೀಲರ್‌ಶಿಪ್ ಶೋ ರೂಂನಲ್ಲಿ ಕಪ್ಪು ಬಣ್ಣದ ಈ ಎಸ್‍ಯುವಿ ಖರೀದಿಸಿದ್ದು, ಜೀಪ್ ಕಾಂಪಾಸ್ ಎಸ್‌ಯುವಿ ಕಾರಿನ ಬೆಲೆಯು ವಿವಿಧ ಮಾದರಿಗಳಿಗೆ ಅನುಗುಣವಾಗಿ 16 ಲಕ್ಷದಿಂದ 22 ಲಕ್ಷದ ತನಕ ಇದೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳನ್ನು ಪಡೆದುಕೊಂಡಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಇನ್ನು ಶ್ರೇಯಾ ಅವರು ಸುದೀಪ್ ನೀಡಿರುವ ಗಿಫ್ಟ್ ನೋಡಿ ಫುಲ್ ಖಷ್ ಆಗಿದ್ದಾರೆ. ನಾನು ಕೂಡಾ ಸುದೀಪ್ ಅಭಿಮಾನಿ. ಅವರು ಕೊಟ್ಟಿರುವ ಉಡುಗೊರೆ ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಎಂದಿರುವ ಶ್ರೇಯಾ, ಮಾವನ ಪ್ರೀತಿಗೆ ಬಿಗ್ ಥ್ಯಾಂಕ್ಸ್ ಹೇಳಿದ್ದಾರೆ.

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಇದೇ ವೇಳೆ ಕೆಎಚ್‌ಟಿ ಜೀಪ್ ಡೀಲರ್‌ಶಿಪ್ ಶೋ ರೂಂನಲ್ಲೇ ಕೇಕ್ ಕತ್ತರಿಸಿ ಬರ್ತಡೇ ವಿಶ್ ಮಾಡಿದ ಸುದೀಪ್, ತಮ್ಮ ನೆಚ್ಚಿನ ಜೀಪ್ ಕಾರುಗಳ ಬಗ್ಗೆಯು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲೇ ಮತ್ತೊಂದು ಹೊಸ ಕಾರು ಖರೀದಿಗೆ ಎದುರು ನೋಡುತ್ತಿದ್ದಾರೆ.

Picture credit: KHT Prime

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಸುಮಾರು 70 ಲಕ್ಷ ಬೆಲೆಯ ಜೀಪ್ ರ‍್ಯಾಂಗ್ಲರ್ ಅನ್ನು ವೀಕ್ಷಿಸಿದ ಸುದೀಪ್, ಹೊಸ ಕಾರಿನ ಎಂಜಿನ್ ಮತ್ತು ಬೆಲೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಸುದೀಪ್ ನೆಕ್ಸ್ಟ್ ಕಾರು ಯಾವುದು ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

ಗ್ಲೋಬಲ್ ಎನ್‌ಸಿಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜೀಪ್ ಕಂಪಾಸ್‌ಗೆ 5 ಸ್ಟಾರ್ ರೇಟಿಂಗ್..!!

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ- ಬೆಲೆ ಎಷ್ಟು ಗೊತ್ತಾ?

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

More from DriveSpark

Article Published On: Friday, March 23, 2018, 16:38 [IST]
English summary
Actor Kiccha Sudeep has given jeep compass car his niece Shreya for birthday gift.
Read more on sudeep jeep celebrity car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+