ಹ್ಯೊಸಂಗ್ ಬೈಕ್ ಖರೀದಿಸಿದ ಕಿಚ್ಚ ಸುದೀಪ್
ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಧೂಳೆಬ್ಬಿಸಿರುತ್ತಿರುವ ಕರ್ನಾಟಕದ ಹೆಮ್ಮೆಯ ಕಿಚ್ಚ ಸುದೀಪ್‍ಗೆ ಡ್ರೈವ್ ಸ್ಪಾರ್ಕ್ ಹಾಗೂ ನಮ್ಮೆಲ್ಲರ ಓದುಗರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.
ನಿಮಗಿದು ಗೊತ್ತೇ ? 'ಈಗ' ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಸುದೀಪ್ ಎರಡು ವರ್ಷಗಳ ಹಿಂದೆ ಕ್ರೂಸರ್ ಬೈಕ್ ವೊಂದನ್ನು ಖರೀದಿಸಿದ್ದರು. ಅದು ಅಂತಿಥ ಬೈಕ್ ಅಲ್ಲ. ಸರಿ ಸುಮಾರು ಆರು ಲಕ್ಷ ಮೌಲ್ಯದ 'ಹ್ಯೊಸಂಗ್ ಎಸ್‌ಟಿ 7 ಸೂಪರ್ ಬೈಕ್'. ಬೆಂಗಳೂರಿನ ಡಿಎಸ್‌ಕೆ ಮೋಟಾರ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕೊರಿಯಾದ ಈ ಅತಿ ನೂತನ ಬೈಕ್‌ನ ಅನಾವರಣ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನಟ ಚಿರಂಜೀವ್ ಸರ್ಜಾ ಕೂಡಾ ಉಪಸ್ಥಿತರಿದ್ದರು. ಹಾಗಿದ್ದರೆ ಬನ್ನಿ ಹ್ಯೊಸಂಗ್ ಎಸ್‌ಟಿ7 ಬೈಕ್‌ನ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.

ಹ್ಯೊಸಂಗ್ ಜಿಟಿ7 ಬೈಕ್‌ನಲ್ಲಿ ಫೋಸ್ ಕೊಡುತ್ತಿರುವ ನಟ ಸುದೀಪ್ ಹಾಗೂ ಚಿರಂಜೀವಿ ಸರ್ಜಾ.

ರಾಜ್ಯದ ಬೈಕ್ ಪ್ರೇಮಿಗಳು ನಿರೀಕ್ಷಿಸುತ್ತಿದ್ದ ಬಿಗ್ ಬೈಕ್ ಹ್ಯೊಸಂಗ್ ಜಿಟಿ7 ಬೈಕ್ ರಾಜ್ಯದ ರಸ್ತೆಗೆ ಆಗಮಿಸಿದೆ.

ದೇಶದಲ್ಲಿ ಹರ್ಲಿ ಡೇವಿಡ್ಸನ್ ಸೂಪರ್ ಬೈಕ್‌ಗಳಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿರುವ ಕೊರಿಯಾ ಮೂಲದ ಹ್ಯೊಸಂಗ್ ಕಂಪನಿ ದೇಶದ ಮಾರುಕಟ್ಟೆಗೆ ಹ್ಯೊಸಂಗ್ ಎಸ್‌ಟಿ7 ಬೈಕ್ ಪರಿಚಯಿಸಿತ್ತು.

ಹ್ಯೊಸಂಗ್ ಎಸ್‌ಟಿ 7 ಬೈಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದ್ದು, 678 ಸಿಸಿ ವಿ-ಟ್ವಿನ್ ಎಂಜಿನ್ ಪ್ರಯೋಗಿಸಲಾಗಿದೆ.

ಸ್ಟ್ರೀಟ್ ಕ್ರೂಸರ್ ಹಾಗೂ ಕಮ್ಯೂಟರ್ ವಿಭಾಗಕ್ಕೆ ಸೇರಿರುವ ಈ ಬೈಕ್ ಒಂದೇ ನೋಟದಲ್ಲಿ ಬೆರಗಾಗಿಸುವಂತಹ ಲುಕ್ ಹೊಂದಿದೆ. ಇದರ ಭಾರವು 244 ಕಿಲೋ ಗ್ರಾಂ ಆಗಿದ್ದರೂ ಚಾಲನೆಯ ಸಂದರ್ಭದಲ್ಲಿ ಭಾರದ ಅನುಭವವಾಗುವುದಿಲ್ಲ.

5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಹ್ಯೊಸಂಗ್ ಎಸ್‌ಟಿ 7 ಬೈಕ್ 6.5 ಸೆಕೆಂಡುಗಳಲ್ಲಿ 100 ಕೀ.ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ.

ಉತ್ತಮ ನಿರ್ವಹಣೆ ಹಾಗೂ ಆಕರ್ಷಕ ವಿನ್ಯಾಸಕ್ಕೆ ಹ್ಯೊಸಂಗ್ ಹೆಸರುವಾಸಿಯಾಗಿದೆ. ಸಿಟ್ಟಿಂಗ್ ವ್ಯವಸ್ಥೆ ಕೂಡಾ ಗ್ರಾಹಕರ ಮನಮೆಚ್ಚುಗೆಗೆ ಕಾರಣವಾಗಿದೆ.

ವೈಶಿಷ್ಟ್ಯಗಳು
ಎಂಜಿನ್: 678 ಸಿಸಿ, 4-ಸ್ಟ್ರೋಕ್, ಡಿಒಎಚ್‌ಸಿ, 8 ವಾಲ್ವೆ, 90 ಡಿಗ್ರಿ ವಿ-ಟ್ವಿನ್, ಲಿಕ್ವಿಡ್ ಕೂಲ್ಡ್
ಪವರ್: 57.66 ಬಿಎಚ್‌ಪಿ @ 8000 ಆರ್ಎಂಪಿ
ಟರ್ಕ್ಯೂ: 57 ಎನ್‌ಎಂ @ 6000 ಆರ್‌ಎಂಪಿ
ಟ್ರಾನ್ಸ್‌ಮಿಷನ್: 5 ಸ್ಪೀಡ್ ಮ್ಯಾನುವಲ್

ಗರಿಷ್ಠ ವೇಗ: 180 kmph
0-100 kmph: 6.5 ಸೆಕೆಂಡು
ಇಂಧನ ಕ್ಷಮತೆ: 17-18 kmpl (ನಗರ ಪ್ರದೇಶ), 20-22 kmpl (ಹೈವೇ)
ಫ್ಯೂಯಲ್ ಟೈಪ್: ಪೆಟ್ರೋಲ್
ಸಸ್ಪೆಷನ್: 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ (ಫ್ರಂಟ್), ಹೈಡ್ರಾಲಿಕ್ ಡಬಲ್ ಶಾಕ್ ಅಬ್ಸೊರ್ಬರ್ (ರಿಯರ್)

ಎತ್ತರ: 1135 ಎಂಎಂ
ಅಗಲ: 960 ಎಂಎಂ
ಒಟ್ಟು ಉದ್ದ: 2470 ಎಂಎಂ
ಗ್ರೌಂಡ್ ಕ್ಲಿಯರನ್ಸ್: 155 ಎಂಎಂ
ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ: 17 ಲೀಟರ್
ಕರ್ಬ್ ಭಾರ: 244 ಕೆ.ಜಿ.


Click it and Unblock the Notifications








