ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಅಲ್ಲಿ ಕಾನೂನು ಬಾಹಿರವಾಗಿ ಏನೇ ಮಾಡಿದ್ರು ಅದಕ್ಕೆ ತಕ್ಕ ಶಾಸ್ತಿ ಆಗಿಯೇ ಬಿಡುತ್ತೆ. ಹೀಗೆ ಇಲ್ಲೊಬ್ಬ ಕಾನೂನು ಬಾಹಿರವಾಗಿ ಕೋರ್ಟ್ ಎದರು ಪಾರ್ಕ್ ಮಾಡಿದ ತಪ್ಪಿಗೆ ಸುಮಾರು 4 ಕೋಟಿ ರೂಪಾಯಿ ಕಾರನ್ನು ಕಳೆದುಕೊಂಡಿದ್ದಾನೆ.

By Praveen Sannamani

ಕೆಲ ದೇಶಗಳಲ್ಲಿನ ಕಾನೂನುಗಳೇ ಹಾಗೆ. ಅಲ್ಲಿ ಕಾನೂನು ಬಾಹಿರವಾಗಿ ಏನೇ ಮಾಡಿದ್ರು ಅದಕ್ಕೆ ತಕ್ಕ ಶಾಸ್ತಿ ಆಗಿಯೇ ಬಿಡುತ್ತೆ. ಹೀಗೆ ಇಲ್ಲೊಬ್ಬ ಕಾನೂನು ಬಾಹಿರವಾಗಿ ಕೋರ್ಟ್ ಎದರು ಪಾರ್ಕ್ ಮಾಡಿದ ತಪ್ಪಿಗೆ ಸುಮಾರು 4 ಕೋಟಿ ರೂಪಾಯಿ ಕಾರನ್ನು ಕಳೆದುಕೊಂಡಿದ್ದಾನೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಅಂದಹಾಗೆ ಈ ಘಟನೆ ನಡೆದಿರುವುದು ಇಂಗ್ಲೆಂಡಿನ ಡಾರ್ಟ್‌ಫೋರ್ಡ್‌ನಲ್ಲಿ. ಕಾರು ಮಾಲೀಕನಾದ ಬಿಲೇನಿಯರ್ ಝಹೀದ್ ಖಾನ್ ಎಂಬಾತ ಕೋರ್ಟ್‌ಗೆ ಸಂಬಂಧಿತ ಕೆಲಸಕ್ಕಾಗಿ ಬಂದಿದ್ದ. ಈ ವೇಳೆ ಕಾನೂನು ಬಾಹಿರವಾಗಿ ಕೋರ್ಟ್ ಆವರಣದಲ್ಲೇ ಪಾರ್ಕಿಂಗ್ ಮಾಡಿದ್ದನಂತೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಕಾರು ಪಾರ್ಕ್ ಮಾಡಿ ಹೋದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು. ವೈಟ್ ಪರ್ಲ್ ಬಣ್ಣದ ಫೆರಾರಿ 458 ಸ್ಪೈಡರ್ ಕಾರನ್ನು ಎತ್ತಾಕೊಂಡು ಹೋಗಿದ್ದಲ್ಲೇ ಕಾರಿಗೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಈ ವೇಳೆ ಕಾರಿಗೆ ಸಂಬಂಧಿತ ದಾಖಲೆಗಳು ಸರಿ ಇಲ್ಲದ ಹಿನ್ನೆಲೆ ಈ ಕಾರನ್ನು ಯಾರೋ ಕದ್ದು ಇಲ್ಲಿ ಬಿಟ್ಟು ಹೋಗಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಫೆರಾರಿ ಕಾರು ಕೂಡಾ ಕೆಲ ಕಡೆ ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕೂಡಾ ಪತ್ತೆಯಾಗಿದೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಹೀಗಿದ್ದಾಗ ಕಾರಿನ ವಿಮೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಕಾರಿಗೆ ವಿಮೆಯೂ ಇಲ್ಲದಿರುವುದನ್ನು ಕಂಡು ಒಂದು ತೀರ್ಮಾನ ಬಂದೇ ಬಿಟ್ರು. ಸಿದಾ ಗುಜುರಿ ಸೇಂಟರ್‌ಗೆ ತೆಗೆದುಕೊಂಡು ಹೋಗಿ 4 ಕೋಟಿ ರೂಪಾಯಿ ಮೌಲ್ಯದ ಫೆರಾರಿ ಕಾರನ್ನು ಜೆಸಿಬಿ ಮೂಲಕ ಸ್ಕ್ರ್ಯಾಪ್ ಮಾಡಿದ್ದಾರೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಈ ವೇಳೆಗಾಗಲೇ ಕೋರ್ಟ್‌ನಿಂದ ಹೊರಬಂದ ಕಾರು ಮಾಲೀಕ ಝಹೀದ್ ಖಾನ್‌ಗೆ ಫುಲ್ ಶಾಕ್. ಯಾಕೆಂದ್ರೆ ಕೆಲ ಗಂಟೆಗಳ ಹಿಂದಯಷ್ಟೇ ಪಾರ್ಕ್ ಮಾಡಿ ಹೋಗಿದ್ದ ಝಹೀದ್ ಖಾನ್‌ ಕಾರು ಗುಜುರಿ ಸೇಂಟರ್ ಪೀಸ್ ಪೀಸ್ ಆಗಿರುವುದನ್ನು ಕಂಡು ಕಂಗಾಲಾಗಿದ್ದಾನೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಯಾಕೆ ಸರ್, ನನ್ನ ಸೂಪರ್ ಕಾರ್ ಅನ್ನು ಹೀಗ್ಯಾಕೆ ಮಾಡಿದ್ದೀರಿ ಅಂತಾ ಕೇಳಿದಾಗ ಪೊಲೀಸರು ಖಡರ್ ಉತ್ತರವನ್ನೇ ನೀಡಿದ್ದಾರೆ. ನಿಮ್ಮ ಕಾರು ಅಪಘಾತ ಪ್ರಕರಣಗಳಲ್ಲಿ ಸಿಲುಕಿದೆ. ಜೊತೆಗೆ ನಿಮ್ಮ ಕಾರಿಗೆ ವಿಮೆ ಇಲ್ಲಾ. ಹೀಗಾಗಿ ನಿಮ್ಮ ಕಾರು ರಸ್ತೆ ಮೇಲೆ ಓಡಾಡಲು ಯೋಗ್ಯವಲ್ಲ. ಅದಕ್ಕೆ ಜೆಸಿಬಿ ಮೂಲಕ ಸ್ಕ್ರ್ಯಾಪ್ ಮಾಡಲಾಗಿದೆ ಎಂದಿದ್ದಾರೆ.

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಆದ್ರೆ ಝಹೀರ್ ಖಾನ್ ಇದನ್ನು ಒಪ್ಪುತ್ತಿಲ್ಲ. ನಾನು ಕಾರಿನ ವಿಮೆ ಹೊಂದಿದ್ದೆ. ಅಷ್ಟರಲ್ಲೇ ಪೊಲೀಸರು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಕ್ಕೆ ಇಷ್ಟೇಲ್ಲಾ ಮಾಡಿದ್ದಾರೆ ಅಂತಾ ಅವಲತ್ತುಕೊಂಡಿದ್ದಾರೆ.

ಜೆಸಿಬಿ ಮೂಲಕ ಫೆರಾರಿ 458 ಸ್ಪೈಡರ್ ಸೂಪರ್ ಕಾರನ್ನು ಸ್ಕ್ರ್ಯಾಪ್ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ..

ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

ಇನ್ನು 4 ಕೋಟಿಗೂ ಅಧಿಕ ಬೆಲೆ ಹೊಂದಿರುವ ಫೆರಾರಿ 458 ಸ್ಪೈಡರ್ ಕಾರುಗಳು ಸೂಪರ್ ಕಾರು ಮಾದರಿಯಲ್ಲೇ ಅತಿ ಜನಪ್ರಿಯತೆ ಹೊಂದಿದ್ದು, 4497ಸಿಸಿ ಸಾಮರ್ಥ್ಯ ವಿ8 ಎಂಜಿನ್‌ನ ಮೂಲಕ ಕೇವಲ 2.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ.

Most Read Articles

Kannada
Read more on ferrari police
English summary
Ferrari 458 Spider Supercar Being Crushed By A Bulldozer.
Story first published: Wednesday, March 21, 2018, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X