30 ಸಾವಿರ ಬೆಲೆ ಬಾಳದ ಸ್ಕೂಟರ್‌ಗೆ 3 ಲಕ್ಷ ರೂ. ದಂಡ: ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ರೂಲ್ಸ್ ಬ್ರೇಕ್!
ಭಾರತದಲ್ಲಿ ವಾಹನ ಅಪಘಾತಗಳಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಇದರಿಂದ ಸುರಕ್ಷಿತ ವಾಹನ ಚಾಲನೆಗಾಗಿ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅಲ್ಲದೇ ಸಂಚಾರಿ ನಿಯಮಗಳನ್ನು (Traffic Rules) ಪಾಲಿಸಬೇಕಾದದ್ದು ಸಾರ್ವಜನಿಕರ ಆದ್ಯ ಕರ್ತವ್ಯ.
ಎಷ್ಟೇ ದಂಡ ವಿಧಿಸಿದರು ಕೆಲವರು ಸಂಚಾರಿ ನಿಯಮಗಳಿಗೆ ಡೋಂಟ್ ಕೇರ್ ಹೇಳಿ ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲ. ಬೆಂಗಳೂರು ನಗರದಲ್ಲಿ ದ್ವಿಚಕ್ರ ಸವಾರನೊಬ್ಬ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ. ಒಟ್ಟು 3 ಲಕ್ಷ ರೂ. ದಂಡ ಬಿದ್ದಿದೆ. ಬೆಂಗಳೂರಲ್ಲಿ (Bengaluru) ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಎಂಬ ಕುಖ್ಯಾತಿ ಗಳಿಸಿದೆ.

ಬೈಕ್ ಬೆಲೆ 30,000 ರೂ., ಆದರೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋದರಲ್ಲಿ ಬೆಂಗಳೂರಿಗೆ ಮೊದಲನೇಯವರು ಸುಧಾಮ ನಗರದ ವೆಂಕಟರಮನ್. ಇವರ, KA05KF7969 ನಂಬರಿನ ಹೊಂಡಾ ಆಕ್ಟಿವಾ ಸ್ಕೂಟರ್ ಮೇಲೆ ಬರೋಬ್ಬರಿ 300 ಕೇಸ್‌ಗಳು ದಾಖಲಾಗಿದೆ. ಇವರು ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್ ಮಾಡಿ, ಒನ್ ವೇಯಲ್ಲಿ ಮೊಬೈಲ್ನಲ್ಲಿ ಮಾತಾಡಾಡಿಕೊಂಡು ಡ್ರೈವಿಂಗ್ ಮಾಡಿದ್ದಾನೆ.
ಇದಕ್ಕೆ ಸಂಚಾರಿ ಪೊಲೀಸರು 3 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇವರು ಎಸ್ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ. ವೆಂಕಟರಮನ್ ಅವರು 3 ಲಕ್ಷ ರೂ. ದಂಡ ಕಟ್ಟಬೇಕಾಗಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಅವರ ಮನೆಗೆ ತೆರಳಿದ್ದು, ದಂಡ ಕಟ್ಟುವಂತೆ ಸೂಚಿಸಿದ್ದಾರೆ.

ವೆಂಕಟರಮನ್ ಅವರು ಇಷ್ಟು ದಂಡ ಕಟ್ಟಲು ಆಗಲ್ಲ ಬೇಕಿದ್ದರೆ ನನ್ನ ಸ್ಕೂಟರ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಆಗ ಪೊಲೀಸರು ಸ್ಕೂಟರ್ ಬೇಕಾಗಿಲ್ಲ, ದಂಡ ಕಟ್ಟಿ ಇಲ್ಲ ಕೇಸ್ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಸಂಚಾರಿ ಪೊಲೀಸರು ನೊಟೀಸ್ ನೀಡಿದ್ದು, ದಂಡ ಕಟ್ಟಿಲ್ಲ ಅಂದರೆ ಕೇಸ್ ಹಾಕಲು ನಿರ್ಧರಿಸಿದ್ದಾರೆ. ಇನ್ನು ದ್ವಿ-ಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಪೂರ್ತಿ ಮುಖ ಮುಚ್ಚದ ಹಾಫ್ ಹೆಲ್ಮೆಟ್, ಐಎಸ್‌ಐ ಮಾರ್ಕ್ ಇರದ ಕಳಪೆ ಹೆಲ್ಮೆಟ್ ಧರಿಸುವುದನ್ನು ನಿಷೇಧ ಮಾಡಿದೆ.
ದ್ವಿ-ಚಕ್ರ ವಾಹನ ಸವಾರರು ಫುಲ್ ಸೈಜ್ ಹೆಲ್ಮೆಟ್ ಬಳಸಬೇಕು. ಆದರೂ ಕೆಲವು ದ್ವಿ-ಚಕ್ರ ವಾಹನ ಸವಾರರು ಇನ್ನೂ ಕೂಡ ಹಾಫ್ ಹೆಲ್ಮೆಟ್ ಧರಿಸುತ್ತಾರೆ. ಇದರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿರುವ ದ್ವಿ-ಚಕ್ರ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದು ಹೊಸದಲ್ಲ. ಆದರೆ ಇಲ್ಲಿ ಪೊಲೀಸ್ ಅದಿಕಾರಿಯೇ ನಿಯಮ ಉಲ್ಲಂಘಿಸಿದ್ದಾರೆ.
ವರ್ಷಗಳ ಹಿಂದೆ ಹಾಫ್ ಹೆಲ್ಮೆಟ್ ಧರಿಸಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಆರ್.ಟಿ.ನಗರ ಸಂಚಾರ ಠಾಣೆ ಪೊಲೀಸರು ಮಂಗಳವಾರ ದಂಡ ವಿಧಿಸಿದ್ದರು. ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಗರ ಪೊಲೀಸ್ ಆಯುಕ್ತ ಕಚೇರಿಯ ಕಾನ್‌ಸ್ಟೇಬಲ್‌ಗೆ ದಂಡದ ವಿಧಿಸಲಾಗಿದೆ. ಹಾಫ್ ಹೆಲ್ಮಟ್ ಧರಿಸಿ ಸ್ಕೂಟರ್ ನಲ್ಲಿ ಯಮಹಲ್ ರಸ್ತೆಯಲ್ಲಿ ತೆರಳುವಾಗ ಆರ್.ಟಿ.ನಗರ ಸಂಚಾರ ಠಾಣೆ ಎಎಸ್‌ಐ ಸತ್ಯನಾರಾಯಣ ದಂಡ ವಿಧಿಸಿದರು.
ಈ ಬಗ್ಗೆ ಫೋಟೋ ಸಹಿತ ಆರ್.ಟಿ.ನಗರ ಸಂಚಾರ ಪೊಲೀಸರು ಟ್ವಿಟ್ ಮಾಡಿದರು. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸವನ್ನು ಇನ್ನು ಹೆಚ್ಚಾಗಿ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವು ಅವರು ದಂಡದ ಚಲನ್ ಸ್ವೀಕರಿಸುವಾಗ ನಗುತ್ತಿದ್ದಾರೆ. ಸಂತೋಷದಿಂದ ಸ್ವೀಕರಿಸುತ್ತಿದ್ದರೆ ಎಂದು ಕಾಮೆಂಟ್ ಮಾಡಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Note: Images are representative purpose only.


Click it and Unblock the Notifications








