ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

Written By: Rahul TS

ಟೀಮ್ ಇಂಡಿಯಾ ಆಟಗಾರರಾದ ನಾಯಕ ಧೋನಿ, ವಿರಾಟ್ ಕೊಹ್ಲಿಗೆ ಕಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. ಕ್ರಿಕೆಟ್‌ನಲ್ಲಿ ತಮ್ಮ ಭರ್ಜರಿ ಸಂಪಾದನೆಗೆ ತಕ್ಕಂತೆ ದುಬಾರಿ ಕಾರುಗಳನ್ನು ಹೊಂದಿದ್ದು, ದಿಗ್ಗಜರಾದ ಸಚಿನ್ ಕೂಡಾ ಇದಕ್ಕೆ ಹೊರತಾಗಿಲ್ಲ. ಹಾಗಾದ್ರೆ ಯಾವ ಯಾವ ಕ್ರಿಕೆಟಿಗರು ಯಾವ ಕಾರನ್ನ ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ತಮ್ಮದೆ ಕ್ರೀಡಾ ಶೈಲಿಯಿಂದ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚಾದ್ಯಂತ ಜನಪ್ರಿಯತೆಯನ್ನು ಪಡೆದಂತಹ ಪ್ರಸಿದ್ಧ ಕ್ರಿಕೆಟ್ ಆಟಗಾರರ ಗ್ಯಾರೆಜ್‍‍ನಲ್ಲಿರುವ ಐಷಾರಾಮಿ ಕಾರುಗಳ ಕಲೆಕ್ಷನ್ ಬಗ್ಗೆ ಮಾಹಿತಿ ನಾವಿಂದು ನೀಡಲಿದ್ದೇವೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಯುವರಾಜ್ ಸಿಂಗ್ - ಲಂಬೋರ್ಗಿನಿ ಮರ್‍‍ಸಿಯೆಲ್ಗೊ (ರೂ. 3.6 ಕೋಟಿ)

6 ಬಾಲ್‌ಗಳಿಗೆ 6 ಸಿಕ್ಸ್ ಬಾರಿಸಿ ದಾಖಲೆ ನಿರ್ಮಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಐಷಾರಾಮಿ ಕಾರುಗಳ ಬಗ್ಗೆ ಎಲ್ಲಿಲ್ಲದ ಕ್ರೇಜ್ ಹೊಂದಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಲಂಬೋರ್ಗಿನಿಯ ಮರ್‍‍ಸಿಯೆಲ್ಗೊ ಕಾರನ್ನು ಖರೀದಿ ಮಾಡಿದ್ದು, ಈ ಕಾರಿನ ಬೆಲೆಯು ರೂ. 3.6 ಕೋಟಿ ಹೊಂದಿದೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ವಿರೇಂದ್ರ ಸೆಹ್ವಾಗ್ - ಬೆಂಟ್ಲಿ ಕಾಂಟಿನೆಂಟಲ್ ಫ್ಲೈಂಗ್ ಸ್ಟರ್ (ರೂ 3.10 ಕೋಟಿ)

ಟೆಸ್ಟ್ ಮ್ಯಾಚ್‍, ಏಕದಿನ ಪಂದ್ಯಗಳಲ್ಲಿಯೂ ತಮ್ಮ ಬ್ಯಾಟಿಂಗ್ ಶೈಲಿಯಿಂದ ಮಾತ್ರವಲ್ಲದೆ ತಮ್ಮ ಸಮಾಜ ಸೇವೆಯಿಂದಲೂ ಕೂಡಾ ಪ್ರಸಿದ್ಧರಾಗಿರುವ ವಿರೇಂದ್ರ ಸೆಹ್ವಾಗ್ ಅವರು ರೂ 3.10 ಕೋಟಿ ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಂಗ್ ಸ್ಟರ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ವಿರಾಟ್ ಕೊಹ್ಲಿ - ಆಡಿ ಆರ್8 ಎಲ್ಎಂಎಕ್ಸ್ (ರೂ 2.97 ಕೋಟಿ)

ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಗೆ ಕೋಟಿ ಹಣ ಪಡೆಯುತ್ತಿರುವ ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿರುವ ವಿರಾಟ್ ಕೊಹ್ಲಿ ಮೊನ್ನೆಯಷ್ಟೇ ರೂ. 2.97 ಕೋಟಿ ಬೆಲೆಯುಳ್ಳ ಆಡಿ ಸಂಸ್ಥೆಯ ಆರ್8 ಎಲ್ಎಂಎಕ್ಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಕಾರು ಕೇವಲ 99 ಯೂನಿಟ್‍‍ಗಳು ಮಾತ್ರ ಮಾರಾಟಕ್ಕಿದ್ದವು ಅವುಗಳಲ್ಲಿ ಕೊಹ್ಲಿ ಖರೀದಿ ಮಾಡಿರುವ ಕಾರು ಕೂಡಾ ಒಂದು.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಸಚಿನ್ ತೆಂಡೂಲ್ಕರ್ - ಬಿಎಂಡಬ್ಲ್ಯೂ ಐ8 - (ರೂ 2.62 ಕೋಟಿ)

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ನಮಗೆಲ್ಲಾ ತಿಳಿದಿರುವ ಹಾಗೆ ಬಿಎಂಡಬ್ಲ್ಯು ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸಚಿನ್ ಬಿಎಂಡಬ್ಲ್ಯು ಐ8 ಕಾರಿನ ವಿನ್ಯಾಸಕ್ಕೆ ಫಿದಾ ಆಗಿದ್ದರು. ಇದಕ್ಕಾಗಿ ಬಿಎಂಡಬ್ಲ್ಯು ಸಂಸ್ಥೆಯು ರೂ. 2.62 ಕೋಟಿ ಬೆಲೆಬಾಳುವ ಐ8 ಕಾರನ್ನು ಉಡುಗೊರೆಯಾಗಿ ಪಡೆದಿದ್ದರು.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಹಾರ್ದಿಕ್ ಪಾಂಡ್ಯ - ಲ್ಯಾಂಡ್ ರೋವರ್ ರೇಂಜ್ ರೋವರ್ (ರೂ 1.66 ಕೋಟಿ)

ಭಾರತೀಯ ಕ್ರಿಕೆಟ್ ತಂಡದಲ್ಲಿನ ಉದಯೊನ್ಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ರೂ.1.66 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ದಿನೇಶ್ ಕಾರ್ತಿಕ್ - ಪೋರ್ಷೆ ಕಯೆನ್ ಎಸ್ (ರೂ 85.53 ಲಕ್ಷ)

2004ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿಕೊಂಡ ದಿನೇಶ್ ಕಾರ್ತಿಕ್, ತಂಡದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹಾಗೂ ವಿಕೇಟ್ ಕೀಪಿಂಗ್ ನಿಂದ ಜನಪ್ರಿಯತೆ ಗಳಿಸಿದ್ದು, ರೂ 85.53 ಲಕ್ಷ ಮೌಲ್ಯದ ಪೋರ್ಷೆ ಸಂಸ್ಥೆಯ ಸ್ಪೋರ್ಟ್ಸ್ ಕಾರು ಕಯೆನ್ ಖರೀದಿಸಿದ್ದಾರೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಶಿಖರ್ ಧವನ್ - ಮರ್ಸಿಡಿಸ್ ಜಿಎಲ್ ಕ್ಲಾಸ್ (ರೂ 79.78 ಲಕ್ಷ)

ತಂಡದಲ್ಲಿ ತಮ್ಮ ಬ್ಯಾಟಿಂಗ್ ಚಾತುರ್ಯದಿಂದ ಪ್ರಸಿದ್ಧರಾಗಿರುವ ಶಿಖರ್ ಧವನ್‍‍ರವರು ರೂ 79.78 ಲಕ್ಷ ಬೆಲೆಬಾಳುವಂತಹ ಮರ್ಸಿಡಿಸ್ ಜಿಎಲ್ ಕ್ಲಾಸ್ ಐಷಾರಾಮಿ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಮಹೇಂದ್ರ ಸಿಂಗ್ ಧೋನಿ - ಹಮ್ಮರ್ ಹೆಚ್2 (ರೂ 75 ಲಕ್ಷ)

2007ರಲ್ಲಿ ಭಾರತದ ತಂಡಕ್ಕೆ ನಾಯಕರಾಗಿ ವರ್ಲ್ಡ್ ಕಪ್ ಗೆಲ್ಲುವಂತೆ ತಂಡವನ್ನು ಪ್ರೋತ್ಸಾಹಿಸಿ ಇದೀಗ ಇಂಡಿಯನ್ ಪ್ರಿಮಿಯರ್ ಲೀಗ್‍‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್ ಧೋನಿಯವರು ಆಟಕ್ಕೆ ಮಾತ್ರವಲ್ಲದೆ ತಮ್ಮ ಗ್ಯಾರೇಜ್‍‍ನಲ್ಲಿನ ಐಷಾರಾಮಿ ಕಾರುಗಳು ಹಾಗು ಬೈಕ್‍‍ಗಳಿಂದಲೂ ಕೂಡಾ ಪ್ರಸಿದ್ದಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ತಮ್ಮ ಗ್ಯಾರೇಜ್‍‍ನಲ್ಲಿ ಆಡಿ ಕ್ಯೂ7, ಮಿಟ್ಸುಬಿಷಿ ಪಜೆರೊ ಎಸ್ಎಫ್ಎಕ್ಸ್, ಮಹಿಂದ್ರಾ ಸ್ಕಾರ್ಪಿಯೊ ಹಾಗು ಉತ್ತಮ ಪರ್ಫಾರ್ಮೆನ್ಸ್ ಸೂಪರ್‍ ಬೈಕ್‍ಗಳನ್ನು ತಮ್ಮದಾಗಿಸಿಕೊಂಡಿದ್ದು, ಇದೀಗ ಜನಪ್ರಿಯ ಹಮ್ಮರ್ ಸಂಸ್ಥೆಯ ಎರಡನೇ ತಲೆಮಾರಿನ ಹೆಚ್2 ಎಸ್‍ಯುವಿ ಕಾರನ್ನು ಕೂಡ ಖರೀದಿ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಹರ್ಭಜನ್ ಸಿಂಗ್- ಹಮ್ಮರ್ ಹೆಚ್2 (ರೂ.75 ಲಕ್ಷ)

ತಮ್ಮ ಸ್ಪಿನ್ ಬೌಲಿಂಗ್ ಚಾತುರ್ಯದಿಂದ ಹಲವಾರು ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್‍‍ಗಳನ್ನು ಪಡೆದಿರುವ ಹರ್ಭಜನ್ ಸಿಂಗ್ ಕೂಡಾ ಹಮ್ಮರ್ ಹೆಚ್2 ಎಸ್‍ಯುವಿ ಕಾರ್ ಅನ್ನು ಖರೀದಿ ಮಾಡಿದ್ದು, ಈ ಕಾರು 6.2 ಲೀಟರ್ ವಿ8 ಎಂಜಿನ್ ಸಹಾಯದಿಂದ 393 ಬೆಹೆಚ್ ಪಿ ಸಾಮರ್ಥ್ಯವನ್ನು ಪಡೆದಿದೆ.

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಕೆಎಲ್ ರಾಹುಲ್- ಮರ್ಸಿಡಿಸ್ ಸಿ43 ಎಎಂಜಿ (ರೂ 75.35 ಲಕ್ಷ)

ಕರ್ನಾಟಕ ಕ್ರಿಕೆಟ್ ತಂಡದಿಂದ ಪ್ರಸಿದ್ಧರಾಗಿ ಈಗ ಭಾರತದ ಕ್ರಿಕೆಟ್ ತಂಡದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯದಿಂದ ಸದ್ದು ಮಾಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅವಪು ಐಷಾರಾಮಿ ವಾಹನ ತಯಾರಕ ಸಂಸ್ಥೆ ಮರ್ಸಿಡಿಸ್‍‍ನ ಸಿ43 ಎಎಂಜಿ ಕಾರ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

Read more on celebrity cars cricket
English summary
10 most EXPENSIVE cars of Indian cricketers.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark