ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

Written By:

ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮಾಲಿವುಡ್ ಬಾಕ್ಸಾಫೀಸ್‌ನಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ನಟ ಪೃಥ್ವಿರಾಜ್ ಸುಕುಮಾರನ್, ನಟನೆ ಅಷ್ಟೇ ಅಲ್ಲದೇ ಸೂಪರ್ ಕಾರುಗಳ ಮೇಲೂ ಎಲ್ಲಿಲ್ಲದ ಕ್ರೇಜ್ ಹೊಂದಿದ್ದಾರೆ. ಮೊನ್ನೆಯಷ್ಟೇ ಖರೀದಿಸಿರುವ ಅವರ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಸೂಪರ್ ಕಾರುಗಳ ಕಲೆಕ್ಷನ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ನಟ ಪೃಥ್ವಿರಾಜ್ ಸುಕುಮಾರನ್, ಮೊನ್ನೆಯಷ್ಟೇ ಖರೀದಿ ಮಾಡಿರುವ ತಮ್ಮ ಹೊಸ ಲ್ಯಾಂಬೋರ್ಗಿನಿ ಕಾರಿಗಾಗಿ ಭಾರೀ ಮೊತ್ತ ಪಾವತಿಸಿ ಫ್ಯಾನ್ಸಿ ನಂಬರ್ ತಮ್ಮದಾಗಿಸಿಕೊಂಡಿರುವುದು ಸಿನಿರಸಿಕರಿಗೆ ಅಷ್ಟೇ ಅಲ್ಲದೇ ಸೂಪರ್ ಕಾರು ಪ್ರಿಯರಿಗೂ ಶಾಕ್ ನೀಡಿದ್ದಾರೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಬರೋಬ್ಬರಿ 4 ಕೋಟಿ ಮೌಲ್ಯದ ಲಂಬೋರ್ಗಿನಿ ಹುರುಕಾನ್ ಸೂಪರ್ ಕಾರು ಖರೀದಿಸಿರುವ ಪೃಥ್ವಿರಾಜ್, ಹೊಸ ಕಾರಿಗಾಗಿ ಕೆಎಲ್ 07, ಸಿಎನ್ 01 ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಎರ್ನಾಕುಲಂ ನೋಂದಣಿ ಕಾರು ಮಾದರಿ ಇದಾಗಿದ್ದು, ಫ್ಯಾನ್ಸಿ ನಂಬರ್‌ಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 7 ಲಕ್ಷ ರೂಪಾಯಿ ಪಾವತಿಸಿ ಕೆಎಲ್ 07, ಸಿಎನ್ 01 ನಂಬರ್ ಖರೀದಿ ಮಾಡಿದ್ದಾರೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಲಂಬೋರ್ಗಿನಿ ಹುರುಕಾನ್ ಕಾರಿಗೆ ಅಷ್ಟೇ ಅಲ್ಲದೇ ಈ ಹಿಂದೆ ಎರಡು ಬಾರಿ ಇದೇ ರೀತಿ ದೊಡ್ಡ ಮೊತ್ತ ಪಾವತಿ ಫ್ಯಾನ್ಸಿ ನಂಬರ್ ಖರೀದಿಸಿರುವ ಪೃಥ್ವಿರಾಜ್ ಸುಕುಮಾರನ್, ಸೂಪರ್ ಕಾರುಗಳ ಚಾಲನೆ ಬಗ್ಗೆ ಭಾರೀ ಕ್ರೇಜ್ ಹೊಂದಿದ್ದಾರೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಇನ್ನು ನಟ ಪೃಥ್ವಿರಾಜ್ ಖರೀದಿಸಿರುವ ಲಂಬೋರ್ಗಿನಿ ಹುರುಕಾನ್ ಕಾರು ರಿಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದ್ದು, 7-ಸ್ಪೀಡ್ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವುದು ಸೂಪರ್ ಕಾರಿನ ವೈಶಿಷ್ಟ್ಯತೆಯನ್ನು ಹೆಚ್ಚಿಸಿವೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಎಂಜಿನ್ ಸಾಮರ್ಥ್ಯ

ಲಂಬೋರ್ಗಿನಿ ಹುರುಕಾನ್ ಕಾರುಗಳು ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 602 ಬಿಎಚ್‌ಪಿ ಉತ್ಪಾದನೆಯೊಂದಿಗೆ ಕೇವಲ 3.2 ಸೇಕೆಂಡುಗಳಲ್ಲಿ 100 ಕಿಮಿ ವೇಗ ಸಾಧಿಸಬಲ್ಲವು.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಒಟ್ಟಿನಲ್ಲಿ ಸೂಪರ್ ಕಾರುಗಳಿಗಾಗಿ ದೊಡ್ಡ ಮೊತ್ತ ಪಾವತಿಸಿ ಫ್ಯಾನ್ಸಿ ನಂಬರ್ ಖರೀದಿಸುವುದು ಇತ್ತೀಚೆಗೆ ಟ್ರೆಂಡ್ ಆಗುತ್ತಿದ್ದು, 4545 ಮತ್ತು 5555 ಫ್ಯಾನ್ಸಿ ನಂಬರ್‌ಗಳು ಇದುವರೆಗೆ ಅತಿಹೆಚ್ಚು ಬೆಲೆಗೆ ಹರಾಜುಗೊಂಡ ಲಕ್ಕಿ ನಂಬರ್‌ಗಳಾಗಿವೆ.

English summary
Actor Prithviraj pays Rs 7 lakh for this number to tag his new super car.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark