ಫಾರ್ಚೂನರ್ ಕಾರಿಗಿಂತ ದುಬಾರಿಯೆಂತೆ ಈ ಪೋರ್ಷೆ ಕಾರಿನ ನಂಬರ್ ಪ್ಲೇಟ್..!
ಇತ್ತೀಚೆಗಿನ ದಿನಗಳಲ್ಲಿ ಫ್ಯಾನ್ಸಿ ನಂಬರ್ ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗುತ್ತಿದೆ. ನಿರ್ದಿಷ್ಟ ಸಂಖ್ಯೆಯನ್ನು ಬಯಸಿ ಹಲವರ ಮಧ್ಯೆ ಪೈಪೋಟಿ ಏರ್ಪಡುತ್ತಿದ್ದು, ಮನ ಮೆಚ್ಚಿನ ನಂಬರ್ ಪಡೆದುಕೊಳ್ಳಲು ಲಕ್ಷಗಟ್ಟಲೆ ಖರ್ಚು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹಾಕಿಸಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಹಣ ಇರುವವರು ತಮಗೆ ಬೇಕಾದ ನಂಬರ್ ಪಡೆಯಲು ಎಷ್ಟು ಬೇಕಾದರೂ ದುಡ್ಡು ಪಾವತಿಸಲು ರೆಡಿಯಾಗುತ್ತಿದ್ದಾರೆ. ಹೀಗೆ ಕೇರಳ ಮೂಲದ ಉದ್ಯಮಿಯೊಬ್ಬರು ಕೂಡಾ ತಮ್ಮ ಹೊಸ ಕಾರಿಗೆ ಫ್ಯಾನ್ಸಿ ನಂಬರ್ ಪಡೆಯಲು ಭಾರೀ ಮೊತ್ತ ಪಾವತಿಸಿ ತಮ್ಮ ಫೇವರಿಟ್ ನಂಬರ್ ಗಿಟ್ಟಿಸಿಕೊಂಡಿದ್ದಾರೆ.

ಕೇರಳ ಮೂಲದ ಉದ್ಯಮಿ ಕೆ.ಎಸ್. ಬಾಲಗೋಪಾಲ್ ಎನ್ನುವವರು ತಮ್ಮ ದುಬಾರಿ ಬೆಲೆಯ ಪೋರ್ಷೆ 718 ಬಾಕ್ಸ್‌ಸ್ಟರ್ ಕಾರಿಗಾಗಿ ಕೆಎಲ್ 01, ಸಿಕೆ 1 ಎನ್ನುವ ಫ್ಯಾನ್ಸಿ ನಂಬರ್ ಖರೀದಿಸಿದ್ದು, ಅವರು ಖರೀದಿಸಿ ಈ ನಂಬರ್ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಈ ಹಿಂದೆ 2012ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜು ಮಾಡಲಾಗಿದ್ದ ರೂ. 26 ಲಕ್ಷ ಮೌಲ್ಯದ ನಂಬರ್ ಪ್ಲೇಟ್ ಮೊತ್ತವನ್ನು ಇದು ಹಿಂದಿಕ್ಕಿದ್ದು, ದೇಶದಲ್ಲಿ ಅತಿ ದುಬಾರಿ ನಂಬರ್ ಪ್ಲೇಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹರಿಯಾಣದ ಉದ್ಯಮಿಯೊಬ್ಬ ತನ್ನ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರಿಗೆ ರೂ. 26 ಲಕ್ಷ ತೆತ್ತು ಫ್ಯಾನ್ಸಿ ನಂಬರ್ ಪ್ಲೇಟ್ ಪಡೆದಿದ್ದ. ಇದು ಇದುವರೆಗಿನ ದುಬಾರಿ ನಂಬರ್ ಪ್ಲೇಟ್ ಎಂಬ ದಾಖಲೆ ಇದೀಗ ಕೇರಳ ಉದ್ಯಮಿಯ ಪಾಲಾಗಿದೆ.

ಕೆಎಲ್ 01, ಸಿಕೆ 1 ಫ್ಯಾನ್ಸಿ ನಂಬರ್ ಖರೀದಿಸಲು ಬರೋಬ್ಬರಿ ರೂ. 31 ಲಕ್ಷ ಪಾವತಿಸಿರುವ ಉದ್ಯಮಿ ಕೆ.ಎಸ್.ಬಾಲಗೋಪಾಲ್ ಅವರು ಪೋರ್ಷೆ ಕಾರಿಗೆ ಅಷ್ಟೇ ಅಲ್ಲದೇ ಇದುವರೆಗೆ ಖರೀದಿಸಿರುವ 3 ದುಬಾರಿ ಕಾರುಗಳಿಗೂ ಫ್ಯಾನ್ಸಿ ನಂಬರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಿರುವನಂತಪುರಮ್‌ನಲ್ಲಿ ನಡೆದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಕೇರಳ ಮತ್ತಿಬ್ಬರು ಎನ್ಆರ್‌ಐ ಉದ್ಯಮಿಗಳಿಗೂ ತೀವ್ರ ಪೈಪೋಟಿ ನೀಡಿದ ಕೆ.ಎಸ್.ಬಾಲಗೋಪಾಲ್ ಅವರು ಕೊನೆಗೂ ರೂ.30 ಲಕ್ಷಕ್ಕೆ ತಮ್ಮ ನೆಚ್ಚಿನ ನಂಬರ್ ಪ್ಲೇಟ್ ಗಿಟ್ಟಿಸಿಕೊಂಡರು.

ಇದರಲ್ಲಿ ನಂಬರ್ ಪ್ಲೇಟ್ ಮೊತ್ತವು ರೂ.30 ಲಕ್ಷವಾದರೆ, ಇನ್ನುಳಿದ ರೂ.1 ಲಕ್ಷ ಅಪ್ಲಿಕೇಷನ್ ಫಾರ್ಮ್ ಪಡೆಯಲು ಪಾವತಿಸಲಾಗಿದ್ದು, ಕೆಎಲ್ 01, ಸಿಕೆ 1 ಅಷ್ಟೇ ಅಲ್ಲದೇ ಕೆಎಲ್ 01, ಸಿಬಿ 1 ನಂಬರ್ ಪ್ಲೇಟ್ ಕೂಡಾ ಇವರ ಬಳಿಯಿದೆ.
MOST READ: OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ.. ಅಚ್ಚರಿಯಾಗುತ್ತೆ..!

2017ರಲ್ಲಿ ಪಡೆಯಲಾದ ಕೆಎಲ್ 01, ಸಿಬಿ 1 ನಂಬರ್ ಪ್ಲೇಟ್ ಅನ್ನು 1 ಕೋಟಿ ಮೌಲ್ಯದ ಕಾರು ಮಾದರಿಯಾದ ಲ್ಯಾಂಡ್ ಕ್ರೂಸರ್‌ಗಾಗಿ ಬಳಕೆ ಮಾಡಲಾಗುತ್ತಿದ್ದು, ಕೆಎಲ್ 01, ಸಿಕೆ 1 ಪಡೆಯಲೇಬೇಕು ಎನ್ನುವ ಉದ್ದೇಶದಿಂದ ದುಬೈ ಉದ್ಯಮಿಗಳಿಗೆ ಟಾಂಗ್ ಕೊಟ್ಟು ಈ ಫ್ಯಾನ್ಸಿ ನಂಬರ್ ಖರೀದಿ ಮಾಡಲಾಗಿದೆ.

ಇನ್ನು ಕೆಎಲ್ 01, ಸಿಕೆ 1 ನಂಬರ್ ಪ್ಲೇಟ್‌ನಲ್ಲಿ ಮಿಂಚುತ್ತಿರುವ ಪೋರ್ಷೆ 718 ಬಾಕ್ಸ್‌ಸ್ಟರ್ ಕಾರು ಭಾರತದಲ್ಲಿ ರೂ.1.20 ಕೋಟಿ ಆನ್‌ರೋಡ್ ಬೆಲೆ ಹೊಂದಿದ್ದು, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 298-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್ ವಿಶೇಷತೆ ಏನು?

2017ರಲ್ಲಿ ಮೊದಲ ಬಾರಿಗೆ ಪೋರ್ಷೆ 718 ಬಾಕ್ಸ್‌ಸ್ಟರ್ ಕಾರು ಬಿಡುಗಡೆಯಾಗಿದ್ದು, ಮಧ್ಯಮ ಗಾತ್ರದ ಸೂಪರ್ ಕಾರು ಮಾರಾಟ ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದಿದೆ. ಇದೀಗ ಇದೇ ಕಾರು ದೇಶದ ಅತಿ ದುಬಾರಿ ಬೆಲೆಯ ನಂಬರ್ ಪ್ಲೇಟ್ ಗಿಟ್ಟಿಕೊಂಡಿರುವುದು ಕೂಡಾ ಹೊಸ ದಾಖಲೆಗೆ ಕಾರಣವಾಗಿದೆ.
Image Courtesy: Kairalinewsonline


Click it and Unblock the Notifications








