OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ವಿಶ್ವಾದ್ಯಂತ ಸದ್ಯ ನೂರಾರು ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಒಂದಕ್ಕೊಂದು ವಿಭಿನ್ನವಾಗಿರುವ ಕಾರು ಉತ್ಪಾದನಾ ಸಂಸ್ಥೆಗಳು ಕೆಲವು ವಿಶೇಷತೆಗಳಿಂದಾಗಿಯೇ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿ ಎನ್ನಬಹುದು. ಆದ್ರೆ ಅದೇ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳು ಮಾಡುವ ಒಂದೊಂದು ಸಣ್ಣ ತಪ್ಪು ಸಹ ಎಂತಹ ಆಭಾಸ ಮೂಡಿಸುತ್ತೆ ಅನ್ನುವುದಕ್ಕೆ ಇಲ್ಲೊಂದು ಕಾರಿನ ಮೇಲೆ ಹಾಕಲಾಗಿರುವ ಹೆಸರನ್ನು ನೀವು ಒಮ್ಮೆ ಸರಿಯಾಗಿ ಗಮನಿಸಿ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ನಾವಿಂದು ಹೇಳುತ್ತಿರುವ ವಿಚಾರ ನಿಮಗೆ ಸಣ್ಣದು ಎನ್ನಿಸಬಹುದು. ಆದ್ರೆ ಸುಮಾರು 90 ಲಕ್ಷ ಬೆಲೆ ಹೊಂದಿರುವ ಕಾರಿನಲ್ಲೂ ಸಹ ವಾಹನ ಉತ್ಪಾದಕರು ಮಾಡುವ ಸಣ್ಣಪುಟ್ಟ ತಪ್ಪುಗಳು ಬ್ರಾಂಡ್ ಮೌಲ್ಯಕ್ಕೆ ಹೇಗೆ ಹೊಡೆತ ನೀಡುತ್ತವೆ ಎನ್ನುವುದಕ್ಕೆ ಇದು ಕೈಗನ್ನಡಿ ಎನ್ನಬಹುದು. ಹಾಗಾದ್ರೆ ಆದ ಪ್ರಮಾದವಾದ್ರು ಏನು ಎಂದು ತಿಳಿಯಲು ಮುಂದಿನ ಸ್ಲೈಡರ್‌ನತ್ತ ಸಾಗಿರಿ..

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಹೌದು, ಸುಮಾರು 90 ಲಕ್ಷ ಮೌಲ್ಯ ಹೊಂದಿರುವ ಪೋರ್ಷೆ ಕಯೆನಿ ಐಷಾರಾಮಿ ಎಸ್‌ಯುವಿ ಕಾರುವೊಂದರಲ್ಲಿ ಕಾರಿನ ಹೆಸರಿನಲ್ಲಿ ತಪ್ಪು ಪದ ಬಳಕೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದು ಐಷಾರಾಮಿ ಕಾರು ಉತ್ಪಾದಕರ ಜಾಣ ಕುರುಡತನವನ್ನು ಪ್ರದರ್ಶಿಸುತ್ತೆ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಇಂಗ್ಲಿಷ್‌ನಲ್ಲಿ ಒಂದು ಅಕ್ಷರ ಸಹ ವ್ಯತ್ಯಾಸವಾದರೂ ಆ ಪದ ಬೇರೆಯದೇ ಆಗಿ ಬೇರೆ ಅರ್ಥವನ್ನು ನೀಡುತ್ತೆ. ಹೀಗಿರುವಾಗ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಪೋರ್ಷೆ ಮಾತ್ರ ತನ್ನ ಜನಪ್ರಿಯ ಕಯೆನಿ ಕಾರಿನಲ್ಲಿ 'Porsche' ಲೊಗೊದಲ್ಲಿ ಪ್ರಮಾದ ಮಾಡಿದೆ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಪೋರ್ಷೆ ಕಯೆನಿ ಎಸ್‌ಯುವಿ ಪ್ರೀಮಿಯಂ ಕಾರಿನಲ್ಲಿ ಇಂಗ್ಲೀಷ್ ಪದವು 'Porsche'ಬದಲಾಗಿ 'Porshce'ಎಂದು ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ವಾಹನ ಉತ್ಪಾದಕರ ನಿರ್ಲಕ್ಷ್ಯಕ್ಕೆ ಕಾರು ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಕಾರಿನ ಹಿಂಭಾಗದಲ್ಲಿ ಹಾಕುವ ಬ್ರಾಂಡ್ ಹೆಸರಿನಲ್ಲಿ ಈ ಪ್ರಮಾದವಾಗಿದ್ದು, 'Porsche'ಬದಲಾಗಿ 'Porshce' ಬಳಕೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತೆ. ಈ ಬಗ್ಗೆ ಕೆಲವರು ಪೋರ್ಷೆ ಸಂಸ್ಥೆಯ ಗಮನಕ್ಕೆ ತಂದಿದ್ದು, ಈ ಕುರಿತು ಪೋರ್ಷೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಕಾರು ಉತ್ಪಾದನೆ ವೇಳೆ ಆಗುವ ಸಣ್ಣಪುಟ್ಟ ತಾಂತ್ರಿಕ ದೋಷಗಳು ಕಂಡುಬರುವುದು ಕಾಮನ್. ಹಾಗಂತ ಅದು ಪದೇ ಪದೇ ಸಂಭವಿಸಿದ್ದಲ್ಲಿ ಬ್ರಾಂಡ್ ಮೌಲ್ಯದ ಭಾರೀ ಹೊಡೆತ ಬಿಳುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಈ ಮೇಲಿನ ಪದ ಬಳಕೆಯನ್ನು ಸಹ ಸಮರ್ಥಿಸಿಕೊಳ್ಳಲು ಸಹ ಸಾಧ್ಯವಿಲ್ಲ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಇನ್ನು ಕಳೆದ 15 ವರ್ಷಗಳಿಂದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಪೋರ್ಷೆ ಸಂಸ್ಥೆಯು ಸ್ಪೋರ್ಟ್ ಎಸ್‌ಯುವಿ ಮಾದರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತದಲ್ಲೂ ಸಹ ಕಯೆನಿ ಕಾರುಗಳಿಗೆ ವಿಶೇಷ ಬೇಡಿಕೆಯಿದೆ.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

3.0-ಲೀಟರ್ ಟರ್ಬೋ ಡಿಸೇಲ್ ಎಂಜಿನ್ ಹೊಂದಿರುವ ಕಯೆನಿ ಕಾರು ಮಾದರಿಗಳು 242-ಬಿಎಚ್‌ಪಿ ಮತ್ತು 550-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯಧಿಕ ಎಂಜಿನ್ ಶಕ್ತಿ ಪ್ರದರ್ಶಿಸುವ ಐಷಾರಾಮಿ ಕಾರು ಮಾದರಿಯಾಗಿ ಜನಪ್ರಿಯತೆ ಹೊಂದಿದೆ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಸಾಮಾನ್ಯ ರಸ್ತೆಗಳಲ್ಲಿ ಯಾವ ರೀತಿ ಎಂಜಿನ್ ಶಕ್ತಿ ಪ್ರದರ್ಶನ ಮಾಡುತ್ತೊ ಅದೇ ರೀತಿಯಾಗಿ ಆಪ್ ರೋಡ್‌ನಲ್ಲೂ ಯಾವುದೇ ಅಡೆತಡೆಗಳಿಲ್ಲದೆ ಕಠಿಣ ಭೂ ಪ್ರದೇಶಗಳಲ್ಲೂ ಚಲಿಸುವ ಸಾಮರ್ಥ್ಯ ಹೊಂದಿರುವ ಕಯೆನಿ ಕಾರು, ಕೇವಲ 7.3 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳುತ್ತವೆ.

OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಕಾರಿಗೆ ರೈಲ್ವೆ ಹಾರ್ನ್ ಹಾಕಿದ ಭೂಪ..!

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡ್ ಸೃಷ್ಠಿಸುತ್ತಿರುವ ಕಾರು, ಬೈಕ್‌ ಮಾಡಿಫಿಕೇಷನ್ ಹೊಸತೆನಲ್ಲ. ಆದ್ರೆ ಮಾಡಿಫೈಗೊಂಡ ವಾಹನಗಳಿಂದ ಮಾಲೀಕರಿಗೆ ಏನೇ ಅನುಕೂಲಕಲತೆಗಳಿದ್ದರೂ, ಅದು ಇತರರಿಗೆ ಕಿರಿಕಿರಿ ಅಂದ್ರೆ ತಪ್ಪಾಗುವುದಿಲ್ಲ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳನ್ನು ವಿಭಿನ್ನವಾಗಿ ಕಾಣಲು ಮಾಡಿಫೈ ತಂತ್ರಜ್ಞಾನದ ಮೋರೆಹೋಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಮೂಲ ವಾಹನದ ಬೆಲೆಗಿಂತಲೂ ಹೆಚ್ಚಿನ ಹಣ ಸುರಿದು ಮಾಡಿಫೈ ಕ್ರೇಜ್ ತೋರಿಸಿಕೊಳ್ಳುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಮಹೀಂದ್ರಾ ಥಾರ್ ಮಾಲೀಕ ಕೂಡಾ ತನ್ನ ಕಾರಿಗೆ ದುಬಾರಿ ಬೆಲೆಯ ರೈಲ್ವೆ ಹಾರ್ನ್ ಬಳಕೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹೌದು, ನೀವು ಇಷ್ಟು ದಿನಗಳ ಕಾಲ ದೊಡ್ಡ ಕಾರಿನ ಚಕ್ರಗಳನ್ನೋ, ಕಾರಿನ ಮುಂಭಾಗದಲ್ಲಿ ಸ್ಪೋರ್ಟಿ ವಿನ್ಯಾಸವನ್ನೋ ಇಲ್ಲವೇ ಕಾರಿನ ಸನ್ ರೂಫ್ ಮಾಡಿಫಿಕೇಷನ್ ಮಾಡಿಸಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿಯೇ ಇರುತ್ತಿರಿ. ಆದ್ರೆ ಈ ಕಾರು ಮಾಲೀಕ ಮಾತ್ರ ದುಬಾರಿ ಬೆಲೆಯ ರೈಲ್ವೆ ಹಾರ್ನ್ ಬಳಕೆ ಮಾಡಿದ್ದಾನೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹರಿಯಾಣ ಮೂಲದ ಮಹೀಂದ್ರಾ ಥಾರ್ ಕಾರು ಮಾಲೀಕನಾಗಿರುವ ಅಜಯ್ ಬೆಸ್ಲಾ ಎಂಬುವವರೇ ತಮ್ಮ ಕಾರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈಲ್ವೆ ಹಾರ್ನ್ ಹಾಕಿಸಿಕೊಂಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ರೈಲ್ವೆಗಳಲ್ಲಿ ಬಳಸಲಾಗುವ ಈ ಹಾರ್ನ್ ಅನ್ನು ಥಾರ್ ಕಾರಿಗೆ ಜೋಡಣೆ ಮಾಡಲು ಬರೋಬ್ಬರಿ 1 ಲಕ್ಷ ರೂಪಾಯಿ ತಗುಲಿದ್ದು, ಹಾರ್ನ್ ಹೊರತುಪಡಿಸಿ ಇದೇ ಕಾರಿನ ಇತರೆ ತಾಂತ್ರಿಕ ಸೌಲಭ್ಯಗಳ ಮಾಡಿಫೈಗೂ ಲಕ್ಷ ಲಕ್ಷ ಖರ್ಚು ಮಾಡಲಾಗಿದೆಯೆಂತೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಕಾರಿನ ಮುಂಭಾದಲ್ಲಿ ಜೋಡಣೆ ಮಾಡಲಾಗಿರುವ ರೈಲ್ವೆ ಹಾರ್ನ್‌‌ ಕಾರಿನ ಖದರ್ ಹೆಚ್ಚಿಸಿದ್ದು, ಇದು ಖಾಸಗಿ ವಾಹನಗಳಲ್ಲಿ ಅಳವಡಿಸಲಾದ ಗರಿಷ್ಠ ಶಬ್ದ ಸಾಮರ್ಥ್ಯದ ಹಾರ್ನ್ ಎನ್ನುವ ಖ್ಯಾತಿಗೆ ಪಡೆದಿದ್ದರೂ ಈ ರೀತಿ ಹಾಕಿಸುವುದು ಸಂಚಾರಿ ನಿಯಮಕ್ಕೆ ವಿರುದ್ದವಾಗಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಇನ್ನು ರೈಲ್ವೆಗಳಲ್ಲಿ ಬಳಸಲಾಗುವ ಈ ಹಾರ್ನ್ ಅನ್ನು ರೈಲ್ವೆಗಳಲ್ಲಿ ಹೊರತುಪಡಿಸಿ ಇತರೆ ಯಾವುದೇ ಸಾಮಾನ್ಯ ವಾಹನಗಳಿಗೆ ಬಳಸುವಂತಿಲ್ಲ ಎನ್ನುವ ನಿಯಮವಿದ್ದರೂ, ಮಾಡಿಫೈ ನೆಪದಲ್ಲಿ ಕಾರು ಮಾಲೀಕ ಅಜಯ್ ತನ್ನ ಥಾರ್‌ಗೆ ಈ ರೀತಿ ವಿಚಿತ್ರವಾಗಿ ಮಾಡಿಫೈ ಮಾಡಿಸಿರುವುದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಹಾರ್ನ್ ಇದ್ರು ಬಳಸುವಂತಿಲ್ಲ..!

ಮೋಟಾರ್ ವೆಹಿಕಲ್ ಆಕ್ಟ್‌ಗೆ ವಿರುದ್ಧವಾಗಿರುವ ಈ ಹಾರ್ನ್ ಬಳಕೆ ವಿರುದ್ಧ ಖಡಕ್ ವಾರ್ನ್ ನೀಡಿರುವ ಟ್ರಾಫಿಕ್ ಪೊಲೀಸರು ರೈಲ್ವೆ ಹಾರ್ನ್ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ ಎಂದು ಸೂಚಿಸಲಾಗಿದ್ದು, ಕೇವಲ ಆಪ್ ರೋಡ್ ಚಾಲನೆಯಲ್ಲಿ ಮಾತ್ರವೇ ಹಾರ್ನ್ ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾರ್ಗದರ್ಶನ ನೀಡಿದ್ದಾರೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಇದಕ್ಕೆ ಕಾರಣ ರೈಲ್ವೆ ಹಾರ್ನ್ 120-140 ಡಿಸೆಬಲ್‌ಗಿಂತಲೂ ಹೆಚ್ಚಿನ ಶಬ್ದ ಸಾಮರ್ಥ್ಯ ಹೊಂದಿದ್ದು, ಒಂದು ವೇಳೆ ಈ ಹಾರ್ನ್ ಮಾದರಿಯನ್ನು ಸಾಮಾನ್ಯ ವಾಹನಗಳಲ್ಲಿ ಬಳಕೆ ಮಾಡಿದ್ದೆ ಆದಲ್ಲಿ ಅದು ಇತರೆ ವಾಹನ ಸವಾರರಿಗೂ ಸೇರಿದಂತೆ ಸಾಮಾನ್ಯ ಜನತೆಗೂ ಕಿರಿಕಿರಿ ಉಂಟುಮಾಡಬಲ್ಲದು.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಹೀಗಾಗಿ ಥಾರ್ ಕಾರು ಮಾಲೀಕನಿಗೆ ಖಡಕ್ ವಾರ್ನ್ ಮಾಡಿರುವ ಟ್ರಾಫಿಕ್ ಪೊಲೀಸರು ಯಾವುದೇ ಕಾರಣಕ್ಕೂ ಸಾಮಾನ್ಯ ರಸ್ತೆಗಳಲ್ಲಿ ಬಳಸದಿರುವಂತೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಅನಗತ್ಯವಾಗಿ ಸಾಮಾನ್ಯ ರಸ್ತೆಗಳಲ್ಲಿ ಬಳಕೆ ಮಾಡಿದ್ದು ಕಂಡುಬಂದಿದ್ದೆ ಆದಲ್ಲಿ ಕೇಸ್ ದಾಖಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Spelling Mistake In Porsche Cayenne Worth Rs 90 Lakhs.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more