Tata: ಸದ್ದಿಲ್ಲದೇ ಹೊಸ ಕಾರಿನ ಬಿಡುಗಡೆಗೆ ರೆಡಿಯಾಗುತ್ತಿದೆ ಟಾಟಾ.. ಯಾವುದು.. 627 Km ರೇಂಜ್?
ದೇಶದ ವಾಹನೋದ್ಯಮದಲ್ಲಿ ಟಾಟಾ ಮೋಟಾರ್ಸ್ (Tata Motors) ಸಖತ್ ಸದ್ದು ಮಾಡುತ್ತಿದೆ. ಕೆಲವೇ ತಿಂಗಳ ಅಂತರದಲ್ಲಿ ಸಿಯೆರಾ, ಹ್ಯಾರಿಯರ್ ಪೆಟ್ರೋಲ್, ಸಫಾರಿ ಪೆಟ್ರೋಲ್, ಪಂಚ್ ಫೇಸ್‌ಲಿಫ್ಟ್ ಹಾಗೂ ಪಂಚ್ ಇವಿ ಫೇಸ್‌ಲಿಫ್ಟ್ ಕಾರುಗಳನ್ನು ಮಾರಾಟಕ್ಕೆ ತಂದಿದೆ. ಸದ್ಯ, ಮತ್ತೊಂದು ಹೊಚ್ಚ ಹೊಸ ಕಾರನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ 'ಸಿಯೆರಾ ಇವಿ' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರೀಕ್ಷಿಸಿದೆ. ಆ ಸ್ಪೈ ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ.
ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ಕಂಡುಬಂದ ಟಾಟಾ ಸಿಯೆರಾ ಇವಿ (Tata Sierra EV) ಕಾರನ್ನು ಸಂಪೂರ್ಣವಾಗಿ ಕಪ್ಪು ಬಣ್ಣದ ಕವರ್‌ನಿಂದ ಮುಚ್ಚಲಾಗಿತ್ತು. ಹೀಗಾಗಿ, ವಿನ್ಯಾಸದ ಕುರಿತಂತೆ ಅಷ್ಟಾಗಿ ಯಾವುದೇ ಅಂಶಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೂ ಸ್ಟ್ಯಾಂಡರ್ಡ್ 'ಸಿಯೆರಾ' ಇರಲಿದ್ದು, ಸಣ್ಣ ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿರಲಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು & ಅಲಾಯ್ ವೀಲ್‌ಗಳನ್ನು ಪಡೆದಿರಲಿದೆ. ಹೆಚ್ಚು ವಿಶಾಲವಾಗಿರಲಿದ್ದು, 4,340 ಮಿ.ಮೀ ಉದ್ದ, 1,841 ಮಿ.ಮೀ ಅಗಲ ಹಾಗೂ 1715 ಮಿ.ಮೀ ಎತ್ತರವಿರಲಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,730 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿರುವ ನಿರೀಕ್ಷೆಯಿದೆ.
ಈ ನೂತನ ಎಲೆಕ್ಟ್ರಿಕ್ ಎಸ್‌ಯುವಿ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿರಲಿದೆ. ಪ್ರಸ್ತುತ ಗ್ರಾಹಕರ ಖರೀದಿಗೆ ಲಭ್ಯವಿರುವ 'ಟಾಟಾ ಹ್ಯಾರಿಯರ್ ಇವಿ' ರೀತಿಯಲ್ಲಿಯೇ ದೊಡ್ಡ ಗಾತ್ರದ 65 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 538 ರಿಂದ 627 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡಬಹುದು ಎನ್ನಲಾಗಿದೆ.

ಹೊಸ 'ಟಾಟಾ ಸಿಯೆರಾ ಇವಿ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಈಗಿರುವ ಸಿಯೆರಾದಂತೆ ಟ್ರಿಪಲ್ ಸ್ಕ್ರೀನ್ ಸೆಟಪ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್, 12-ಸ್ಪೀಕರ್ ಬಿಜಿಎಲ್ ಸೌಂಡ್ ಸಿಸ್ಟಮ್, ಸನ್‌ರೂಫ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಆಟೋಮೆಟಿಕ್ ವೈಪರ್‌ಗಳು ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿರಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಸರೌಂಡ್ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಎಲ್ಲವು ಅಂದುಕೊಂಡಂತೆ ಜರುಗಿದರೆ, ನೂತನ 'ಸಿಯೆರಾ' ಎಲೆಕ್ಟ್ರಿಕ್ ಎಸ್‌ಯುವಿ ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಇವೇ ವರ್ಷದ ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಮಾರಾಟಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಕನಿಷ್ಠ ರೂ.15 ಲಕ್ಷ ಹಾಗೂ ಗರಿಷ್ಠ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಬಹುದು ಎನ್ನಲಾಗಿದೆ.
ಈ ಕಾರಿಗೆ ಸಾಲು - ಸಾಲು ಎದುರಾಳಿಗಳಿರಲಿವೆ. ಬಹುಮುಖ್ಯವಾಗಿ ಮಹೀಂದ್ರಾ ಬಿಇ6 (Mahindra BE6), ಹ್ಯುಂಡೈ ಕ್ರೆಟಾ ಇವಿ (Hyundai Creta EV), ಎಂಜಿ ಜಡ್ಎಸ್ ಇವಿ (MG ZS EV), ಮಾರುತಿ ಸುಜುಕಿ ಇ ವಿಟಾರಾ (Maruti Suzuki e Vitara) ಹಾಗೂ ಎಂಜಿ ವಿಂಡ್ಸರ್ ಇವಿ (MG Windsor EV) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.
Source: Rushlane


Click it and Unblock the Notifications








