591 ಕಿ.ಮೀ ರೇಂಜ್ ನೀಡುವ ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ
ಜರ್ಮನ್ ಸ್ಪೋರ್ಟ್ಸ್ ಕಾರ್ ತಯಾರಕ ಪೋರ್ಷೆ ತನ್ನ ಎರಡನೇ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಇದು ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯಾಗಿದೆ. ಈ ಹೊಸ ಪೋರ್ಷೆ ಮ್ಯಾಕನ್ ಟರ್ಬೊ (Porsche Macan Turbo) ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1.65 ಕೋಟಿ ಆಗಿದೆ.
ಪೋರ್ಷೆ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಲೆಕ್ಟ್ರಿಕ್ ಕಾರು Macan 4 ಮಾದರಿಯಾಗಿದೆ. ಇನ್ನು ಇದೀಗ ಹೊಸದಾಗಿ ಬಿಡುಗಡೆಗೊಳಿಸಿದ ಎರಡನೇ ಎಲೆಕ್ಟ್ರಿಕ್ ಮಾದರಿ ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಈ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವರು ಟೋಕನ್ ಮೊತ್ತ ಪಾವತಿಸಿ ಬುಕ್ ಮಾಡಬಹುದು. ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರಿನ ವಿತರಣೆಯು ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರಾರಂಭವಾಗುತ್ತದೆ.

ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಎಲೆಕ್ಟ್ರಿಕ್ ಮ್ಯಾಕನ್ ವಿನ್ಯಾಸವು ಅದರ ಪೆಟ್ರೋಲ್ ಮಾದರಿಯನ್ನು ಹೋಲುತ್ತದೆ. ಆದರೆ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ವಿಶಿಷ್ಟವಾದ ನಾಲ್ಕು-ಪಾಯಿಂಟ್ LED DRL ಗಳು, ಸ್ಪ್ಲಿಟ್ LED ಹೆಡ್‌ಲ್ಯಾಂಪ್‌ಗಳು, ಫ್ರೇಮ್‌ಲೆಸ್ ಡೋರುಗಳು, ಹಿಂಭಾಗದಲ್ಲಿ ಸಂಪರ್ಕಗೊಂಡ LED ಬಾರ್, ಕೂಪ್-ಶೈಲಿಯ ಬಾಡಿ ಮತ್ತು 22-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.
ಈ ಹೊಸ ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ 12.6-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಏರ್‌ಕಾನ್ ಕಂಟ್ರೋಲ್‌ಗಳಿಗಾಗಿ ಫಿಸಿಕಲ್ ಬಟನ್‌ಗಳು, ಹೆಡ್ಸ್-ಅಪ್ ಡಿಸ್ ಪ್ಲೇ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆಯ್ಕೆಯ 10.9-ಇಂಚಿನ ಡಿಸ್ ಪ್ಲೇಯನ್ನು ಆಗಿದೆ.

ಇದರೊಂದಿಗೆ ಆಯ್ಕೆಯ ಹಿಂಬದಿ ವ್ಹೀಲ್ ಸ್ಟೀರಿಂಗ್, ಪೋರ್ಷೆ ಆಕ್ಟಿವ್ ಸಸ್ಪೆಕ್ಷನ್ ನಿರ್ವಹಣೆ ಮತ್ತು ಪೋರ್ಷೆ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಇತರ ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 800-ವೋಲ್ಟ್ PPE ಆರ್ಕಿಟೆಕ್ಚರ್ ಅನ್ನು ಆಧರಿಸಿ, ಇದು 100-kWh ಬ್ಯಾಟರಿ ಪ್ಯಾಕ್ ಅನ್ನು (95 kWh ಬಳಸಬಹುದಾದ) ಸ್ಟ್ಯಾಂಡರ್ಡ್‌ನಂತೆ ಹೊಂದಿದೆ.
ಈ ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 613 ಕಿ.ಮೀ ರೇಂಜ್ ಅನ್ನು ಹೊಂದಿದೆ ಮತ್ತು ಮ್ಯಾಕನ್ ಟರ್ಬೊ (WLTP) ನಲ್ಲಿ 591 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಚಾರ್ಜಿಂಗ್ ಆಯ್ಕೆಗಳಲ್ಲಿ 11 kW AC ಚಾರ್ಜಿಂಗ್ ಮತ್ತು 270 kW DC ಫಾಸ್ಟಿಂಗ್ ಚಾರ್ಜಿಂಗ್ ಆಗಿದೆ, ಇದು ಎರಡನೆಯದು ಕೇವಲ 21 ನಿಮಿಷಗಳಲ್ಲಿ 10 ರಿಂದ 80 ಶೇಕಡಾ ಚಾರ್ಜ್ ಮಾಡುತ್ತದೆ.

ಪೋರ್ಷೆ ಮ್ಯಾಕನ್ ಟರ್ಬೊ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಎರಡೂ ರೂಪಾಂತರಗಳಲ್ಲಿ ಡ್ಯುಯಲ್-ಮೋಟರ್ ಸೆಟಪ್ ಅನ್ನು ಪಡೆಯುತ್ತದೆ. ಟರ್ಬೊ ರೂಪಾಂತರವು 630 bhp ಮತ್ತು 1,130 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 3.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
ಈ ಹೊಸ ಪೋರ್ಷೆ ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿಯು 260 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಮತ್ತೊಂದೆಡೆ, ಮ್ಯಾಕನ್ 4, 650 Nm ಟಾರ್ಕ್ ಉತ್ಪಾದನೆಯೊಂದಿಗೆ 402 bhp ಪವರ್ ಅನ್ನು ಉತ್ಪಾದನೆಯನ್ನು ಮಾಡುತ್ತದೆ. ಮ್ಯಾಕನ್ 4 ಮಾದರಿಯು 5.2 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಇದರ ಟಾಪ್ ಸ್ಪೀಡ್ 220 ಕಿ.ಮೀ ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








