ರಗಡ್ ಎಸ್‌ಯುವಿಗಳು: MG ಹೆಕ್ಟರ್ VS ಕಿಯಾ ಸೆಲ್ಟೋಸ್: ಯಾವುದು ಬೆಸ್ಟ್?
ಹೊಸ MG ಹೆಕ್ಟಾರ್, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ದಿಟ್ಟ ವಿನ್ಯಾಸ, ಅಪ್ರತಿಮ ಸೌಕರ್ಯ, ಪ್ರವರ್ತಕ ತಂತ್ರಜ್ಞಾನ ಮತ್ತು ಕ್ರಿಯಾತ್ಮಕ ಚಾಲನಾ ಅನುಭವ ನೀಡುತ್ತದೆ. ಹಾಗೆಯೇ ಕಿಯಾ ಸೆಲ್ಟೋಸ್ ಕೂಡ ಈ ವಿಭಾಗದಲ್ಲಿ ಅತ್ಯಂತ ರಗಡ್ ಹಾಗೂ ಸ್ಟೈಲಿಷ್ ಎಸ್‌ಯುವಿಯಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇವು ಭಾರತದ ಎರಡು ಜನಪ್ರಿಯ ಮಧ್ಯಮ ಗಾತ್ರದ SUV ಗಳಾಗಿವೆ. ಇವೆರಡರಲ್ಲಿ ಯಾವುದು ಬೆಸ್ಟ್ ಎಂದು ತಿಳಿಯಲು ನವೀಕರಿಸಿದ MG ಹೆಕ್ಟರ್ ಹಾಗೂ ಕಿಯಾ ಸೆಲ್ಟೋಸ್ ಎರಡರ ನಡೆವೆ ಹೋಳಿಕೆ ಮಾಡಿದ್ದೇವೆ.
ಕಿಯಾ ಸೆಲ್ಟೋಸ್ ಕಾರು ರೂ. 10.99 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 19,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಂಜಿ ಹೆಕ್ಟಾರ್ ಬೆಲೆಯು ರೂ. 10.99 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 18,99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಫೀಚರ್ಸ್: ಸೆಲ್ಟೋಸ್ ಕಾರಿನಲ್ಲಿ ವಿಸ್ತಾರವಾದ 75.18 ಸೆಂ.ಮೀ (30 - ಇಂಚಿನ) ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ ಪ್ಯಾನೆಲ್, 10-ವೇ ಪವರ್ಡ್ ಡ್ರೈವರ್ ಸೀಟ್, ಡ್ಯುಯಲ್ ಪೇನ್ ಪನೋರಮಿಕ್ ಸನ್‌ರೂಫ್, ಸ್ಮೋಕಿ ಬ್ಲ್ಯಾಕ್ & ವೈಟ್ ಡ್ಯುಯಲ್ - ಟೋನ್ ಇಂಟೀರಿಯರ್ ಮತ್ತು ಲೆದರೆಟ್ ಸೀಟ್‌ಗಳೊಂದಿಗೆ ವಿಶಾಲವಾದ ಕ್ಯಾಬಿನ್, 64 - ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ಮತ್ತು ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜರ್ ಒದಗಿಸಲಾಗಿದೆ.
ಎಂಜಿ ಹೆಕ್ಟರ್ ಕಾರಿನಲ್ಲಿ 35.56 cm (14 - ಇಂಚಿನ) HD ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅಟೋಮ್ಯಾಟಿಕ್ ಟೈಲ್‌ಗೇಟ್, PM 2.5 ಫಿಲ್ಟರ್‌ನೊಂದಿಗೆ ಏರ್ ಪ್ಯೂರಿಫೈಯರ್, ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, 8-ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ಮತ್ತು 70+ ವೈಶಿಷ್ಟ್ಯಗಳೊಂದಿಗೆ MG ಯ ಸುಧಾರಿತ i-SMART ಸಂಪರ್ಕಿತ ತಂತ್ರಜ್ಞಾನ, ರೈನ್ ಸೆನ್ಸಾರ್ ವೈಪರ್‌ಗಳಂತಹ ಹಲವು ಫೀಚರ್ಸ್ ನೀಡಲಾಗಿದೆ.

ಸುರಕ್ಷತೆ: ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ABS, EBD, ESP, TCS, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಬ್ರೇಕ್ ಅಸಿಸ್ಟ್‌ನಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಎಲೆಕ್ಟ್ರಾನಿಕ್ ಸ್ಥಿರತೆ ವ್ಯವಸ್ಥೆಗಳೊಂದಿಗೆ ಸಮಗ್ರ ಸುರಕ್ಷತಾ ಪ್ಯಾಕೇಜ್ ಮತ್ತು ADAS ಸೂಟ್ ಅನ್ನು ಪಡೆದಿದೆ. ವೀಲ್ ವ್ಯೂ ನೀಡುವ 360° HD ಕ್ಯಾಮೆರಾದೊಂದಿಗೆ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ.
ಹೊಸ ಕಿಯಾ ಸೆಲ್ಟೋಸ್, 6-ಏರ್‌ಬ್ಯಾಗ್‌ಗಳು, ರೋಲ್‌ಓವರ್ ಸೆನ್ಸರ್ ಮತ್ತು ರಿಯರ್ ಆಕ್ಯುಪೆಂಟ್ ಅಲರ್ಟ್ ಸೇರಿದಂತೆ ದೃಢವಾದ 24 ಸ್ಟ್ಯಾಂಡರ್ಡ್ ಸುರಕ್ಷತಾ ಪ್ಯಾಕ್ ಅನ್ನು ಒಳಗೊಂಡಿದೆ. ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ (ABS), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಕ್ರೂಸ್ ಕಂಟ್ರೋಲ್ ಸೇರಿದಂತೆ 21 ಸ್ವಾಯತ್ತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ADAS ಲೆವೆಲ್-2 ಸೂಟ್ ನೀಡಲಾಗಿದೆ.

ಎಂಜಿನ್: ಹೊಸ ಹೆಕ್ಟರ್ 1.5L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (CVT & MT) 143 PS ಪವರ್ ಮತ್ತು 250 NM ಟಾರ್ಕ್ ಅನ್ನು ನೀಡುವುದರಿಂದ, ಹೊಸ ಹೆಕ್ಟರ್ ಅನ್ನು ಎಂದಿಗಿಂತಲೂ ಹೆಚ್ಚು ಸ್ಟೈಲಿಶ್ ಪವರ್‌ಫುಲ್ ಕಾರಾಗಿದೆ. ಸ್ಮಾರ್ಟ್ ಕೀ ಮತ್ತು ಆಂಟಿ ಥೆಫ್ಟ್ ಇಮ್ಮೊಬಿಲೈಸೇಶನ್‌ನೊಂದಿಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಅನ್ನು ಸಹ ಒಳಗೊಂಡಿದೆ.
ಕಿಯಾ ಸೆಲ್ಟೋಸ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಂತೆ ವಿಶಾಲವಾದ ಪವರ್‌ಟ್ರೇನ್ ಶ್ರೇಣಿಯನ್ನು ನೀಡುತ್ತದೆ, ಜೊತೆಗೆ ಮ್ಯಾನುವಲ್, iMT, IVT, DCT, ಹಾಗೂ ಸ್ವಯಂಚಾಲಿತದಂತಹ ಬಹು ಪ್ರಸರಣ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








