ಸ್ವದೇಶಿ ಬ್ರ್ಯಾಂಡ್‌ನ್ನು ಕೈಬಿಡದ ಜನ: ನಂ.1 ಸ್ಥಾನದಲ್ಲಿ ಟಾಟಾ.. ಎಂಜಿ & ಮಹೀಂದ್ರಾಗಳನ್ನು ಹಿಂದಿಕ್ಕಿದೆ!

ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ 2026ರ ಜನವರಿಯಲ್ಲಿ ಒಟ್ಟು 8,616 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, ಶೇಕಡ 52.4% ಮಾರುಕಟ್ಟೆ ಪಾಲನ್ನು ಹೊಂದಿದೆ. ದ್ವಿತೀಯ ಸ್ಥಾನದಲ್ಲಿ ಎಂಜಿ ಮೋಟಾರ್ ಇದ್ದು, 3,731 ಯುನಿಟ್‌ಗಳನ್ನು ಮಾರಿದೆ. ತೃತೀಯ ಸ್ಥಾನದಲ್ಲಿರುವ ಮಹೀಂದ್ರಾ ಕಂಪನಿಯು 3,660 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನಂತರದ ಸ್ಥಾನದಲ್ಲಿ ಹ್ಯುಂಡೈ (247ಯುನಿಟ್) ಹಾಗೂ ಕಿಯಾ (178 ಯುನಿಟ್) ಕಂಪನಿಗಳಿವೆ.

ಟಾಪ್ 10 ಎಲೆಕ್ಟ್ರಿಕ್ ಕಾರುಗಳು ಯಾವುವು:

ಟಾಟಾ ನೆಕ್ಸಾನ್ ಇವಿಯು 3,098 ಯುನಿಟ್‌ ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಎಂಜಿ ವಿಂಡ್ಸರ್ ಇದ್ದು, 2,567ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಮೂರನೇ ಸ್ಥಾನವನ್ನು ಟಾಟಾ ಹ್ಯಾರಿಯರ್ ಇವಿ ಭದ್ರಪಡಿಸಿಕೊಂಡಿದ್ದು, 1,995 ಯುನಿಟ್‌ಗಳನ್ನು ಮಾರಲಾಗಿದೆ. ನಾಲ್ಕನೇ ಸ್ಥಾನವನ್ನು ಮಹೀಂದ್ರಾ ಎಕ್ಸ್ಇವಿ 9ಇ ತನ್ನದಾಗಿಸಿಕೊಂಡಿದ್ದು, 1,945 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಐದನೇ ಸ್ಥಾನದಲ್ಲಿ ಟಾಟಾ ಟಿಯಾಗೊ ಇವಿ ಇದ್ದು, 1,223 ಯುನಿಟ್‌ಗಳು ಮಾರಾಟಗೊಂಡಿವೆ.

Top 10 Electric Cars Sales January 2026 Nexon EV Windsor Ev Harrier EV XEV 9e And Tiago EV

ಆರನೇ ಸ್ಥಾನವು ಟಾಟಾ ಕರ್ವ್ ಇವಿಯ ತೆಕ್ಕೆಯಲ್ಲಿದ್ದು, 1,100 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಏಳನೇ ಸ್ಥಾನದಲ್ಲಿ ಮಹೀಂದ್ರಾ ಬಿಇ6 ಇದ್ದು, 1,028 ಯುನಿಟ್‌ಗಳು ಮಾರಾಟವಾಗಿವೆ. ಎಂಟನೇ ಸ್ಥಾನವು ಟಾಟಾ ಪಂಚ್ ಇವಿಯ ಅಧೀನದಲ್ಲಿದ್ದು, 980 ಯುನಿಟ್‌ಗಳನ್ನು ಮಾರಲಾಗಿದೆ. ಒಂಬತ್ತನೇ ಸ್ಥಾನದಲ್ಲಿ ಎಂಜಿ ಕಾಮೆಟ್ ಇವಿ ಕುತಿದ್ದು, 766 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹತ್ತನೇ ಸ್ಥಾನದಲ್ಲಿ ಮಹೀಂದ್ರಾ ಎಕ್ಸ್ಇವಿ 9ಎಸ್ ಇದ್ದು, 612 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

ನಂಬರ್ 1 ಟಾಟಾ ನೆಕ್ಸಾನ್ ಇವಿ (Tata Nexon EV) ವಿಶೇಷತೆಗಳೇನು:

ಈ ಕಾರು ಅಗ್ಗದ ಬೆಲೆಯಲ್ಲಿಯೂ ಲಭ್ಯವಿದೆ. ರೂ.12.49 ಲಕ್ಷದಿಂದ ರೂ.17.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 30 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 275 ರಿಂದ 489 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.

Top 10 Electric Cars Sales January 2026 Nexon EV Windsor Ev Harrier EV XEV 9e And Tiago EV

ನೂತನ 'ನೆಕ್ಸಾನ್ ಇವಿ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ ಹಾಗೂ ಸನ್‌ರೂಫ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾನ್ನು ಪಡೆದಿದೆ.

ನೆಕ್ಸಾನ್ ಇವಿ ಪ್ರತಿಸ್ಪರ್ಧಿ ನಂಬರ್ 2 ಎಂಜಿ ವಿಂಡ್ಸರ್ ಇವಿ (MG Windsor EV) ಹೇಗಿದೆ:

ಇದು ಕೈಗೆಟುಕುವ ದರದಲ್ಲೇ ದೊರೆಯುತ್ತದೆ. ರೂ.14 ಲಕ್ಷದಿಂದ ರೂ.18.50 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 38 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) & 52.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. 331 ರಿಂದ 449 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.

Top 10 Electric Cars Sales January 2026 Nexon EV Windsor Ev Harrier EV XEV 9e And Tiago EV

ಹೊಸ 'ವಿಂಡ್ಸರ್ ಇವಿ' 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ನಂಬರ್ 3 ಟಾಟಾ ಹ್ಯಾರಿಯರ್ ಇವಿ (Tata Harrier EV) ವಿಶೇಷತೆಗಳೇನು:

ಈ ಕಾರು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಿದೆ. ರೂ.21.49 ಲಕ್ಷದಿಂದ ರೂ.30.23 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 65 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. 538 ರಿಂದ 627 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. 14.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

More from DriveSpark

Article Published On: Friday, February 27, 2026, 8:30 [IST]
English summary
Top 10 electric cars sales january 2026 nexon ev windsor ev harrier ev xev 9e and tiago ev
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+