ಕ್ಷೌರಿಕನಿಂದ ಕೋಟ್ಯಾಧಿಪತಿ.. ಬಹುಕೋಟಿ ಬೆಲೆಯ Range Rover ಕಾರು ಖರೀದಿಸಿದ ಕನ್ನಡಿಗ!

ಬೆಂಗಳೂರಿನ ರಮೇಶ್ ಬಾಬು (Ramesh Babu) ವೃತ್ತಿಯಲ್ಲಿ ಕ್ಷೌರಿಕರಾಗಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದು, ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಾ ಬಂದಿದ್ದಾರೆ. 'ಬಿಲಿಯನೇರ್ ಕ್ಷೌರಿಕ' ಎಂದೇ ಖ್ಯಾತಿ ಗಳಿಸಿದ್ದಾರೆ. ಟ್ರಾವೆಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದು, ಐಷಾರಾಮಿ ಕಾರುಗಳನ್ನು ಬಾಡಿಗೆ ನೀಡುತ್ತಾರೆ. ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಮೇಬ್ಯಾಕ್, ಮರ್ಸಿಡಿಸ್ ಬೆಂಜ್ ಜಿ-ವ್ಯಾಗನ್, ಲ್ಯಾಂಡ್ ರೋವರ್ ಡಿಫೆಂಡರ್ 130 ಹಾಗೂ ಬಿಎಂಡಬ್ಲ್ಯೂ ಐ7 ಸೇರಿದಂತೆ 200ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ.

ಸದ್ಯ, ರಮೇಶ್ ಬಾಬು ಬಹುಕೋಟಿ ಬೆಲೆಯ ಹೊಚ್ಚ ಹೊಸ ರೇಂಜ್ ರೋವರ್ ವೋಗ್ (Range Rover Vogue) ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲೂ ಪೋಸ್ಟ್ ಮಾಡಿದ್ದಾರೆ. ಸ್ನೇಹಿತರು ಹಾಗೂ ಬಂಧು ಬಳಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತದೆ.

Bengaluru Barber Turned Millionaire Ramesh Babu Buys New Range Rover Vogue Suv Details

ರೇಂಜ್ ರೋವರ್ ವೋಗ್ ವಿಶೇಷತೆಗಳೇನು:

ಈ ಐಷಾರಾಮಿ ಎಸ್‌ಯುವಿಯು ದುಬಾರಿ ಬೆಲೆಯನ್ನು ಹೊಂದಿದೆ. ರೂ.2.31 ಕೋಟಿಯಿಂದ ರೂ.4.25 ಕೋಟಿ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದ್ದು, ನೋಡುಗರನ್ನು ಸೆಳೆಯುತ್ತದೆ. ಒಸ್ಟುನಿ ಪರ್ಲ್ ವೈಟ್, ಹಕುಬಾ ಸಿಲ್ವರ್, ಸಿಲಿಕಾನ್ ಸಿಲ್ವರ್, ಪೋರ್ಟೊಫಿನೊ ಬ್ಲೂ, ಕಾರ್ಪಾಥಿಯನ್ ಗ್ರೇ, ಈಗರ್ ಗ್ರೇ, ಸ್ಯಾಂಟೊರಿನಿ ಬ್ಲ್ಯಾಕ್, ಫ್ಯೂಜಿ ವೈಟ್ ಹಾಗೂ ಬೆಲ್ಗ್ರೇವಿಯಾ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 5/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 541 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇನ್‌ನ್ನು ಒಳಗೊಂಡಿದೆ. 5,052 ಎಂಎಂ ಉದ್ದ, 2,209 ಎಂಎಂ ಅಗಲ ಹಾಗೂ 1,870 ಎಂಎಂ ಎತ್ತರವಿದೆ. 2,997 ವೀಲ್‌ಬೇಸ್‌ನ್ನು ಒಳಗೊಂಡಿದೆ.

Bengaluru Barber Turned Millionaire Ramesh Babu Buys New Range Rover Vogue Suv Details

ನೂತನ ರೇಂಜ್ ರೋವರ್ ವೋಗ್ ಶಕ್ತಿಯುತವಾದ ವಿವಿಧ ಪವರ್‌ಟ್ರೇನ್‌ ಆಯ್ಕೆಯನ್ನು ಹೊಂದಿದೆ. 3.0-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್-6 ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 4.4-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಹಾಗೂ 3.0-ಲೀಟರ್ ಇನ್‌ಲೈನ್-6 ಟರ್ಬೊ ಡೀಸೆಲ್ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 13.16 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಹೊಸ ರೇಂಜ್ ರೋವರ್ ಎಸ್‌ಯುವಿ 13.1 ಇಂಚಿನ ಬಾಗಿದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 13.7 ಇಂಚಿನ ಫುಲ್ ಡಿಜಿಟಲ್ ಹೆಚ್‌ಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಮ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ರಮೇಶ್ ಬಾಬು ರೋಲ್ಸ್ ರಾಯ್ಸ್ ಘೋಸ್ಟ್ (Rolls-Royce Ghost) ಕಾರಿನ ಮಾಲೀಕರು ಹೌದು:

ನೂತನ ರೋಲ್ಸ್ ರಾಯ್ಸ್ ಘೋಸ್ಟ್ ಕನಿಷ್ಠ ರೂ.6.95 ಕೋಟಿ ಹಾಗೂ ಗರಿಷ್ಠ ರೂ.7.95 ಕೋಟಿ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. 6.75-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 250 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ. ಕೇವಲ 4.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಕಾರು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 490 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಪಡೆದಿದೆ. ಅಡ್ವಾನ್ಸ್ಡ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಮೆರಿಡಿಯನ್ ಹೈ-ಎಂಡ್ ಆಡಿಯೋ ಸಿಸ್ಟಮ್, ಹೆಡ್ಸ್-ಅಪ್ ಡಿಸ್​ಪ್ಲೇ, ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

More from DriveSpark

Article Published On: Monday, October 6, 2025, 18:13 [IST]
English summary
Bengaluru barber turned millionaire ramesh babu buys new range rover vogue suv details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+