ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಇತ್ತೀಚೆಗಿನ ದಿನಗಳಲ್ಲಿ ಫ್ಯಾನ್ಸಿ ನಂಬರ್ ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗುತ್ತಿದೆ. ನಿರ್ದಿಷ್ಟ ಸಂಖ್ಯೆ ಬಯಸಿ ಹಲವರ ಮಧ್ಯೆ ಪೈಪೋಟಿ ಏರ್ಪಡುತ್ತಿದ್ದು, ಮನ ಮೆಚ್ಚಿನ ನಂಬರ್ ಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವವರ ಸಂಖ್ಯೆಗೆ ಏನು ಕಡಿಮೆ ಇಲ್ಲ.

By Praveen Sannamani

ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹಾಕಿಸಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಹಣ ಇರುವವರು ತಮಗೆ ಬೇಕಾದ ನಂಬರ್ ಪಡೆಯಲು ಎಷ್ಟು ಬೇಕಾದರೂ ದುಡ್ಡು ಪಾವತಿಸಲು ರೆಡಿಯಾಗುತ್ತಿದ್ದಾರೆ. ಇತ್ತೀಚೆಗೆ ರಾಜಸ್ತಾನ ಮೂಲದ ಉದ್ಯಮಿಯೊಬ್ಬರು ಕೂಡಾ ತಮ್ಮ ಹೊಸ ಕಾರಿಗೆ ಫ್ಯಾನ್ಸಿ ನಂಬರ್ ಪಡೆಯಲು ಭಾರೀ ಮೊತ್ತ ಪಾವತಿಸಿ ತಮ್ಮ ಫೇವರಿಟ್ ಫ್ಯಾನ್ಸಿ ನಂಬರ್ ಗಿಟ್ಟಿಸಿಕೊಂಡಿದ್ದಾರೆ.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ರಾಜಸ್ತಾನ ಮೂಲದ ಉದ್ಯಮಿ ರಾಹುಲ್ ತನೇಜಾ ಎನ್ನುವವರು ತಮ್ಮ ದುಬಾರಿ ಬೆಲೆಯ ಜಾಗ್ವಾರ್ ಸೆಡಾನ್ ಕಾರಿಗಾಗಿ ಆರ್‌ಜೆ 45 ಸಿಜಿ 0001 ಫ್ಯಾನ್ಸಿ ನಂಬರ್ ಖರೀದಿಸಿದ್ದು, ಅವರು ಖರೀದಿಸಿ ಈ ನಂಬರ್ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಆರ್‌ಜೆ 45 ಸಿಜಿ 0001 ಫ್ಯಾನ್ಸಿ ನಂಬರ್ ಖರೀದಿಸಲು ಬರೋಬ್ಬರಿ 16 ಲಕ್ಷ ರೂ. ಪಾವತಿಸಿರುವ ಉದ್ಯಮಿ ರಾಹುಲ್ ತನೇಜಾ, ಜಾಗ್ವಾರ್ ಕಾರಿಗೆ ಅಷ್ಟೇ ಅಲ್ಲದೇ ಇದುವರೆಗೆ ಖರೀದಿ ಸುಮಾರು 4 ದುಬಾರಿ ಕಾರುಗಳಿಗೂ 0001 ಫ್ಯಾನ್ಸಿ ನಂಬರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಮೊದಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ಇವರು ಕಳೆದ ಕೆಲ ವರ್ಷಗಳ ಹಿಂದಷ್ಟೇ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದನ್ನು ಸ್ಥಾಪಿಸಿದಲ್ಲದೇ ಪ್ರತಿ ವರ್ಷ ಕೋಟಿ ಕೋಟಿ ಲೆಕ್ಕದಲ್ಲೇ ಲಾಭಗಳಿಸುತ್ತಿದ್ದು, ಇದೀಗ ವರ್ಷಕ್ಕೊಂದು ದುಬಾರಿ ಕಾರು ಖರೀದಿಸುವುದು ಹವ್ಯಾಸವಾಗಿ ಹೋಗಿದೆ.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಕಳೆದ ಹಿಂದಷ್ಟೇ 1.50 ಕೋಟಿ ಮೌಲ್ಯದ ಜಾಗ್ವಾರ್ ಲಗ್ಷುರಿ ಸೆಡಾನ್ ಖರೀದಿಸಿರುವ ರಾಹುಲ್ ತನೇಜಾ ಆರ್‌ಜೆ 45 ಸಿಜಿ 0001 ಫ್ಯಾನ್ಸಿ ನಂಬರ್‌ಗಾಗಿ ಸಾಕಷ್ಟು ಕಷ್ಟುಪಟ್ಟು ಪಡೆದುಕೊಂಡಿದ್ದಾರೆ. ಇದೇ ನಂಬರ್‌ಗಾಗಿ ಕಾಯ್ದು ಕುಳಿತದ್ದ ಹಲವರಿಗೆ ಶಾಕ್ ನೀಡಿರುವ ಇವರು ಬರೋಬ್ಬರಿ 16 ಲಕ್ಷಕ್ಕೆ ಬಿಡ್ ಮಾಡುವ ಮೂಲಕ ನೆಚ್ಚಿನ ನಂಬರ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಸಂಖ್ಯೆ 1ರ ಮೇಲೆ ಸಾಕಷ್ಟು ಅಭಿಮಾನ ಹೊಂದಿರುವ ಇವರು ಪ್ರತಿ ವಿಚಾರದಲ್ಲೂ ನಂ.1 ಗಾಗಿ ಹೆಚ್ಚು ಶ್ರಮವಹಿಸುತ್ತಿದ್ದಾರೆ. ಹೀಗಾಗಿ ಸಂಸ್ಥೆಯ ನೋಂದಣಿ ಸಂಖ್ಯೆ ಸೇರಿದಂತೆ ಮೊಬೈಲ್ ಕೂಡಾ ಫೈವ್ 1ಎಸ್ ಇದೇ ಅಂದ್ರೆ ನೀವು ನಂಬಲೇಬೇಕು.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಯಾಕೆಂದ್ರೆ ಬಾಲ್ಯದಲ್ಲಿ ತುತ್ತು ಅನ್ನಕ್ಕೂ ಪರದಾಟಿದ್ದ ರಾಹಲ್ ತನೇಜಾ ರೈಲ್ವೆ ನಿಲ್ದಾಣದಲ್ಲಿ ಲಗೇಜ್ ಹೊರುವ ಕೆಲಸದಿಂದ ಹಿಡಿದು ಆಟೋ ರಿಕ್ಷಾ ಚಾಲನೆ, ಬಿದಿ ಬದಿಯಲ್ಲಿ ಲೆದರ್ ಜಾಕೆಟ್ ಮಾರಾಟ ತದನಂತರ ಸ್ನೇಹಿತರ ಸಹಾಯದೊಂದಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೇ ಇದೀಗ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರ ಮಾಲೀಕ ಕೂಡಾ ಆಗಿದ್ದಾರೆ.

ಫ್ಯಾನ್ಸಿ ನಂಬರ್‌ಗಾಗಿ ಈ ಉದ್ಯಮಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ತಮ್ಮ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಅಂಗಸಂಸ್ಥೆಗಳನ್ನು ಸ್ಥಾಪಿಸಿರುವ ಇವರು ಇದೀಗ ಮಿಲೇನಿಯರ್ ಮಟ್ಟದಲ್ಲಿ ಮಿಂಚುತ್ತಿದ್ದು, ಟಾಪ್ ಎಂಡ್ ಆಡಿ, ಬೆಂಝ್ ಮತ್ತು ಬಿಎಂಡಬ್ಲ್ಯು ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತವನ್ನ 10 ಪಟ್ಟು ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ...

ಹೊಸ ಕಾರಿನ ಲೈಫ್ ಟ್ಯಾಕ್ಸ್ ಕಟ್ಟೊದಕ್ಕೆ ಮುನ್ನ ಈ ವಿಚಾರ ಗೊತ್ತಿರಲಿ...

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

Most Read Articles

Kannada
Read more on fancy number
English summary
Jaipur millionaire splurges lakhs of rupees on fancy number plates.
Story first published: Thursday, May 17, 2018, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X