ಹೊಸ ಕಾರಿನ ಲೈಫ್ ಟ್ಯಾಕ್ಸ್ ಕಟ್ಟೊದಕ್ಕೆ ಮುನ್ನ ಈ ವಿಚಾರ ಗೊತ್ತಿರಲಿ...
ಹೊಸ ಕಾರಿನ ಲೈಫ್ ಟ್ಯಾಕ್ಸ್ ಕಟ್ಟೊದಕ್ಕೆ ಮುನ್ನ ಈ ವಿಚಾರ ಗೊತ್ತಿರಲಿ...
ಹೊಸ ಕಾರುಗಳನ್ನು ಖರೀದಿಸುವಾಗ ಬೆಲೆಗಳ ಬಗ್ಗೆ ಕುಲಂಕೂಶವಾಗಿ ವಿಚಾರಣೆ ಮಾಡದೇ ಖರೀದಿ ಮಾಡುವುದು ಕೆಲವೊಮ್ಮೆ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಹೊಡೆತ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೇಂದ್ರೆ ಇಲ್ಲೊಬ್ಬ ಗ್ರಾಹಕ ಕೂಡಾ ಖರೀದಿ ಮಾಡಿದ ಹೊಸ ಕಾರಿನ ಲೈಫ್ ಟ್ಯಾಕ್ಸ್ ಕಟ್ಟುವ ವಿಚಾರಕ್ಕೆ ಕಾನೂನು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಹೌದು.. ಹೊಸ ಕಾರು ಖರೀದಿಸುವಾಗ ಕಾರು ಮಾಲೀಕರು ಕಾರಿನ ಬೆಲೆಗೆ ಅನುಗುಣವಾಗಿ ಆ ರಾಜ್ಯದ ಆರ್‌ಟಿಓ ನಿಯಮಗಳ ಪ್ರಕಾರ ಲೈಫ್ ಟ್ಯಾಕ್ಸ್ ಪಾವತಿ ಮಾಡಲೇಬೇಕು. ಆದ್ರೆ ಹೈದ್ರಾಬಾದ್ ನಡೆದ ಪ್ರಕರಣವೊಂದರಲ್ಲಿ ಕಾರಿನ ಬೆಲೆಗೆ ಅನುಗುಣವಾಗಿ ಲೈಫ್ ಟ್ಯಾಕ್ಸ್ ವಸೂಲಿ ಮಾಡಬೇಕಿದ್ದ ಆರ್‌ಟಿಓ ಅಧಿಕಾರಿಗಳು ಕಾನೂನು ಬಾಹಿರವಾಗಿ ತೆರಿಗೆ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಹೈದ್ರಾಬಾದ್ ಮೂಲದ ಕಿಶೋರ್ ರೈ ಎಂಬುವವರು ಕಳೆದ ತಿಂಗಳ ಹಿಂದಷ್ಟೇ ದುಬಾರಿ ಬೆಲೆಯ ವೊಲ್ವೋ ಎಕ್ಸ್‌ಸಿ60 ಎಸ್‌ಯುವಿ ಕಾರನ್ನು ಖರೀದಿ ಮಾಡಿದ್ದರು. ಎಕ್ಸ್‌ಶೋರಂ ಪ್ರಕಾರ ರೂ. 55.90 ಲಕ್ಷ ಬೆಲೆ ಹೊಂದಿರುವ ಈ ಕಾರಿನ ಮೇಲೆ ಕಿಶೋರ್ ಅವರು ರೂ.3 ಲಕ್ಷ ಆಫರ್ ಪಡೆದುಕೊಂಡಿದ್ದರು.

ಹೀಗಾಗಿ ಹೊಸ ಕಾರಿನ ಬೆಲೆಯು ರೂ.52.90 ಲಕ್ಷಕ್ಕೆ ನಿಗದಿಯಾಗಿತ್ತು. ಆದ್ರೆ ಕಾರು ಖರೀದಿ ಮಾಡಿದ ಬೆಲೆ ಆಧಾರದ ಮೇಲೆ ಲೈಫ್ ಟ್ಯಾಕ್ಸ್ ನಿಗದಿ ಮಾಡದ ಆರ್‌ಟಿಓ ಅಧಿಕಾರಿಗಳು ಎಕ್ಸ್‌ಶೋರಂ ಬೆಲೆಗಳಿಗೆ ಅನುಗುಣವಾಗಿ ಲೈಫ್ ಟ್ಯಾಕ್ಸ್ ವಸೂಲಿ ಮಾಡಿದ್ದರು.

ಈ ಬಗ್ಗೆ ತಕರಾರು ಮಾಡಿದ್ದ ಕಾರು ಮಾಲೀಕ ಕಿಶೋರ್ ತಾನು ಪಾವತಿ ಮಾಡಿದ ಬೆಲೆ ಆಧಾರದ ಮೇಲೆ ಲೈಫ್ ಟ್ಯಾಕ್ಸ್ ಸಲ್ಲಿಸುವುದಾಗಿ ಪಟ್ಟುಹಿಡಿದ್ದರು. ಹೀಗಿದ್ದರೂ ಆರ್‌ಟಿಓ ಅಧಿಕಾರಿಗಳು ಕಾರಿನ ನೋಂದಣಿಯಲ್ಲಿ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಎಕ್ಸ್‌ಶೋರಂ ಬೆಲೆ ಆಧಾರ ಮೇಲೆ ಲೈಫ್ ಟ್ಯಾಕ್ಸ್ ನಿಗದಿ ಮಾಡಿದ್ದರು.

ಈ ಬಗ್ಗೆ ಗ್ರಾಹಕರ ವೇದಿಕೆಯ ಮೊರೆ ಹೊಗಿದ್ದ ಕಾರು ಮಾಲೀಕ ಕಿಶೋರ್ ರೈ ಅವರು ಆದ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸೂಕ್ತ ನ್ಯಾಯ ನೀಡುವಂತೆ ಆಗ್ರಹಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಹೊಸ ವಾಹನಗಳ ಮೇಲೆ ನಿಗದಿಪಡಿಸಲಾಗುವ ಲೈಫ್ ಟ್ಯಾಕ್ಸ್ ಗ್ರಾಹಕ ಪಾವತಿಸಿದ ಬೆಲೆ ಮೇಲೆ ನಿಗದಿಯಾಗಬೇಕೇ ಹೊರತು ಎಕ್ಸ್‌ಶೋರಂ ಪ್ರಕಾರ ತೆರಿಗೆ ನಿರ್ಧರಿಸುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಜೊತೆಗೆ ಕಾರು ನೋಂದಣಿ ವೇಳೆ ವಸೂಲಿ ಮಾಡಿರುವ ಲೈಫ್ ಟ್ಯಾಕ್ಸ್ ದರಗಳ ಹೆಚ್ಚುವರಿ ಮೊತ್ತವನ್ನು ವಾಪಸ್ ನೀಡುವಂತೆ ಸೂಚಿಸಿದೆ. ಹೀಗಾಗಿ ವೊಲ್ವೋ ಎಕ್ಸ್‌ಸಿ60 ಕಾರಿನ ಮೇಲೆ ಬರೋಬ್ಬರಿ ರೂ. 50 ಸಾವಿರ ತೆರಿಗೆ ಉಳಿತಾಯವಾಗಿದೆ.

ಇನ್ನು ಬಹುತೇಕ ಮಾಲೀಕರಿಂದ ಕಾರು ನೋಂದಣಿ ವೇಳೆ ಆರ್‌ಟಿಓ ಅಧಿಕಾರಿಗಳು ಕಾರಿನ ಎಕ್ಸ್‌ಶೋರಂ ಆಧಾರ ಮೇಲೆ ಲೈಫ್ ಟ್ಯಾಕ್ಸ್ ವಸೂಲಿ ಮಾಡಲಾಗುತ್ತಿದ್ದು, ಇದು ತೆರಿಗೆ ನಿಯಮಗಳಿಗೆ ವಿರುದ್ಧವಾಗಿದೆ ಎಂಬುವುದನ್ನ ಸ್ವತಃ ವಕೀಲರಾಗಿರುವ ಕಿಶೋರ್ ರೈ ಅವರು ಸಾಬೀತುಪಡಿಸಿದ್ದಾರೆ.

ಹೀಗಾಗಿ ಹೊಸ ವಾಹನಗಳನ್ನು ಒಂದೇ ಆಫರ್ ಮೇಲೆ ಖರೀದಿ ಮಾಡಿದಾಗ ಕಾರಿನ ನೋಂದಣಿ ಸಂದರ್ಭದಲ್ಲಿ ಎಕ್ಸ್‌ಶೋರಂ ಬೆಲೆಯ ಪ್ರಕಾರ ಲೈಫ್ ಟ್ಯಾಕ್ಸ್ ಪಾವತಿ ಮಾಡುವ ಮುನ್ನ ವಿಚಾರಿಸಿ ತೆರಿಗೆ ಪಾವತಿಸಬೇಕಿದ್ದು, ಒಂದು ವೇಳೆ ನೀವು ಕೂಡಾ ಹೊಸ ಕಾರು ಖರೀದಿಸುವಾಗ ಎಕ್ಸ್‌ಶೋರಂ ಬೆಲೆ ಬಿಟ್ಟು ಆಫರ್ ಬೆಲೆಗಳಲ್ಲಿ ವಾಹನ ಖರೀದಿಸುವ ಈ ಬಗ್ಗೆ ಎಚ್ಚರವಹಿಸಿ ತೆರಿಗೆ ಪಾವತಿ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...
ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...
ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್ ವಿಶೇಷತೆ ಏನು?
ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..


Click it and Unblock the Notifications








