ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

Written By:

ಗ್ರಾಮೀಣ ಪ್ರದೇಶಗಳಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಇಲ್ಲದ ಹಿನ್ನೆಲೆ ದಿನನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಲೇ ಇದ್ದು, ಮೊನ್ನೆ ಕೂಡಾ ತಮಿಳುನಾಡಿನಾಡಿನ ತುತುಕೂಡಿ ಬಳಿ ನಡೆದ ಭೀಕರ ಅಪಘಾತ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ರಸ್ತೆ ದಾಟುವಾಗ ಪಾದಾಚಾರಿಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅದರಲ್ಲೂ ವಾಹನಗಳ ವೇಗವಾಗಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈ ಎಲ್ಲಾ ಕಣ್ಣಾಗಿದ್ದರೂ ಸಾಲದು. ಹೀಗಿರುವಾಗ ರಸ್ತೆ ದಾಟುವ ಭರದಲ್ಲಿ ಅಡ್ಡಾದಿಡ್ಡಿ ಓಡಿದ್ರೆ ಪ್ರಾಣ ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ತಮಿಳುನಾಡಿನ ತುತುಕೂಡಿ ಬಳಿ ನಡೆದ ಅಪಘಾತ ಪ್ರಕರಣವೇ ಸಾಕ್ಷಿ...

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ರಾಷ್ಟ್ರೀಯ ಹೆದ್ದಾರಿ ಅಂದ ಮೇಲೆ ಪ್ರತಿಯೊಂದು ವಾಹನವು ಕೂಡಾ ನಿರ್ದಿಷ್ಟ ಮಟ್ಟದ ವೇಗದಲ್ಲಿ ಸಂಚರಿಸುವುದು ಸಾಮಾನ್ಯ. ಹೀಗಿರುವಾಗ ರಸ್ತೆ ದಾಟುವ ಮುನ್ನ ವಾಹನಗಳನ್ನು ನೋಡಿಕೊಂಡು ರಸ್ತೆ ದಾಟುವುದು ಸುರಕ್ಷಾ ದೃಷ್ಠಿಯಿಂದ ಒಳ್ಳೆಯದು.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಆದ್ರೆ ತಮಿಳುನಾಡಿನಾಡಿನ ತುತುಕೂಡಿ ಬಳಿ ನಡೆದ ಅಪಘಾತವನ್ನು ನೋಡಿದ್ರೆ ಎಂತವರಿಗೂ ಮೈ ಜುಂ ಎನ್ನದೇ ಇರಲಾರದು. ಯಾಕೇಂದ್ರೆ ವೇಗದಲ್ಲಿದ್ದ ಟೊಯೊಟಾ ಇನೋವಾ ಕಾರು ರಸ್ತೆ ದಾಟುತ್ತಿದ್ದ ಯುವಕನಿಗೆ ರಭಸವಾಗಿ ಗುದ್ದಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಘಟನೆಗೂ ಮನ್ನ ಹೆದ್ದಾರಿಯ ಒಂದು ಕಡೆಯ ಲೈನ್ ದಾಟಿದ್ದ ಯುವಕನು ಮತ್ತೊಂದು ಕಡೆಯ ಲೈನ್ ದಾಟುವ ವೇಳೆ ಈ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ಟೊಯೊಟಾ ಇನೋವಾ ಕಾರನ್ನು ನೋಡದೇ ರಸ್ತೆ ದಾಟಲು ಮುಂದಾಗಿದ್ದಾನೆ.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಈ ವೇಳೆ ಅರ್ಧದಷ್ಟು ರಸ್ತೆ ದಾಟಿದ್ದ ಯುವಕ ಇನ್ನೇನು ರಸ್ತೆ ಬದಿಗೆ ಬರಬೇಕು ಅನ್ನುವಷ್ಟರಲ್ಲಿ ಹಿಂದೆಯೇ ಇದ್ದ ಇನೋವಾ ರಭಸವಾಗಿ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಯುವಕನು ಬರೋಬ್ಬರಿ 30 ಅಡಿಗಳಷ್ಟು ದೂರು ಹೋಗಿ ಬಿದ್ದಿದ್ದಾನೆ.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಇದಷ್ಟೇ ಆಗಿದ್ದರೇ ಯುವಕ ಬದುಕುವ ಸಾಧ್ಯತೆಗಳಿದ್ದವು ಏನೋ ಗೊತ್ತಿಲ್ಲಾ. ಆದ್ರೆ ರಭಸವಾಗಿ ಗುದ್ದಿದ ಕಾರು ತದನಂತರ ನಿಯಂತ್ರಣಕ್ಕೆ ಸಿಗದೇ ಯುವಕನ ದೇಹದ ಮೇಲೆ ವೇಗವಾಗಿ ಹರಿದಿದ್ದು, ಯುವಕ ಸ್ಥಳದಲ್ಲೇ ಸಾವಪ್ಪಿದ್ದಾನೆ.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಕಾರಿಗೆ ಏಕಾಏಕಿ ಅಡ್ಡಲಾಗಿ ಬಂದಿದ್ದರಿಂದ ಯುವಕನಿಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎಂಬುವುದು ಘಟನೆಯ ಕುರಿತಾದ ವಿಡಿಯೋದಲ್ಲಿ ಸ್ಪಷ್ಟವಾಗಿದ್ದು, ರಸ್ತೆ ದಾಟುವಾಗ ವಾಹನಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ.

ಇನ್ನು ಘಟನೆಯಲ್ಲಿ ಸಾವನ್ನಪ್ಪಿದ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದ್ರೂ ಘಟನೆ ವೇಳೆ ಅಲ್ಲಿಯೇ ನಿಂತಿದ್ದ ಮತ್ತೊಬ್ಬ ಯುವಕ ಈ ಎಲ್ಲಾ ದೃಶ್ಯಗಳನ್ನು ಸೆರೆಹಿಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಹೆದ್ದಾರಿಗಳಲ್ಲಿ ವಾಹನ ಚಾಲನೆ ಮಾಡುವಾಗ ಈ ಸಲಹೆಗಳನ್ನು ತಪ್ಪದೇ ಪಾಲಿಸಿ...

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

Read more on accident video
English summary
Toyota Innova hits & runs over a pedestrian in a BRUTAL crash; Caught on cam.
Story first published: Wednesday, May 9, 2018, 18:09 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more