ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ.

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ಪ್ರವೃತ್ತಿಗಳನ್ನು ತಪ್ಪಿಸಲು ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಅಪ್ರಾಪ್ತ ಬೈಕ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹೈದ್ರಾಬಾದ್‌ ಪೊಲೀಸರು ಅಪ್ರಾಪ್ತ ಮಕ್ಕಳಿಗೆ ಬೈಕ್ ಚಾಲನೆ ಮಾಡಲು ಬಿಟ್ಟಿದ್ದ 26 ಪೋಷಕರನ್ನು ಜೈಲಿಗೆ ಕಳುಹಿಸಿದ್ದಾರೆ. ಜೊತೆಗೆ ನಿಯಮ ಬಾಹಿರವಾಗಿ ಬೈಕ್ ಚಾಲನೆ ಮಾಡಿದ ತಪ್ಪಿಗೆ 14ಕ್ಕೂ ಹೆಚ್ಚು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಿಲಾಗಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಮಕ್ಕಳ ಕೈಗೆ ಬೈಕ್ ಕೊಟ್ಟಿದ್ದ ಪೋಷಕರನ್ನು ಹೈದ್ರಾಬಾದ್ ಟ್ರಾಫಿಕ್ ಪೋಲಿಸರು ಕೋರ್ಟ್‌ಗೆ ಹಾಜರುಪಡಿಸಿದ್ದಾಗ ಪೋಷಕರ ಕ್ರಮಕ್ಕೆ ಛೀಮಾರಿ ಹಾಕಿರುವ ಕೋರ್ಟ್, ಪೋಷಕರಿಗೆ 1 ದಿನ ಜೈಲು ಶಿಕ್ಷೆ ನೀಡಿದ್ದಲ್ಲದೇ ಮಕ್ಕಳಿಗೆ ರಸ್ತೆ ನಿಯಮದ ತಿಳುವಳಿಕೆ ಹೇಳುವಂತೆ ಸೂಚನೆ ನೀಡಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಅತ್ತ ಕಾನೂನು ಬಾಹಿರವಾಗಿ ಬೈಕ್ ಸವಾರಿ ಮಾಡುತ್ತಿದ್ದ 14 ಬಾಲಕರನ್ನು 1 ದಿನ ಮಟ್ಟಿಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದ್ದು, ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಮೋಟಾರ್ ವೆಹಿಕಲ್ ಸೆಕ್ಷನ್ 180ರ ಅಡಿ ಪ್ರಕರಣ ದಾಖಲಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, 1 ದಿನದ ಜೈಲು ವಾಸದ ಜೊತೆಗೆ ರೂ. 500 ದಂಡವನ್ನು ಸಹ ವಸೂಲಿ ಮಾಡಲಾಗುತ್ತಿದೆ. ಹೀಗಿದ್ದರೂ ಮಕ್ಕಳು ಬೈಕ್ ಸವಾರಿ ಮಾಡುತ್ತಿರುವ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಇದಷ್ಟೇ ಅಲ್ಲದೇ ಅಪ್ರಾಪ್ತ ಬಾಲಕರು ನಿಯಮ ಉಲ್ಲಂಘಿಸಿ ಚಾಲನೆ ಮಾಡಿದ ಹಿನ್ನೆಲೆ ಇದುವರೆಗೆ ಬರೋಬ್ಬರಿ 1,500 ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ ತಿಂಗಳು ಫೆಬ್ರುವರಿ ಮತ್ತು ಮಾರ್ಚ್‌ನಲ್ಲೂ 50ಕ್ಕೂ ಹೆಚ್ಚು ಪೋಷಕರು ಜೈಲಿನಲ್ಲಿ ಕಂಬಿ ಎಣಿಸಿ ಬಂದಿದ್ದಾರೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಕಠಿಣ ನಿಯಮಗಳನ್ನು ಸದ್ಯದಲ್ಲೇ ಜಾರಿ ತರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡುವ ಮುನ್ನ ಎಚ್ಚರವಾಗಿರುವುದು ಒಳಿತು.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಜೊತೆಗೆ ಇತ್ತೀಚೆಗೆ ಯುವ ಬೈಕ್ ಸವಾರರು ವೀಲ್ಹಿಂಗ್ ಕ್ರೇಜ್‌ನತ್ತ ವಾಲುತ್ತಿದ್ದು, ಇದರಿಂದಾಗಿ ಸಾರ್ವಜನಿಕವಾಗಿ ತೊಂದರೆಯಾಗುತ್ತಿರುವುದಲ್ಲದೇ ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿರುವುದು ಮತ್ತೊಂದು ದುರಂತ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಇದರಿಂದಾಗಿ ಎಚ್ಚರ ವಹಿಸಬೇಕಿರುವ ಪೋಷಕರು ಮಕ್ಕಳಿಗೆ ದುಬಾರಿ ಬೈಕ್ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಬೈಕ್ ನೀಡಿ. ಜೊತೆಗೆ ಅಪ್ರಾಪ್ತ ಮಕ್ಕಳು ಬೈಕ್ ಚಾಲನೆ ಮಾಡುವುದರ ಮೇಲೆ ನಿಗಾ ಇರಿಸುವುದಲ್ಲದೇ, ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಉತ್ತಮ.

Note: Images are for symbolic/representative purpose only. Images via Bangalore Traffic Police.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಜೊತೆಗೆ ವಾಹನ ಚಾಲನೆ ವೇಳೆ ಸುರಕ್ಷತೆಯೊಂದಿಗೆ ಪರವಾನಿಗೆ ಪತ್ರ ಕೂಡಾ ತುಂಬಾ ಮುಖ್ಯವಾಗಿರುತ್ತೆ. ಹೀಗಿರುವಾಗ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡುವುದು ಸರಿಯಲ್ಲ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಇದರಿಂದಾಗಿಯೇ ದೇಶಾದ್ಯಂತ ಲಕ್ಷಾಂತರ ಅಪಘಾತ ಪ್ರಕರಣಗಳು ಘಟಿಸುತ್ತಿದ್ದು, 2017ರ ಅವಧಿಯಲ್ಲಿ 1.47 ಲಕ್ಷಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಅಸುರಕ್ಷಿತ ಚಾಲನೆ ಮತ್ತು ಪರವಾನಿಗೆ ಇಲ್ಲದ ಡ್ರೈವಿಂಗ್ ಅಂದ್ರೆ ನೀವು ನಂಬಲೇಬೇಕು. ಇದಕ್ಕೆ ಉದಾಹರಣೆ ಅಂದ್ರೆ, ಮೊನ್ನೆಯಷ್ಟೇ ರೂ. 7 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರೊಂದು ಅಪಘಾತಕ್ಕಿಡಾಗಿರುವುದು.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೌದು,ಹೊಸ ಕಾರು ಖರೀದಿಸಿದ ನಂತರ ಅದನ್ನು ಖುಷಿಯಿಂದ ಚಲಾಯಿಸಲು ಅತ್ಯುತ್ಸಾಹದಿಂದ ತಯಾರಾಗಿರುತ್ತಾರೆ. ಇದಕ್ಕೆಂದು ಕೆಲವರು ಲಾಂಗ್ ಡ್ರೈವ್‍‍ಗೆ ಕೂಡಾ ಪ್ಲಾನ್ ಮಾಡುತ್ತಾರೆ. ಕುಡಿದ ಅಮಲಿನಲ್ಲೋ ಅಥವಾ ಕಣ್ಣು ಮಂಜಾಗಿಯೋ ಕೆಲವೊಮ್ಮೆ ನಿಯಂತ್ರಣ ತಪ್ಪಿ ಅಪಘಾತಗಳಿಗೆ ಕಾರಣವಾಗುತ್ತೆ . ಅಂತದ್ದೆ ಒಂದು ಘಟನೆ ಮುಂಬೈ ನಗರದಲ್ಲಿ ನಡೆದಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಮುಂಜಾನೆ ಡ್ರೈವ್‍‍‌ಗೆಂದು ತೆರಳಿದ್ದ ಹೊಸ ರೋಲ್ಸ್ ರಾಯ್ಸ್ ಗೋಸ್ಟ್ ಕಾರೊಂದು ಕಂಟ್ರೋಲ್ ತಪ್ಪಿ ಮುಂಬೈ‍ನ ನಗರದ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಅಪ್ಪಳಿಸಿದೆ. ಪಾಂಡಿಚೆರಿ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಪಡೆದಿರುವ ಈ ಕಾರು ಮುಂಬೈ‍ನ ಜುಹುನಲ್ಲಿನ ಸಿಟಿಜನ್ ಹೋಟೆಲ್‍‍ಗೆ ಹೋಗುವ ಹಾದಿಯಲ್ಲಿ ಅಪಘಾತಕ್ಕಿಡಾಗಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಈ ವೇಳೆ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಟೋಯಿಂಗ್ ವೆಹಿಕಲ್ ಮೂಲಕ ಚರಂಡಿಯಲ್ಲಿ ಬಿದ್ದಿದ್ದ ರೋಲ್ಸ್ ರಾಯ್ಸ್ ಕಾರನ್ನು ಎತ್ತಲು ಪ್ರಯತ್ನಿಸಿದ್ರು ವಿಫಲರಾದ್ರು. ಈ ವೇಳೆ ನಿಯಂತ್ರಣ ತಪ್ಪಿದ ಕಾರಿನ ಬಂಪರ್ ಕೊಂಚ ಬಿರುಕು ಕೂಡಾ ಬಿಟ್ಟಿತು. ಆದ್ರು ಹರಸಾಹಸದ ನಂತರ ಹೊಸ ಕಾರನ್ನು ಹೊರತೆಗೆಯಲಾಯಿತು.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಇನ್ನು ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಬಗ್ಗೆ ಹೇಳುವುದಾದರೆ, ಸುಮಾರು 7 ಕೋಟಿ ರುಪಾಯಿಗೆ ಮಾರಟಗೊಳ್ಳುತ್ತಿರುವ ಈ ಕಾರು ಹಲವಾರು ಸೆಲೆಬ್ರಿಟಿಗಳಿಗೆ ಮತ್ತು ರಾಜಕಾರಣಿಗಳಿಗೆ ನೆಚ್ಚಿನ ಕಾರು ಇದಾಗಿದೆ. ಈ ಕಾರು 5399ಎಮ್ಎಮ್ ಉದ್ದ, 1948ಎಮ್ಎಮ್ ಅಗಲ, 1550ಎಮ್ಎಮ್ ಎತ್ತರ ಮತ್ತು 150ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಮುಂಭಾಗದಲ್ಲಿ ಫಾಗ್ ಲ್ಯಾಂಪ್ಸ್, ಪವರ್ ಅಡ್ಜಸ್ಟಬಲ್ ಎಕ್ಸ್ಟೀರಿಯರ್ ಮಿರರ್ಸ್, ಅಡ್ಜಸ್ಟಬಲ್ ಹೆಡ್‍‍ಲೈಟ್, ಸ್ಮೋಕ್ ಹೆಡ್‍‍ಲ್ಯಾಂಪ್ಸ್, ಟಿಂಟೆಡ್ ಗ್ಲಾಸ್, ಸನ್ ರೂಫ್, ಇಂಟಿಗ್ರೇಟೆಡ್ ಆಂಟೆನ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

5 ಜನ ಕೂರಬಹುದಾದ ಈ ಕಾರಿಗೆ 19 ಇಂಚಿನ ಅಲಾಯ್ ಚಕ್ರಗಳನ್ನು ಒದಗಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ರೋಲ್ಸ್ ರಾಯ್ಸ್ ಗೋಸ್ತ್ ಕಾರಿನಲ್ಲಿ ಆಂತಿ ಲಾಕ್ ಬ್ರೇಕಿಂಗ್, ಪಾರ್ಕಿಂಗ್ ಸೆನಾರ್ಸ್, ಬ್ರೇಕ್ ಅಸಿಸ್ಟ್, ಚೈಲ್ಡ್ ಸೇಫ್ಟಿ ಲಾಕ್ಸ್, ಪ್ಯಾಸ್ಸೆಂಜರ್ ಏರ್‍‍ಬ್ಯಾಗ್, ಡ್ರೈವರ್ ಏರ್‍‍ಬ್ಯಾಗ್, ಸೈಡ್ ಏರ್‍‍ಬ್ಯಾಗ್, ಪವರ್ ಡೋರ್ ಲಾಕ್ ಮತ್ತು ಇನ್ನಿತರೆ ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍‍ಬೋರ್ಡ್, ಲೆದರ್ ಸೀಟ್‍‍ಗಳು, ರಿಯರ್ ಸೀಟ್ ಹೆಡ್‍‍ರೆಸ್ಟ್, ಎಸಿ ವೆಂಟ್ಸ್, ಕಪ್ ಹೋಲ್ಡರ್‍‍ಗಳು, ಫ್ರಂಟ್ ಆಂಡ್ ರಿಯರ್ ಸ್ಪೀಕರ್ಸ್, ಆಡಿಯೊ ಕಂಟ್ರೋಲ್, ಡ್ಯುಯಲ್ ಟ್ರಿಪ್ ಮೀಟರ್, ಟಚ್‍‍ಸ್ಕ್ರೀನ್ ಡಿಸ್ಪ್ಲೆ ಮತ್ತು ಇನ್ನಿತರೆ ಐಷಾರಾಮಿ ಸೌಲತ್ತುಗಳನ್ನು ಈ ಕಾರಿನಲ್ಲಿ ಒದಗಿಸಲಾಗಿದೆ.

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಎಂಜಿನ್ ಸಾಮರ್ಥ್ಯ

ರೋಲ್ಸ್ ರಾಯ್ಸ್ ಗೋಸ್ಟ್ ಕಾರುಗಳು 6.6 ಲೀಟರ್ 48ವಿ ವಿ12 ಪೆಟ್ರೋಲ್ ಎಂಜಿನ್ ಸಹಾಯದಿಂದ 603ಬಿಹೆಚ್‍‍ಪಿ ಮತ್ತು 840ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಆಟೊಮ್ಯಾಟಿಕ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ.

Most Read Articles

ಅಪಘಾತದಲ್ಲಿ ರಸ್ತೆಯ ಪ್ಕ್ಕದಲ್ಲಿನ ಚರಂಡಿಗೆ ಜಾರಿದ ರೂ. 7 ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಚಿತ್ರಗಳು ಇಲ್ಲಿದೆ ನೋಡಿ..

Kannada
Read more on traffic rules
English summary
Hyderabad: 26 parents jailed for letting children drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X