ಕೇವಲ 6 ಏರ್‌ಬ್ಯಾಗ್ ನಿಮಗೆ ರಕ್ಷಣೆ ನೀಡುವುದಿಲ್ಲ: ಕಾರು ಮಾಲೀಕರೆ ಇದನ್ನು ಯಾರೂ ಹೇಳುವುದಿಲ್ಲ!

ಬೇಸ್ ವೇರಿಯೆಂಟ್‌ಗಳಲ್ಲಿ ಸಿಗುವ ಡ್ಯುಯಲ್ - ಏರ್‌ಬ್ಯಾಗ್ ಸೆಟಪ್ ‌ಗಳಿಗೆ ಹೋಲಿಸಿದರೆ ಆರು ಏರ್‌ಬ್ಯಾಗ್‌ಗಳು ಕಾರು ಪ್ರಯಾಣಿಕರ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಇವು ವಿವಿಧ ಅಪಘಾತ ಸನ್ನಿವೇಶಗಳಲ್ಲಿ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಹೆಚ್ಚಿನ ಮುಖ್ಯವಾಹಿನಿಯ ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳು ಸಾಕಾಗುತ್ತದೆ ಎಂದು ಪರಿಗಣಿಸಲಾಗಿದೆಯಾದರೂ, ನಿಜವಾದ ಸುರಕ್ಷತೆಯು ಕೇವಲ ಏರ್‌ಬ್ಯಾಗ್‌ಗಳಿಂದ ಮಾತ್ರ ಸಿಗುವುದಿಲ್ಲ. ಏಕೆಂದರೆ ಏರ್‌ಬ್ಯಾಗ್‌ಗಳು ಅಪಘಾತದ ನಂತರ ಪ್ರಯಾಣಿಕರನ್ನು ರಕ್ಷಿಸುತ್ತವೆ. ಆದರೆ ಇತ್ತೀಚಿನ ಸುಧಾರಿತ ಸೇಫ್ಟಿ ಫೀಚರ್ಸ್ ಸಂಭವನೀಯ ಅಪಘಾತಗಳನ್ನು ತಡೆಯುತ್ತವೆ.

ಸಕ್ರಿಯ ವೈಶಿಷ್ಟ್ಯಗಳು ಮುಖ್ಯ

ಆರು ಏರ್‌ಬ್ಯಾಗ್‌ಗಳು ಮಾರಕ ಗಾಯದ ಅಪಾಯವನ್ನು ಬಹಳವಾಗಿ ಕಡಿಮೆ ಮಾಡುತ್ತವೆಯಾದರೂ, ನಿಜವಾದ ಸುರಕ್ಷತೆಯು ಎಬಿಎಸ್ (ಆಂಟಿಲಾಕ್ - ಬ್ರೆಕಿಂಗ್ - ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ - ಬ್ರೇಕ್‌ಫೋರ್ಸ್ - ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ - ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾನಂತಹ ಆಧುನಿಕ ಫೀಚರ್ಸ್‌ನಿಂದ ಸಿಗುತ್ತದೆ.

just-6-airbags-wont-protect-you-these-safety-features-need-every-cars

ಕಾರಿನ ನಿರ್ಮಾಣ ಗುಣಮಟ್ಟ ಸೇರಿದಂತೆ ಆಧುನಿಕ ಸೇಫ್ಟಿ ಫೀಚರ್ಸ್ ಕೂಡ ಈಗ ಬಹಳ ಮುಖ್ಯವಾಗಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಇವೆಲ್ಲವು ಪ್ರಸ್ತುತ ಎಲ್ಲಾ ಕಾರುಗಳಲ್ಲಿ ಖಂಡಿತ ಇರಬೇಕಾದ ಸೇಫ್ಟಿ ಫೀಚರ್ಸ್ ಆಗಿವೆ. ಅಪಘಾತವಾದರೆ ಏರ್‌ಬ್ಯಾಗ್‌ಗಳು ರಕ್ಷಣೆ ನೀಡುತ್ತವೆ. ಆದರೆ ಅಪಘಾತಕ್ಕೂ ಮುನ್ನವೇ ಯಾವುದೇ ಡಿಕ್ಕಿ ಸಂಭವಿಸದಂತೆ ಮೇಲಿನ ಫೀಚರ್ಸ್ ನಿಮ್ಮ ಕಾರಿಗೆ ರಕ್ಷಣೆ ನೀಡುತ್ತವೆ.

ಏರ್‌ಬ್ಯಾಗ್‌ಗಳು ಕೂಡ ಮುಖ್ಯ

ಅಪಘಾತಗಳು ಅನಿರೀಕ್ಷಿತವಾಗಿರುವುದರಿಂದ ನಾವು ಸರಿಯಾಗಿ ಕಾರು ಓಡಿಸುತ್ತಿದ್ದರೂ, ಎದುರಿನ ವ್ಯಕ್ತಿಯಿಂದ ಅಪಘಾತ ಸಂಭವಿಸಬಹುದು. ಹಾಗಾಗಿ ಪ್ರಮಾಣಿತವಾಗಿ ಎಲ್ಲಾ ಕಾರುಗಳಲ್ಲಿ ಎರಡು ಏರ್‌ಬ್ಯಾಗ್‌ಗಳ ಬದಲಿಗೆ ಆರು ಏರ್‌ಬ್ಯಾಗ್‌ಗಳು ಇದ್ದರೇ ಉತ್ತಮ. ಆರು ಏರ್‌ಬ್ಯಾಗ್‌ಗಳು ಚಾಲಕ ಮತ್ತು ಪ್ರಯಾಣಿಕರನ್ನು ಫ್ರಂಟ್, ಸೈಡ್, ಕರ್ಟನ್ ಏರ್‌ಬ್ಯಾಗ್‌ಗಳ ಮೂಲಕ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತವೆ.

just-6-airbags-wont-protect-you-these-safety-features-need-every-cars

ಈ ವ್ಯವಸ್ಥೆಯು ಮುಂಭಾಗ, ಸೈಡ್ - ಇಂಪ್ಯಾಕ್ಟ್ ಮತ್ತು ರೋಲ್‌ - ಓವರ್ ಅಪಘಾತಗಳ ಸಮಯದಲ್ಲಿ ಸರ್ವತೋಮುಖ ರಕ್ಷಣೆಯನ್ನು ಒದಗಿಸುತ್ತದೆ. ತಲೆ ಮತ್ತು ಮುಂಡ ಎರಡಕ್ಕೂ ಗಂಭೀರ ಗಾಯಗಳನ್ನು ಕಡಿಮೆ ಮಾಡುತ್ತವೆ. ಎರಡು ಏರ್‌ಬ್ಯಾಗ್‌ಗಳು ಮುಂಭಾಗದ ಸೀಟುಗಳಲ್ಲಿ ಇರುವವರನ್ನು ಮಾತ್ರ ರಕ್ಷಿಸಿದರೆ, ಆರು ಏರ್‌ಬ್ಯಾಗ್‌ಗಳು ಹಿಂಭಾಗದ ಪ್ರಯಾಣಿಕರು ದುರ್ಬಲರಾಗದಂತೆ ನೋಡಿಕೊಳ್ಳುತ್ತವೆ.

ಇಂದು, ಮಾರುತಿ ಸುಜುಕಿಯಂತಹ ಪ್ರಮುಖ ಕಾರು ತಯಾರಕರು ಹೆಚ್ಚಿನ ಮಾಡಲ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುತ್ತಿದ್ದಾರೆ. ಇದು ಭಾರತೀಯ ಸುರಕ್ಷತಾ ಮಾನದಂಡಗಳನ್ನು ಜಾಗತಿಕ ಮಾನದಂಡಗಳಿಗೆ ಹತ್ತಿರವಾಗಿ ಜೋಡಿಸುತ್ತದೆ. ಕೇಂದ್ರ ಸಾರಿಗೆ ಇಲಾಖೆ ಕೂಡ ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ತೀರ್ಮಾನದೊಂದಿಗೆ ಮುಂಬರುವ ವರ್ಷಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಪಣತೊಟ್ಟಿದೆ.

just-6-airbags-wont-protect-you-these-safety-features-need-every-cars

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇಲ್ಲಿ ನಾವು ಹೇಳುವುದೇನೆಂದರೆ ಪ್ರಯಾಣಿಕರ ಸುರಕ್ಷತೆಗೆ ಕೇವಲ ಏರ್‌ಬ್ಯಾಗ್‌ಗಳು ಮಾತ್ರ ಮುಖ್ಯವಲ್ಲ, ಬದಲಿಗೆ ಅಪಘಾತ ನಡಿಯುವ ಮುನ್ನವೇ ಅದನ್ನು ತಡೆಯುವ ಆಧುನಿಕ ಫೀಚರ್ಸ್ ಕೂಡ ಬಹಳ ಮುಖ್ಯ. ಬಲವಾದ ಕ್ರ್ಯಾಶ್ - ಟೆಸ್ಟ್ ರೇಟಿಂಗ್‌ಗಳು ಮತ್ತು ಇತರ ಸಕ್ರಿಯ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಏರ್‌ಬ್ಯಾಗ್‌ಗಳನ್ನು ಸಂಯೋಜಿಸುವುದರಿಂದ ಸಮಗ್ರ ರಕ್ಷಣೆಯನ್ನು ಪಡೆಯಬಹುದು.

ಖರೀದಿದಾರರು ನೆಮ್ಮದಿಯಿಂದ ಕಾರಿನಲ್ಲಿ ಪ್ರಯಾಣಿಸಲು ಆರು ಏರ್‌ಬ್ಯಾಗ್‌ಗಳ ಜೊತೆಗೆ ಸಂಯೋಜಿತ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವ ಕಾರುಗಳನ್ನು ಹುಡುಕುವುದು ಉತ್ತಮ. ಒಟ್ಟಾರೆ ಆರು ಏರ್‌ಬ್ಯಾಗ್‌ಗಳ ಜೊತೆಗೆ ಎಬಿಎಸ್, ಇಬಿಡಿ, ಇಎಸ್‌ಸಿ, ಟ್ರಾಕ್ಷನ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾನಂತಹ ಫೀಚರ್ಸ್ ನಮ್ಮ ಕಾರಿನಲ್ಲಿದ್ದರೆ ಅತ್ಯಂತ ಸುರಕ್ಷಿತ ಎಂದು ಹೇಳಬಹುದು. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ‌ನಲ್ಲಿ ತಿಳಿಸಿ.

More from DriveSpark

Article Published On: Wednesday, September 24, 2025, 12:22 [IST]
English summary
Just 6 airbags wont protect you these safety features need every cars
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+