ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

Written By: Rahul TS

ದಿನಕಳೆಯುತ್ತಿದ್ದಂತೆ ದೇಶವು ಡಿಜಿಟಲ್ ಮಯ ಆಗುತ್ತಿದೆ. ಯಾವುದೇ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕ್ಷಣ ಮಾತ್ರದಲ್ಲೇ ಲಕ್ಷಾಂತರ ಜನಕ್ಕೆ ತಲುಪುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಹ ಜನಸಾಮಾನ್ಯರಿಗೆ ಹೊಸ ನಿಯಮಗಳ ಬಗ್ಗೆ ತಿಳಿ ಹೇಳಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿ ಬಳಕೆ ಮಾಡುತ್ತಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ಹೈದ್ರಾಬಾದ್‍‍ನಲ್ಲಿ ಯುವಕನೊಬ್ಬ ಹೆಲ್ಮೆಟ್ ಇಲ್ಲದೆಯೇ ಬೈಕ್ ಚಲಾಯಿಸಿದ್ದಲ್ಲದೇ ಟ್ರಾಫಿಕ್ ಪೊಲೀಸರ ವಿರುದ್ಧವೇ ಪೊಸ್ಟರ್ ಅಂಟಿಸಿಕೊಂಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾನೆ. ಅಸಲಿಗೆ ವೈರಲ್ ಆಗುವಂತಹ ಆ ಸಾಲುಗಳು ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ಸದ್ಯಕ್ಕೆ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರವು ಹೈದರಾಬಾದ್ ನಗರದಲ್ಲಿನ ಕೃಷ್ಣ ರೆಡ್ದಿ ಎಂಬ ಯುವಕ ತನ್ನ ಬೈಕ್‍‍ನ ಮೇಲೆ ' ನಾನು ಹೆಲ್ಮೆಟ್ ಧರಿಸುವುದಿಲ್ಲ ನಾನು ಸತ್ತರು ಗಂಡಸಿನಂತೆಯೇ ಸಾಯುತ್ತೇನೆ ಎಂದು ಸ್ಟಿಕರ್ ಅಂಟಿಸಿಕೊಂಡದ್ದನು. ಜೊತೆಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಕೂಡ ಈ ಬಗ್ಗೆ ಬರೆದುಕೊಂಡಿದ್ದನಂತೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ಈ ಫೋಟೋವನ್ನು ನೋಡಿದ ಹೈದ್ರಾಬಾದ್ ಪೊಲೀಸರು ಯುವಕನ ಸ್ಟಿಕರ್‌ಗೆ ಟಾಂಗ್ ಕೊಟ್ಟಿದ್ದು, 'ಕೃಷ್ಣ ರೆಡ್ದಿಯವರೇ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ನಾವು ನಿಮ್ಮನ್ನು ಸಾಯುಲು ಬಿಡುವುದಿಲ್ಲ. ನಾವು ನಿಮ್ಮನ್ನು ಗಂಡಸಿನಂತೆಯೇ ಬದುಕಲು ನೋಡಲು ಇಚ್ಛಿಸುತ್ತೇವೆ. ಎಂದು ತಮ್ಮ ಫೇಸ್‍‍ಬುಕ್ ಪೇಜ್‍‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ದೇಶದ ಅನೇಕ ಭಾಗಗಳಲ್ಲಿ ಹೆಲ್ಮೆಟ್ ಇಲ್ಲದೆಯೇ ವಾಹನ ಚಲಾಯಿಸುವುದು ಸಾಮಾನ್ಯವಾಗಿ ಹೋಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಫೇಸ್‍‍ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳ ಸಹಾಯದಿಂದ ಜನ ಸಾಮಾನ್ಯರಿಗೆ ಟ್ರಾಫಿಕ್ ರೂಲ್ಸ್ ಅನ್ನು ತಿಳಿಸಲು ಮೊರೆಹೋಗಿದ್ದಾರೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ಕೆಲವು ಮೋಟಾರ್‍ ಸೈಕಲ್ ಸವಾರರಂತೂ ತಮ್ಮ ಸುರಕ್ಷತೆಯ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಜೊತೆಗೆ ಹೆಲ್ಮೆಟ್ ಇಲ್ಲದೆಯೇ ವಾಹನ ಚಲಾಯಿಸುವುದು ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

2016ರಲ್ಲೇ ಸುಮಾರು 50,000 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನ ಚಾಲಕರು ಮರಣ ಹೊಂದಿದ್ದು, ಇದರಲ್ಲಿ ಹಲವಾರು ಮಂದಿ ಹೆಲ್ಮೆಟ್ ಇಲ್ಲದೆಯೇ ರಸ್ತೆ ಅಪಘಾತಕ್ಕೀಡಾಗಿ ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದುಕೊಂಡವರು ಇದ್ದಾರೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ಹೀಗಾಗಿ ಹೆಲ್ಮೆಟ್ ಇಲ್ಲದೆಯೇ ವಾಹನ ಚಲಾಯಿಸುವುದು ಯಾವುದೇ ಶೌರ್ಯದ ಕೆಲಸವಲ್ಲ. ಪೋಲಿಸರಿಗೆ ಸಿಕ್ಕ ಕೃಷ್ಣ ಮತ್ತು ಆತನ ಬೈಕ್ ಮೇಲಿನ ಸಾಲುಗಳ ಬಗ್ಗೆ ಹೈದ್ರಾಬಾದ್ ಪೊಲೀಸರು ಶಿಕ್ಷಾರ್ಥಕ್ಕೆ ಚಲನ್ ಅನ್ನು ನೀಡಿರುವ ಬಗ್ಗೆ ಮಾಹಿತಿಯು ಲಭ್ಯವಿಲ್ಲವಾದರೂ ಪೊಲೀಸರು ತಮ್ಮಿಂದಾಗುವ ಮಟ್ಟದಲ್ಲಿ ಜನಸಾಮಾನ್ಯರಿಗೆ ಸೂಚನೆಗಳನ್ನು ನೀಡುತ್ತಲೇ ಇರುತ್ತಾರೆ ಎನ್ನುವುದು ಹೆಮ್ಮೆಯ ವಿಚಾರ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಹುಡುಗ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

English summary
Helmet-less Bajaj Pulsar motorcycle rider gets TROLLED by Hyderabad cops.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark