ಲಾಕ್ ಡೌನ್ ವೇಳೆ ಜಾಲಿ ರೈಡ್ ಮಾಡುತ್ತಿದ್ದ ಬೈಕ್ ಸವಾರನಿಗೆ ಕೊನೆಗೆ ಶಾಕ್..!
ಮಾಹಾಮಾರಿ ಕರೋನಾ ವೈರಸ್ ತಡೆಯಲು ದೇಶಾದ್ಯಂತ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನಸಂದಣಿ ಉಂಟಾಗದಂತೆ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಇಡೀ ದೇಶವೇ ಸ್ತಬ್ದವಾಗಿದ್ದು, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡುವಿಕೆಯನ್ನು ಮಟ್ಟಹಾಕಬಹುದು ಎನ್ನುವ ಆಲೋಚನೆ ಮಾಡಲಾಗುತ್ತಿದೆ.

ಆದರೆ ಕೆಲವರಿಗೆ ಲಾಕ್ ಡೌನ್ ಮಾಡಿರುವ ಅರ್ಥವೇ ಗೊತ್ತಾಗದೆ ರಸ್ತೆಗಳು ಖಾಲಿ ಇದೆ ಅಂತಾ ಜಾಲಿ ರೈಡ್ ಮಾಡುವ ಮನಸ್ಥಿತಿಗೆ ತಲುಪಿದ್ದಾರೆ. ಹೀಗೆ ಇಲ್ಲೊಬ್ಬ ಲಾಕ್ ಡೌನ್ ವೇಳೆ ಜಾಲಿ ರೈಡ್ ಮಾಡಲು ಹೋಗಿ ಪೊಲೀಸರ ಕೈ ಸಿಲುಕಿ ಒದೆ ತಿಂದಿದ್ದಾನೆ. ಕೊನೆಗೆ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೋರಿದ್ದಲ್ಲದೆ ಇನ್ನೊಂದು ಬಾರಿ ಇಂತಹ ತಪ್ಪು ಮಾಡುವುದಿಲ್ಲ ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾನೆ.

ಹೌದು, ಲಾಕ್ ಡೌನ್‌ನಿಂದ ಸಂಚಾರಿ ವ್ಯವಸ್ಥೆಯು ಸಂಪೂರ್ಣವಾಗಿ ಬಂದ್ ಆಗಿರುವುದಿಂದ ತುರ್ತು ವಾಹನಗಳ ಸಂಚಾರವನ್ನು ಹೊರತುಪಡಿಸಿ ಯಾವುದೇ ವಾಹನಗಳನ್ನು ಹೊರಗೆ ಬಿಡುತ್ತಿಲ್ಲ. ಇದರಿಂದ ಸಣ್ಣಪುಟ್ಟ ರಸ್ತೆಗಳು ಮಾತ್ರವಲ್ಲದೆ ಹೆದ್ದಾರಿಗಳಲ್ಲೂ ಯಾವುದೇ ವಾಹನಗಳು ಓಡಾತ್ತಿಲ್ಲ.

ಈ ವೇಳೆ ದಿನನಿತ್ಯದ ಸಾಮಾಗ್ರಿಗಳ ಖರೀದಿಗೆ ಬಂದಿದ್ದ ವ್ಯಕ್ತಿವೊಬ್ಬ ಸಾಮಗ್ರಿಗಳನ್ನು ತೆಗೆದುಕೊಂಡು ಸುಮ್ಮನೆ ಮನೆ ಸೆರುವುದನ್ನು ಬಿಟ್ಟು ಮುಖ್ಯ ರಸ್ತೆಯಲ್ಲೇ ರಾಂಗ್ ಸೈಡ್‌ನಲ್ಲಿ ಬರುವ ಮೂಲಕ ಜಾಲಿ ರೈಡಿನೊಂದಿಗೆ ವಿಡಿಯೋ ಮಾಡಿದ್ದಾನೆ.

ಒಂದು ಕೈಲಿಯಲ್ಲಿ ಮೊಬೈಲ್ ಮತ್ತು ಮತ್ತೊಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದುಕೊಂಡಿರುವ ಈ ವ್ಯಕ್ತಿಯ ಸುಮಾರು 1 ಕಿ.ಮೀ ನಷ್ಟು ಜಾಲಿ ರೈಡ್ ಮಾಡಿಕೊಂಡು ಮೊಬೈಲ್ ಸೆಲ್ಪಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಸರ್ಕಲ್ ಒಂದರ ಬಳಿಯಲ್ಲೇ ಕಾವಲಿಗೆ ನಿಂತಿದ್ದ ಪೊಲೀಸರು ಬೈಕ್ ಹಿಡಿದುಹಾಕಿದ್ದಲ್ಲದೇ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಲಾಕ್ ಡೌನ್ ಇರುವಾಗ ಹೊರಗೆ ಬರದಿರುವಂತೆ ಎಚ್ಚರಿಸಿದ ಪೊಲೀಸರು ಮೊಬೈಲ್ ವಿಡಿಯೋ ಆನ್‌ನಲ್ಲೇ ಇರುವುದನ್ನು ಗಮನನಿಸಿದ್ದಾರೆ.

ಆಗ ಅನುಮಾನ ಬಂದ ಪೊಲೀಸರು ಯಾವ ವಿಡಿಯೋ ಮಾಡುತ್ತಿದ್ದೆ ಎಂದು ಪ್ರಶ್ನಿಸಿದಾಗ ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಮೊಬೈಲ್ ಚೆಕ್ ಮಾಡಿದಾಗ ಕೆಲವೇ ನಿಮಿಷ ಹಿಂದೆ ಸೆಲ್ಪಿ ವಿಡಿಯೋ ಮಾಡಿರುವುದು ಗೊತ್ತಾಗಿದೆ.

ಇದರಿಂದ ಮತ್ತಷ್ಟು ಕುಪಿತಗೊಂಡ ಪೊಲೀಸರು ಬೈಕ್ ಸವಾರರನ್ನು ನೆರವಾಗಿ ಠಾಣೆಗೆ ಕರೆತಂದು ತಮ್ಮದೇ ಶೈಲಿಯಲ್ಲಿ ಉಪಚಾರ ಮಾಡಿದ್ದಾರೆ. ತದನಂತರ ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎನ್ನುವ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡು ವಿಡಿಯೋವನ್ನು ಕೂಡಾ ಮಾಡಿಸಿದ್ದಾರೆ.

ಮಾಹಿತಿಗಳ ಇದು ಮಹಾರಾಷ್ಟ್ರದ ಜಲಗಾಂ ಹೊರವಲಯದಲ್ಲಿ ನಡೆದಿದೆ ಎನ್ನಲಾಗಿದ್ದು, ಇದೀಗ ಜಾಲಿ ರೈಡ್ ವಿಡಿಯೋ ಮತ್ತು ಒದೆ ತಿಂದ ನಂತರ ಕ್ಷಮೆ ಕೇಳುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು ಕರೋನಾ ವೈರಸ್ ಹರಡುವಿಕೆಯನ್ನು ತಡೆಯುಲು ಸರ್ಕಾರಗಳು, ವೈದ್ಯರು, ಪೊಲೀಸರು ಹರಸಾಹಸಪಡುತ್ತಿದ್ದು, ಲಾಕ್ ಡೌನ್ ಅರ್ಥ ಮಾಡಿಕೊಳ್ಳದ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಹೊರಗೆ ತಿರುಗುವ ಮೂಲಕ ಅಪಾಯ ತಾವೇ ತಂದುಕೊಳ್ಳುತ್ತಿದ್ದಾರೆ.

ಅನಾವಶ್ಯಕವಾಗಿ ಹೊರಗೆ ತಿರುವ ಮೂಲಕ ವೈರಸ್ ಹರಡುವಿಕೆಯನ್ನು ಸುಲಭವಾಗಿಸುತ್ತಿದ್ದು, ಇಂತವರ ವಿರುದ್ಧ ಪೊಲೀಸರು ಈಗಾಗಲೇ ಹಲವು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ನೀವು ಕೂಡಾ ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಹೊರಗೆ ತಿರಗದೆ, ಅವಶ್ಯವಿದ್ದಲ್ಲಿ ಅಗತ್ಯ ಸುರಕ್ಷಾ ಸಾಧನ ಬಳಕೆ ಮಾಡಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.


Click it and Unblock the Notifications








