ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಕರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದ ಕೇಂದ್ರ ಸರ್ಕಾರವು ಪರಿಸ್ಥಿತಿಗೆ ಅನುಗುಣವಾಗಿ ಇದೀಗ ಕೆಲವು ವಿನಾಯ್ತಿಗಳನ್ನು ಘೋಷಣೆ ಮಾಡಿದ್ದು, ಬೆಂಗಳೂರು ಪೊಲೀಸರು ಕೂಡಾ ಕೆಲವು ಮಹತ್ವದ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಕರೋನೊ ವಾರಿಯರ್ಸ್ ಹೊರತಾಗಿ ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರಿಗೆ ಬಿಸಿ ತಟ್ಟಿಸಿದ್ದ ಬೆಂಗಳೂರು ಪೊಲೀಸರು ಕಳೆದ ಒಂದೂವರೆ ತಿಂಗಳಿನಿಂದ ಬರೋಬ್ಬರಿ 1.80 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿದ್ದು, ಇದೀಗ 2ನೇ ಹಂತದ ಲಾಕ್‌ಡೌನ್ ಅನ್ನು ತುಸು ಸಡಿಕೆ ಮಾಡಿರುವುದರಿಂದ ಸೀಜ್ ವಾಹನಗಳನ್ನು ಮರಳಿ ನೀಡಲು ನಿರ್ಧರಿಸಲಾಗಿದೆ.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಕಠಿಣಕ್ರಮಗಳ ನಡುವೆಯೂ ರಸ್ತೆಗಿಳಿದ್ದ ವಾಹನಗಳನ್ನು ಸೀಜ್ ಮಾಡಿದ್ದ ಪೊಲೀಸರು ಲಾಕ್‌ಡೌನ್ ಮುಗಿಯುವ ತನಕ ಮರಳಿ ನೀಡದಿರಲು ನಿರ್ಧರಿಸಿದ್ದರು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿರುವುದರಿಂದ ಸೀಜ್ ಆದ ವಾಹನಗಳನ್ನು ಇಂದಿನಿಂದಲೇ ಮರಳಿಸುವುದಾಗಿ ತಿಳಿಸಲಾಗಿದೆ.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಸೀಜ್ ಆದ ವಾಹನಗಳನ್ನು ಮರಳಿಸುವುದರ ಬಗ್ಗೆ ಸ್ವತಃ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್ ಅವರೇ ಮಾಹಿತಿ ನೀಡಿದ್ದು, ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ಸೂಚನೆ ಮೇರೆಗೆ ಸೀಜ್ ಆದ ವಾಹನಗಳನ್ನು ಮೇ 1ರಿಂದ ಹಿಂದಿರುಗಿಸಲಾಗುತ್ತಿದೆ ಎಂದಿದ್ದಾರೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಸೀಜ್ ಆದ ವಾಹನಗಳನ್ನು ಮರಳಿ ಪಡೆಯುವಾಗ ಅಗತ್ಯ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದ್ದು, ಸೀಜ್ ವಾಹನಗಳು ಸಂಖ್ಯೆ ಹೆಚ್ಚಿರುವುದರಿಂದ ವಾಹನ ಮಾಲೀಕರು ಒಂದೇ ಬಾರಿಗೆ ಠಾಣೆ ಬರುವುದನ್ನು ತಪ್ಪಿಸಲು ಹಂತ ಹಂತವಾಗಿ ವಾಹನಗಳನ್ನು ಮರಳಿ ನೀಡಲು ತೀರ್ಮಾನಿಸಲಾಗಿದೆ.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಇನ್ನು ಲಾಕ್‌ಡೌನ್ ವೇಳೆ ಕರ್ತವ್ಯ ನಿಷ್ಠೆಯೊಂದಿಗೆ ಮಾನವೀಯತೆ ಕಾರ್ಯಗಳಿಂದಲೂ ಜನಮೆಚ್ಚುಗೆ ಕಾರಣವಾದ ಬೆಂಗಳೂರು ಪೊಲೀಸರು ವೈರಸ್ ಭೀತಿ ನಡುವೆಯೂ ಅಗತ್ಯವಿರುವ ಜನರಿಗೆ ಸಹಕಾರ ಮಾಡಿದ್ದನ್ನು ಯಾರು ಮರೆಯುವಂತಿಲ್ಲ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಮಹಾಮಾರಿ ಕರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದರಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡಾ ಒಂದಿಲ್ಲಾ ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿತ್ತು. ಆದರೆ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಕೆಲವು ಕಡೆಗಳಲ್ಲಿ ಲಾಕ್‌ಡೌನ್ ಸಡಿಕೆಯಾಗಿದೆ.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನಸಾಮಾನ್ಯರು ಒಂದು ಕಡೆ ಪರದಾಟುವಂತಾಗಿದ್ದರೆ ಮತ್ತೊಂದು ಕಡೆಗೆ ಕರೋನಾ ವೈರಸ್ ಸೋಂಕಿತರನ್ನು ಹೊರತುಪಡಿಸಿ ಸಾಮಾನ್ಯ ರೋಗಿಗಳು ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರು.

MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಕೂಡಾ ಮಾನವೀಯತೆ ಮೆರೆದಿದ್ದ ಬೆಂಗಳೂರು ನಗರ ಪೊಲೀಸ್ ಪೇದೆಯೊಬ್ಬರು ಸ್ಕೂಟರ್ ಮೂಲಕವೇ ನೂರಾರು ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿರೊಬ್ಬರಿಗೆ ಸಮಯಕ್ಕೆ ಸರಿಯಾಗಿ ಔಷಧಿ ತಲುಪಿಸಿ ಜನ ಮೆಚ್ಚುಗೆಗೆ ಕಾರಣರಾಗಿದ್ದರು.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಏಪ್ರಿಲ್​​ 10ರಂದು ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದ ಪೊಲೀಸ್​​ ಪೇದೆ ಎಸ್ ಕುಮಾರಸ್ವಾಮಿ ಅವರು​ ಒಟ್ಟು 860 ಕಿಲೋ ಮೀಟರ್ ಸ್ಕೂಟರ್ ಚಾಲನೆ ಮಾಡಿ ಸೂಕ್ತ ಸಮಯಕ್ಕೆ ಔಷಧಿ ಸಿಗದೆ ಪರದಾಡುತ್ತಿದ್ದ ಕ್ಯಾನ್ಸರ್ ರೋಗಿಯ ಪ್ರಾಣ ಉಳಿಸುವಲ್ಲಿ ನೆರವಾಗಿದ್ದರು.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದ ಕ್ಯಾನ್ಸರ್ ಔಷಧಿಯನ್ನು ಧಾರವಾಡವಾಡಕ್ಕೆ ತರಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೋಗಿ ಸಹಾಯಕ್ಕೆ ಧಾವಿಸಿದ ಪೊಲೀಸ್ ಪೇದೆ ಕುಮಾರಸ್ವಾಮಿ ಅವರು, ಔಷಧಿಯ ಮಾಹಿತಿ ಪಡೆದುಕೊಂಡ ನಂತರ ಆನ್‌ಲೈನ್ ಮೂಲಕ ಖರೀದಿಸಿ ತಲುಪಿಸಿ ಬಂದಿದ್ದರು.

ಲಾಕ್‌ಡೌನ್ ಸಡಿಲಿಕೆ: ಸೀಜ್ ಆಗಿದ್ದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿ..

ಇದೇ ಕಾರಣಕ್ಕೆ ಪೊಲೀಸ್ ಪೇದೆ ಕುಮಾರಸ್ವಾಮಿಯವರ ಮಾನವೀಯ ಕಾರ್ಯವನ್ನು ಮೆಚ್ಚಿದ್ದ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್ ಅವರು ಪೇದೆಯ ಜನಪರ ಕಾಳಜಿಗಾಗಿ ಸನ್ಮಾನ ಮಾಡಿದ್ದರು. ಈ ಮೂಲಕ ಕರ್ತವ್ಯ ನಿಷ್ಠೆಯ ಜೊತೆ ಜೊತೆಗೆ ಮಾನವೀಯ ಕಾರ್ಯಗಳ ಮೂಲಕ ನಮ್ಮ ಬೆಂಗಳೂರು ಪೊಲೀಸರು ಸಂಕಷ್ಟದ ಸಮಯವನ್ನು ನಿಭಾಯಿಸಿದ ಪರಿ ನಿಜಕ್ಕೂ ಅಭಿನಂದನಾರ್ಹ.

Most Read Articles

Kannada
English summary
Bengaluru police to return vehicles seized during lockdown. Read in Kannada.
Story first published: Friday, May 1, 2020, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X