ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಕರೋನಾ ವೈರಸ್ ಹರಡುವಿಕೆಗೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಮೇ 3ರ ತನಕ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಡಿಲಿಕೆ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮಾನುಸಾರವಾಗಿ ವಿವಿಧ ಉತ್ಪಾದನಾ ಕಂಪನಿಗಳು ಉತ್ಪಾದನಾ ಪ್ರಕ್ರಿಯೆಯನ್ನು ಪುನಾರಂಭಿಸುತ್ತಿವೆ.

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಏಪ್ರಿಲ್ 15ರಿಂದ ವಿಧಿಸಲಾಗಿದ್ದ 2ನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನು ಕೆಲ ದಿನಗಳು ಬಾಕಿ ಇರುವಾಗಲೇ ಹಸಿರು ವಲಯಗಳಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಮತ್ತು ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕಳೆದ ಒಂದು ತಿಂಗಳ ನಂತರ ಉತ್ಪಾದನಾ ಪ್ರಕ್ರಿಯೆ ಆರಂಭಿಸಲು ಸಿದ್ದವಾಗುತ್ತಿವೆ.

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ವಾಹನ ಮತ್ತು ಬಿಡಿಭಾಗಗಳ ಉತ್ಪಾದನೆಗೆ ಮರುಚಾಲನೆ ನೀಡಿರುವ ವಿವಿಧ ಆಟೋ ಕಂಪನಿಗಳು ಸೋಂಕು ಹರಡದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ನಿರ್ದಿಷ್ಟ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಹೀಗಿದ್ದರೂ ಕೂಡಾ ಕೆಲವು ಆಟೋ ಉತ್ಪಾದನಾ ಕಂಪನಿಗಳು ವಾಹನ ಉತ್ಪಾದನೆಯನ್ನು ಸದ್ಯಕ್ಕೆ ಕೈಗೊಳ್ಳದಿರಲು ನಿರ್ಧರಿಸಿದ್ದು, ಲಾಕ್‌ಡೌನ್ ಸಂಪೂರ್ಣವಾಗಿ ತೆಗೆದುಹಾಕಿದ ನಂತರವಷ್ಟೇ ಉತ್ಪಾದನೆ ಶುರು ಮಾಡುವ ಯೋಜನೆಯಲ್ಲಿವೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಕೇಂದ್ರ ಸರ್ಕಾರ ಸದ್ಯಕ್ಕೆ ಹಸಿರು ವಲಯದಲ್ಲಿರುವ ಕೈಗಾರಿಕೆಗಳಿಗೆ ಮಾತ್ರವೇ ಅವಕಾಶ ನೀಡಿರುವುದರಿಂದ ಆಟೋ ಉತ್ಪಾದನೆ ಬೇಕಿರುವ ಪ್ರಮುಖ ಬಿಡಿಭಾಗಗಳ ಕೊರತೆ ಶುರುವಾಗಿದ್ದು, ಪ್ರಮುಖ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕೆಂಪು ವಲಯದಲ್ಲಿರುವುದರಿಂದ ಅವುಗಳಿಗೆ ಇದುವರೆಗೂ ಉತ್ಪಾದನೆಗೆ ಅವಕಾಶ ಸಿಕ್ಕಿಲ್ಲ.

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಹೀಗಿರುವಾಗ ವಾಹನ ಉತ್ಪಾದನೆಯು ಅಸಾಧ್ಯ ಎಂಬುವುದನ್ನು ಅರಿತಿರುವ ಹಸಿರು ವಲಯದಲ್ಲಿರುವ ಆಟೋ ಕಂಪನಿಗಳು ಸದ್ಯಕ್ಕೆ ಉತ್ಪಾದನೆಯನ್ನು ಕೈಗೊಳ್ಳದಿರುವುದೇ ಒಳಿತು ಎನ್ನುವ ನಿರ್ಧಾರಕ್ಕೆ ಬಂದಿದ್ದು, ವಾಹನ ಮಾರಾಟಕ್ಕೂ ಅವಕಾಶ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಒಂದು ವೇಳೆ ಎಲ್ಲಾ ಮಾದರಿಯ ಬಿಡಿಭಾಗಗಳು ಲಭ್ಯವಾಗಿ ಉತ್ಪಾದನೆ ಮಾಡಲಾದ ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಲ್ಲಿ ಅದು ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದ್ದು, ಹೀಗಾಗಿ ಲಾಕ್‌ಡೌನ್ ಸಡಿಲಿಕೆಯಾದರೂ ಆಟೋ ಕಂಪನಿಗಳಿಗೆ ಯಾವುದೇ ಪ್ರಯೋಜನವಿಲ್ಲ ಎನ್ನಬಹುದು.

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಸದ್ಯ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಕೈಗಾರಿಕಾ ಸಂಸ್ಥೆಗಳು ಕೇವಲ ಶೇ.30 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪನ್ನಗಳನ್ನು ಸಿದ್ದಪಡಿಸುತ್ತಿವೆ.

More from DriveSpark

Article Published On: Wednesday, April 29, 2020, 20:05 [IST]
English summary
The Indian automobile manufacturers are facing major challenges to resume production due to corona issues and uncertain market conditions. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+