ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪ್ರೀಮಿಯಂ BMW ಕಾರಿನ ವಿಶೇಷತೆಗಳು!
ಜಾಗತಿಕ ಪ್ರೀಮಿಯಂ ಕಾರು ತಯಾರಕ ಬ್ರ್ಯಾಂಡ್ ಆಗಿರುವ ಬಿಎಂಡಬ್ಲ್ಯು (BMW) ತನ್ನ ಪ್ರೀಮಿಯಂ ಗ್ರಾಹಕರಿಗಾಗಿ, ಹೊಸ ಎಕ್ಸ್3 30 ಎಕ್ಸ್‌ಡ್ರೈವ್ ಎಂ ಸ್ಪೋರ್ಟ್ ಪ್ರೋ (BMW X3 30 xDrive M Sport Pro) ಎಂಬ ಐಷಾರಾಮಿ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಆಕರ್ಷಕ ಕಾರಿನ ಬೆಲೆಯು ರೂ. 74,50,000 ಎಕ್ಸ್-ಶೋರೂಂ ಬೆಲೆಯಿದೆ. ಸ್ಪೋರ್ಟಿ ಡಿಸೈನ್, ಆಕರ್ಷಕ ಫೀಚರ್ಸ್, ಪ್ರೀಮಿಯಂ ಇಂಟೀರಿಯರ್, ಅತ್ಯಾಧುನಿಕ ಫೀಚರ್ಸ್ ಒಳಗೊಂಡಿದೆ. ಈ ಕಾರಿನ ಬಗ್ಗೆ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.
ಅಪ್ಹೋಲ್ಸ್ಟರಿ ಆಯ್ಕೆಗಳು: ವೆಗಾಂಜಾ ಪರ್ಫೊರೇಟೆಡ್ ಎಸ್ಪ್ರೆಸೊ ಬ್ರೌನ್ ಮತ್ತು ವೆಗಾಂಜಾ ಪರ್ಫೊರೇಟೆಡ್ ಕಾಲ್ಮ್ ಬೀಜ್ ನಂತಹ ಬಣ್ಣಗಳಲ್ಲಿ ಸಿಗಲಿದೆ. ಬ್ರೂಕ್ಲಿನ್ ಗ್ರೇ ಮೆಟಾಲಿಕ್, ಡ್ಯೂನ್ ಗ್ರೇ ಮೆಟಾಲಿಕ್, ಆಲ್ಪೈನ್ ವೈಟ್, ಇಂಡಿವಿಜುವಲ್ ಟಾಂಜಾನೈಟ್ ಬ್ಲೂ ಮತ್ತು ಬ್ಲ್ಯಾಕ್ ಸಫೈರ್ ಮೆಟಾಲಿಕ್ ಬಣ್ಣಗಳಲ್ಲಿ ಕಾರು ಲಭ್ಯವಿದೆ. ಡ್ರೈವರ್‌ಗೆ ಸ್ಪೋರ್ಟಿ ಅನುಭವ ನೀಡುವಂತಹ M ಸ್ಟೀರಿಂಗ್ ವೀಲ್ ಫ್ಲಾಟ್‌ಬಾಟಮ್ಡ್ ರಿಮ್‌ಗಳು ಮತ್ತು ಹ್ಯಾಪ್ಟಿಕ್ ಕಂಟ್ರೋಲ್ ಬಟನ್‌ಗಳೊಂದಿಗೆ ಬರುತ್ತದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ, ವಿಭಾಗದಲ್ಲಿಯೇ ಅತಿ ದೊಡ್ಡದಾದ ಪನೋರಮಿಕ್ ಗ್ಲಾಸ್ ಸನ್‌ರೂಫ್, ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಟ್ರಾವೆಲ್ & ಕಂಫರ್ಟ್ ಸಿಸ್ಟಮ್, ಫುಲ್ಲಿ ಡಿಜಿಟಲ್ 12.3-ಇಂಚಿನ ಇನ್‌ಫೊ ಡಿಸ್ಪ್ಲೆ ಮತ್ತು 14.9-ಇಂಚಿನ ಕಂಟ್ರೋಲ್ ಡಿಸ್ಪ್ಲೆ ನೀಡಲಾಗಿದೆ. ಜೊತೆಗೆ ಸ್ಪೋರ್ಟಿ ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು, ರೋಲರ್ ಸನ್‌ಬ್ಲೈಂಡ್, 15 ಸ್ಪೀಕರ್‌ಗಳು ಮತ್ತು 750 ವ್ಯಾಟ್‌ಗಳ ಆಡಿಯೊ ಪವರ್‌ನೊಂದಿಗೆ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್ ಒದಗಿಸಲಾಗಿದೆ.
ಈ ಕಾರು 4,755 ಮಿ.ಮೀ ಉದ್ದ ಮತ್ತು 2,865 ಮಿ.ಮೀ ವೀಲ್‌ಬೇಸ್‌ನೊಂದಿಗೆ ವಿಭಾಗದಲ್ಲಿ ಅತಿ ಉದ್ದವಾದ ಕಾರಾಗಿದೆ. ಜೊತೆಗೆ 1,920 ಮಿ.ಮೀ ಅಗಲ ಮತ್ತು 1,660 ಮಿ.ಮೀ ಎತ್ತರದೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಅಗಲವಾದ ಮತ್ತು ಎತ್ತರದ ಕಾರು ಕೂಡ ಆಗಿದೆ. ಆಟೋ ಸ್ಟಾರ್ಟ್-ಸ್ಟಾಪ್, ECO PRO ಮೋಡ್, ಬ್ರೇಕ್ ಎನರ್ಜಿ ರೀಜನರೇಷನ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, 50:50 ತೂಕ ವಿತರಣೆ ಸೇರಿದಂತೆ ಇತರ ಹಲವು ನವೀನ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಡಿಸೈನ್ ವಿಷಯಕ್ಕೆ ಬಂದರೆ ಸ್ಟ್ಯಾಂಡರ್ಡ್ 20-ಇಂಚಿನ M ಅಲಾಯ್ ವೀಲ್‌ಗಳು, ರೆಡ್ ಸ್ಪೋರ್ಟ್ ಬ್ರೇಕ್‌ಗಳು ಕಾರಿಗೆ ಮತ್ತಷ್ಟು ಲುಕ್ ನೀಡುತ್ತವೆ. ಹೈ ಗ್ಲೋಸ್ ಬ್ಲಾಕ್ ರೂಫ್ ರೈಲ್, ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ. ಐಕಾನಿಕ್ ಫುಲ್ಲಿ ಬ್ಲ್ಯಾಕ್ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್, ಹೈ ಬೀಮ್ ಅಸಿಸ್ಟೆಂಟ್ ಮತ್ತು ಕಾರ್ನರಿಂಗ್ ಲೈಟ್‌ಗಳನ್ನು ಹೊಂದಿರುವ ಅಡಾಪ್ಟಿವ್ LED ಹೆಡ್‌ಲೈಟ್‌ಗಳು, ಅಡಾಪ್ಟಿವ್ LED ಪ್ರೊಜೆಕ್ಟರ್ ಲ್ಯಾಂಪ್ ಸೆಟಪ್ ನೀಡಲಾಗಿದೆ.
ಎಂಜಿನ್ ವಿಷಯಕ್ಕೆ ಬಂದರೆ, 258 hp ಪವರ್ ಮತ್ತು 400 Nm ಟಾರ್ಕ್ ಉತ್ಪಾದಿಸುವ 2-ಲೀಟರ್ 4-ಸಿಲಿಂಡರ್ ಇನ್-ಲೈನ್ ಪೆಟ್ರೋಲ್ ಎಂಜಿನ್ ಹೋಂದಿದೆ. ಜೊತೆಗೆ ಈ ಕಾರು 48V ತಂತ್ರಜ್ಞಾನವನ್ನು ಪ್ರಮಾಣಿತವಾಗಿ ಹೊಂದಿದೆ, ಇದು ಚಲನೆಗೆ ಗಮನಾರ್ಹವಾಗಿ ತ್ವರಿತ ಪ್ರತಿಕ್ರಿಯೆಯನ್ನು ನೀಡುತ್ತದೆ. ಕಾರು ಕೇವಲ 6.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಸೌಕರ್ಯ ಮತ್ತು ಸುರಕ್ಷತೆಗಾಗಿ 'ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್' (DTC), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್, ಆಕ್ಟಿವ್ ಆಲ್-ವೀಲ್ ಡ್ರೈವ್ ತಂತ್ರಜ್ಞಾನ, ಆಟೋ ಡಿಫರೆನ್ಷಿಯಲ್ ಬ್ರೇಕ್‌ಗಳು (ADB-X) ನೀಡಲಾಗಿದೆ. ಜೊತೆಗೆ ಲೇನ್ ಕೀಪ್ ಅಸಿಸ್ಟೆಂಟ್, ಪಾರ್ಕಿಂಗ್ ಅಸಿಸ್ಟೆಂಟ್ ಪ್ಲಸ್, ಸರೌಂಡ್ ವ್ಯೂ ಕ್ಯಾಮೆರಾದೊಂದಿಗೆ ಆಟೋ ಪಾರ್ಕಿಂಗ್, ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್, ರಿವರ್ಸಿಂಗ್ ಅಸಿಸ್ಟೆಂಟ್, ಡ್ರೈವ್ ರೆಕಾರ್ಡರ್‌ನಂತಹ ಫೀಚರ್ಸ್ ಹೊಂದಿದೆ.
BMW ಸೇಫ್ಟಿಗಾಗಿ ಎಂಟು ಏರ್‌ಬ್ಯಾಗ್‌ಗಳು, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಕ್ರ್ಯಾಶ್ ಸೆನ್ಸರ್‌ನೊಂದಿಗೆ ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬಿಲೈಜರ್, ಅಟೆನ್ಷನ್‌ನೆಸ್ ಅಸಿಸ್ಟೆನ್ಸ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (CBC) ಸೇರಿದಂತೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ಮತ್ತು ಚೈಲ್ಡ್ ಸೀಟ್ ಮೌಂಟಿಂಗ್ ಅನ್ನು ಒಳಗೊಂಡಿದೆ.


Click it and Unblock the Notifications








