ರೂ.4.57 ಲಕ್ಷಕ್ಕೆ ಹೊಸ ಟಾಟಾ ಕಾರು.. ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ.. ತಕ್ಷಣ ಶೋರೂಂಗೆ ಓಡಿ!
ಟಾಟಾ ಮೋಟಾರ್ಸ್ (Tata Motors) ನಂಬಿಕಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೂರ್, ಆಲ್ಟೋಜ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದೇ ಕಾರುಗಳ ಖರೀದಿ ಮೇಲೆ ಈ 2026ರ ಮಾರ್ಚ್‌ನಲ್ಲಿ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಪ್ರಯೋಜನಗಳನ್ನು ಘೋಷಣೆ ಮಾಡಲಾಗಿದೆ. ಯುಗಾದಿಗೆ ನೂತನ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಟಾಟಾ ಟಿಯಾಗೊ:
ಇದೊಂದು ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದ್ದು, ಈ ಕಾರಿನ 2026ರ ಮಾಡೆಲ್‌ಗಳು, ರೂ.20,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ. 2025 ಹಾಗೂ 2024ರ ಮಾಡೆಲ್‌ಗಳು ರೂ.35,000 ವರೆಗೆ ರಿಯಾಯಿತಿ ಹೊಂದಿವೆ. ನೂತನ 'ಟಿಯಾಗೊ' ರೂ.4.57 ಲಕ್ಷದಿಂದ ರೂ.7.82 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 5 ಆಸನಗಳನ್ನು ಪಡೆದಿದೆ.

ಟಾಟಾ ಟಿಗೂರ್:
ಈ ಸೆಡಾನ್‌ನ 2026ರ ಮಾಡೆಲ್‌ಗಳು ರೂ.25,000 ಹಾಗೂ 2025/ 2024ರ ಮಾಡೆಲ್‌ಗಳು ರೂ.35,000 ವರೆಗೆ ಆಫರ್‌ನ್ನು ಪಡೆದಿವೆ. ಹೊಸ 'ಟಿಗೂರ್' ಕನಿಷ್ಠ ರೂ.5.49 ಲಕ್ಷ ಹಾಗೂ ಗರಿಷ್ಠ ರೂ.8.74 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ.
ಟಾಟಾ ಆಲ್ಟೋಜ್:
ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಈ ಕಾರಿನ 2026ರ ಮಾಡೆಲ್‌ಗಳು ರೂ.30,000 ವರೆಗೆ ರಿಯಾಯಿತಿ ಒಳಗೊಂಡಿವೆ. 2025 ಮತ್ತು 2024ರ ಮಾಡೆಲ್‌ಗಳು ರೂ.25,000 ರಿಂದ ರೂ.85,000 ವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ನೂತನ 'ಆಲ್ಟೋಜ್' ರೂ.6.30 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 5 ಆಸನಗಳನ್ನು ಪಡೆದಿದೆ.

ಟಾಟಾ ಪಂಚ್:
ಈ ಮೈಕ್ರೋ ಎಸ್‌ಯುವಿಯ 2026ರ ಮಾಡೆಲ್‌ಗಳಿಗೆ ಯಾವುದೇ ಆಫರ್ ಲಭ್ಯವಿಲ್ಲ. ಆದರೂ 2025/ 2024ರ ಮಾಡೆಲ್‌ಗಳು ರೂ.50,000 ವರೆಗೆ ರಿಯಾಯಿತಿ ಹೊಂದಿವೆ. ಹೊಸ 'ಪಂಚ್' ಕನಿಷ್ಠ ರೂ.5.60 ಲಕ್ಷ ಮತ್ತು ಗರಿಷ್ಠ ರೂ.10.55 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5 ಆಸನ ಆಯ್ಕೆಗಳನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್:
ಇದೊಂದು ನಂಬರ್ 1 ಎಸ್‌ಯುವಿಯಾಗಿದೆ. ಈ ಕಾರಿನ 2026ರ ಮಾಡೆಲ್‌ಗಳು ರೂ.25,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ. 2025 ಹಾಗೂ 2024ರ ಮಾಡೆಲ್‌ಗಳು ರೂ.50,000 ರಿಂದ ರೂ.65,000 ವರೆಗೆ ರಿಯಾಯಿತಿ ಹೊಂದಿವೆ. ನೂತನ 'ನೆಕ್ಸಾನ್' ರೂ.7.32 ಲಕ್ಷದಿಂದ ರೂ.14.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 5 ಆಸನಗಳನ್ನು ಹೊಂದಿದೆ.

ಟಾಟಾ ಕರ್ವ್:
ಈ ಕೂಪೆ ಎಸ್‌ಯುವಿಯ 2026ರ ಮಾಡೆಲ್‌ಗಳು ರೂ.40,000 ವರೆಗೆ ಆಫರ್‌ನ್ನು ಹೊಂದಿವೆ. 2025/ 2024ರ ಮಾಡೆಲ್‌ಗಳು ಕೂಡ ರೂ.40,000 ವರೆಗೆ ರಿಯಾಯಿತಿ ಒಳಗೊಂಡಿವೆ. ಹೊಸ 'ಕರ್ವ್' ಕನಿಷ್ಠ ರೂ.9.66 ಲಕ್ಷ ಹಾಗೂ ಗರಿಷ್ಠ ರೂ.18.85 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.
ಟಾಟಾ ಹ್ಯಾರಿಯರ್:
ಇದು ಜನಪ್ರಿಯ ಎಸ್‌ಯುವಿಯಾಗಿದೆ. ಈ ಕಾರಿನ 2026ರ ಮಾಡೆಲ್‌ಗಳು ರೂ.35,000 ವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿವೆ. 2025 ಹಾಗೂ 2024ರ ಮಾಡೆಲ್‌ಗಳು ರೂ.75,000 ವರೆಗೆ ಆಫರ್‌ನ್ನು ಪಡೆದಿವೆ. ನೂತನ 'ಹ್ಯಾರಿಯರ್' ರೂ.12.89 ಲಕ್ಷದಿಂದ ರೂ.25.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ.

ಟಾಟಾ ಸಫಾರಿ:
ಈ ದೊಡ್ಡ ಗಾತ್ರದ ಎಸ್‌ಯುವಿಯ 2026ರ ಮಾಡೆಲ್‌ಗಳು ರೂ.35,000 ವರೆಗೆ ರಿಯಾಯಿತಿ ಹೊಂದಿವೆ. 2025/ 2024ರ ಮಾಡೆಲ್‌ಗಳು ರೂ.75,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ. ಹೊಸ 'ಸಫಾರಿ' ಕನಿಷ್ಠ ರೂ.13.29 ಲಕ್ಷ ಮತ್ತು ಗರಿಷ್ಠ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 6/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಈ ಆಫರ್ ನಗರದಿಂದ ನಗರಕ್ಕೆ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಾಗಿರಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








