ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....
ಮದುವೆ ಸಮಾರಂಭಕ್ಕೆ ಹೊರಟ್ಟಿದ್ದ ಟಾಟಾ ಸುಮೊ ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮದುವೆ ಸಮಾರಂಭಕ್ಕೆ ಹೊರಟ್ಟಿದ್ದ ಟಾಟಾ ಸುಮೊ ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಕಂದಕದ ಬಳಿ ಪಾರ್ಕ್ ಮಾಡಲಾಗಿದ್ದ ಸುಮೊ ಕಾರು ನಿಯಂತ್ರಣ ತಪ್ಪಿ ಕಂದಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಒಟ್ಟು 14 ಮಂದಿ ಪ್ರಯಾಣಿಕರಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಘಟನೆಗೂ ಮುನ್ನ ಮದುವೆ ಸಮಾರಂಭಕ್ಕೆ ಹೊರಟಿದ್ದ ಟಾಟಾ ಸುಮೊದಲ್ಲಿ ಒಂದೇ ಕುಟುಂಬದ 14 ಜನ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಯಾವುದೋ ಕಾರಣಕ್ಕಾಗಿ ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸಲಾಗಿತ್ತು.

ಈ ವೇಳೆ ಕಾರು ಚಾಲಕನನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಯಾಣಿಕರು ಕಾರಿನಲ್ಲಿ ಇದ್ದರೂ. ಈ ವೇಳೆ ಮುಂಭಾಗದಲ್ಲೇ ಕುಳಿತಿದ್ದ 6 ವರ್ಷದ ಮಗುವೊಂದು ಕಾರಿನ ಹ್ಯಾಂಡಲ್ ಬ್ರೇಕ್ ಸಡಿಲಗೊಳಿಸಿದ್ದು, ಇಳಿಜಾರಿನಲ್ಲಿ ನಿಂತಿದ್ದ ಕಾರು ಹಿಮ್ಮುಖವಾಗಿ ಚಲಿಸಿದೆ.

ಹಿಮ್ಮುಖವಾಗಿ ಚಲಿಸಿದ ಕಾರು ರಸ್ತೆಬದಿಯಲ್ಲೇ ಇದ್ದ ಕಂದಕಕ್ಕೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಜೊತೆಗೆ ಕಂದಕದಲ್ಲಿ ತುಂಬಿದ್ದ 15 ಅಡಿಯಷ್ಟು ನೀರಿನಲ್ಲಿ ಸುಮೊ ಕಾರು ಮುಳುಗಡೆಯಾಗಿದ್ದು, ಈ ವೇಳೆ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

ಕೊನೆಗೂ ಕಾರಿನ ಒಳಗಡೆ ಸಿಲುಕಿದ್ದ 7 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದ 7 ಮಂದಿ ಅದಾಗಲೇ ಉಸಿರು ಚೆಲ್ಲಿದ್ದರು. ಇದಲ್ಲದೇ ಹ್ಯಾಂಡಲ್ ಬ್ರೇಕ್ ಸಡಿಲಮಾಡಿದ್ದ ಮಗು ಕೂಡಾ ದುರಂತದಲ್ಲಿ ಸಾವನ್ನಪ್ಪಿದೆ.

55 ವರ್ಷದ ಓಂ ಪ್ರಕಾಶ್ ರಸ್ಟೋಗಿ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಕುಟುಂಬ ಸಮೇತರಾಗಿ ಮದುವೆ ಸಮಾರಂಭಕ್ಕಾಗಿ ಹೊರಟ್ಟಿದ್ದರು. ಆದ್ರೆ ವಿಧಿಯಾಟ ಬಲ್ಲವರು ಯಾರು ಎನ್ನುವಂತೆ ಮಾರ್ಗ ಮಧ್ಯೆದಲ್ಲೇ ಮಸಣ ಸೇರಿದ್ದಾರೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೂ ಘಟನೆ ನಂತರ 1 ಗಂಟೆ ತಡವಾಗಿ ಬಂದ ವಿಪತ್ತು ನಿರ್ವಹಣಾ ತಂಡದಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದ್ದು, ಕಂದಕಕ್ಕೆ ಉರುಳಿದ್ದ ಸುಮೊ ಕಾರುನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ಸ್ಥಳೀಯರು ಕೂಡಾ ಮಾತನಾಡಿದ್ದು, ಕಣ್ಣು ಮುಂದೆಯೇ ಕಂದಕಕ್ಕೆ ಬೀಳುತ್ತಿದ್ದ ಕಾರನ್ನು ತಡೆಯಲು ಸಾಧ್ಯವಾಗದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕಾರಿನಲ್ಲಿದ್ದ ಬಹುತೇಕರಿಗೆ ಕಾರು ಚಾಲನೆಯ ಬಗ್ಗೆ ಗೊತ್ತಿಲ್ಲದಿರುವುದು ಸಹ ಉರುಳಿ ಹೋಗುತ್ತಿರುವ ಕಾರನ್ನು ತಡೆಯಲು ಸಾಧ್ಯವಾಗಿಲ್ಲ.

ಒಟ್ಟಿನಲ್ಲಿ ಬಾಲಕಿ ಮಾಡಿದ ಒಂದು ಸಣ್ಣ ತಪ್ಪು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಹೀಗಾಗಿ ಕಾರು ಚಾಲನೆ ವೇಳೆ ಇಂತಹ ಅವಘಡಗಳ ಬಗೆಗೆ ಎಚ್ಚರವಹಿಸುವುದು ಒಳಿತು. ಇಲ್ಲವಾದ್ರೆ ಸಣ್ಣಪುಟ್ಟ ತಪ್ಪುಗಳೇ ದೊಡ್ಡ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್ ವಿಶೇಷತೆ ಏನು?


Click it and Unblock the Notifications








