TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ
ತಮಿಳುನಾಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯು ವಿರುದು ನಗರ ಜಿಲ್ಲೆಯ ರಾಜಪಾಳ್ಯಂ ಎಂಬಲ್ಲಿ ಈ ದುರಂತ ಸಂಭವಿಸಿದೆ.
ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದು, ಕೇರಳ ಪ್ರವಾಸ ಮುಗಿಸಿ ವಾಪಸ್ ಆಗುವ ವೇಳೆ ಈ ಘಟನೆ ನಡೆದಿದೆ. ವೇಗದಲ್ಲಿದ್ದ ಲಾರಿಯು ಇನೋವಾ ಕಾರಿಗೆ ಡಿಕ್ಕಿ ಪರಿಣಾಮವೇ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಕಾರಿನ ಮುಂಭಾಗಕ್ಕೆ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಮೃತರನ್ನು ರತ್ನಾ, ಕಲಾವತಿ, ಶಂಕರಗೌಡ, ದಾರಾ, ಕೀರ್ತಿಕಾ, ಲಕ್ಷ್ಮೀನಾರಾಯಣ ಮತ್ತು ಮಹೇಶ ಎಂದು ಗುರುತಿಸಲಾಗಿದೆ.
ಒಟ್ಟು 9 ಜನ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದು ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಘಟನೆ ನಂತರ ಲಾರಿ ಚಾಲಕನನ್ನು ಬಂಧಿಸಿರುವ ಪೊಲೀಸರು ಅಪಘಾತದ ಕುರಿತು ಮಾಹಿತಿ ಕಲೆಹಾಕುತ್ತಿದ್ದು, ಇನೋವಾದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನಲಾಗಿದೆ. ಇನ್ನು ಘಟನೆ ಬಗ್ಗೆ ಚಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೇ ಘಟನೆಯಲ್ಲಿ ಇನೋವಾ ಕಾರು ಸಂಪೂರ್ಣವಾಗಿ ಪುಡಿ ಪುಡಿಯಾಗಿರುವುದನ್ನು ಗಮನಿಸಿದ್ದಲ್ಲಿ ಕಾರು ಚಾಲನೆಯಲ್ಲಿನ ತಪ್ಪುಗಳು ಸಹ ಅನುಮಾನಕ್ಕೆ ಕಾರಣವಾಗಿವೆ.
ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...
ಕಾಲಕ್ಕೆ ತಕ್ಕಂತೆ ಭಾರತೀಯ ಸೇನೆಯು ಕೂಡಾ ವಾಹನ ತಂತ್ರಜ್ಞಾನದಲ್ಲಿ ಬದಲಾವಣೆ ಹೊಂದುತ್ತಲೇ ಬಂದಿದೆ. ಇದೀಗ ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳಲಾಗಿದ್ದು, ಅದರ ಬದಲಾಗಿ ಟಾಟಾ ವಿನೂತನ ಸಫಾರಿ ಸ್ಟ್ರೋಮ್ ಎಸ್‌ಯುವಿ ಬಳಕೆಗೆ ಹಸಿರು ನಿಶಾನೆ ತೊರಿದೆ.
ಇಂಡಿಯನ್ ಆರ್ಮಿಯಲ್ಲಿ ಈ ವರೆಗೆ 25 ಸಾವಿರದಷ್ಟು ಮಾರುತಿ ಜಿಪ್ಸಿ ಯುಟಿಲಿಟಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಈ ಹಗುರ ವಾಹನಗಳನ್ನು ಭಯೋತ್ಪಾದನಾ ನಿಗ್ರಹ ಹಾಗೂ ಇತರ ಭದ್ರತಾ ಕಾರ್ಯಾಚರಣೆಗೆ ಬಳಸಲಾಗಿತ್ತು. ಆದ್ರೆ ಸುಧಾರಿತ ತಂತ್ರಜ್ಞಾನ ಕೊರತೆಯನ್ನು ನಿಗಿಸಲು ಜಿಪ್ಸಿಗೆ ಗುಡ್ ಬೈ ಹೇಳುವುದು ಅನಿವಾರ್ಯವಾಗಿದೆ.
ಇದಕ್ಕಾಗಿಯೇ ಸೇನಾ ವಾಹನಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಬರೋಬ್ಬರಿ 3 ಸಾವಿರ ಕೋಟಿ ಮೌಲ್ಯದ ಯೋಜನೆಯೊಂದನ್ನು ಜಾರಿಗೆ ಮಾಡಲಾಗಿದ್ದು, ಇದರ ಪರಿಣಾಮವೇ ಸೇನಾ ಪಡೆಯಲ್ಲಿನ ಗಸ್ತು ವಾಹನಗಳ ಪಟ್ಟಿಯಲ್ಲಿ ಟಾಟಾ ಸಫಾರಿ ಸ್ಟ್ರೋಮ್ ಹೊಸ ಆಯ್ಕೆಯಾಗಿ ಹೊರಹೊಮ್ಮಿದೆ.
ಕಳೆದ ಕೆಲದಿನಗಳ ಹಿಂದಷ್ಟೇ ಮಿಲಿಟರಿ ವರ್ಷನ್ ಎಸ್‌ಯುವಿ ಕಾರುಗಳಿಗಾಗಿ ಬಿಡ್ ಮಾಡಿದ್ದ ಭಾರತೀಯ ಸೇನೆಯು, ಮಹೀಂದ್ರಾ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರುಗಳ ಮೂಲಕ ಪರೀಕ್ಷೆ ಕೈಗೊಂಡಿತ್ತು. ಇದರಲ್ಲಿ ಸಫಾರಿ ಸ್ಟೋಮ್‌ಗಳು ಸೇನಾಪಡೆಯ ಅಗತ್ಯಕ್ಕೆ ತಕ್ಕಂತೆ ಸಿದ್ದವಾಗಿರುವುದು ಆಯ್ಕೆಗೆ ಕಾರಣವಾಗಿದೆ.
ಸದ್ಯ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮೊಟ್ಟ ಮೊದಲ ಬಾರಿಗೆ ಸೇನಾ ಕ್ಯಾಂಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 3,193 ಸಫಾರಿ ಸ್ಟ್ರೋಮ್ ಕಾರುಗಳನ್ನು ಟಾಟಾ ಮೋಟಾರ್ಸ್ ಸಂಸ್ಥೆಯು ಸೇನಾಪಡೆಗೆ ಸರಬರಾಜು ಮಾಡಲಿದೆ.
ಸೇನಾಪಡೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮ್ಯಾಟೆ ಗ್ರೀನ್ ಬಣ್ಣ ಹೊಂದಿದ್ದು, ಸ್ಟ್ರೋಮ್ ಕಾರಿನ ಇಂಚಿಂಚೂ ಕೂಡಾ ಆರ್ಮಿ ಗ್ರೀನ್ ಬಣ್ಣದೊಂದಿಗೆ ಮಿಂಚುತ್ತಿವೆ.
ಆದರೇ ಫೂಟ್ ಬೋರ್ಡ್ ಮತ್ತು ರೂಫ್ ರೈಲ್ಸ್ ಹೊರತುಪಡಿಸಿ ಸಂಪೂರ್ಣ ಹಸಿರು ಮಯವಾಗಿರುವ ಸಫಾರಿ ಸ್ಟ್ರೋಮ್ ಕಾರುಗಳು, ಸಾಮಾನ್ಯ ಮಾದರಿಯ ಸಫಾರಿ ಸ್ಟ್ರೋಮ್‌ಗೆ ಕಾರುಗಳಿಂತ ಸಾಕಷ್ಟು ವಿಭಿನ್ನತೆಯನ್ನು ಹೊಂದಿವೆ.
ಜೊತೆಗೆ ಸರಕು ಸಾಗಿಸಲು ಅನುಕೂಲಕವಾಗುವಂತೆ ರಿಯರ್ ಹುಕ್, ಕಾರಿನ ಬ್ಯಾನೆಟ್ ಮೇಲೆ ಆ್ಯಂಟೆನಾ, ಫ್ರಂಟ್ ಬಂಪರ್‌ಗಳಲ್ಲಿ ಸ್ಪಾಟ್ ಲೈಟ್ ಪಡೆದುಕೊಂಡಿದ್ದು, ಇನ್ನು ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಎಂಜಿನ್ ಸಾಮರ್ಥ್ಯ ಆರ್ಮಿ ವರ್ಷನ್ ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 2.2 ಲೀಟರ್ 4 ಸಿಲಿಂಡರಿನ ಟರ್ಬೋ ಚಾರ್ಜ್ಡ್ ಡೀಸೇಲ್ ಎಂಜಿನ್ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 154 ಬಿಎಚ್‌ಪಿ ಮತ್ತು 400ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಆಫ್ ರೋಡ್ ಕೌಶಲ್ಯ ಹೊಂದಿದ್ದು, ಇದು ಗಡಿಭಾಗಗಳಲ್ಲಿನ ರಕ್ಷಣಾ ಕಾರ್ಯಚರಣೆಗಳಲ್ಲಿ ಮಹತ್ವದ ಪಾತ್ರವಹಿಸಲಿವೆ.
ಇನ್ನು ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯು ತನ್ನ ಅಗತ್ಯಗಳಿಗನುಸಾರವಾಗಿ ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿದ್ದು, ಸೇನೆಗೆ ಇದೀಗ ತನ್ನ ಸಾಮಾನ್ಯ ಸೇನಾ ವಾಹನಗಳಿಗಾಗಿ ಕನಿಷ್ಠ 120 ಹಾರ್ಸ್ ಪವರ್ ಉತ್ಪಾದಿಸುವ ಟರ್ಬೊ ಡೀಸೆಲ್ ಎಂಜಿನ್ ವಾಹನಗಳ ಅಗತ್ಯವಿದೆ.
ಹೀಗಾಗಿಯೇ 1.3 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಾರುತಿ ಜಿಪ್ಸಿಗಳನ್ನು ಕೈಬೀಡುತ್ತಿರುವ ಭಾರತೀಯ ಸೇನೆಯು, ಡ್ಯುಯಲ್ ಏರ್‌ಬ್ಯಾಗ್, ಪವರ್ ವಿಂಡೋ, ಎಬಿಎಸ್‌ಗಳಂತಹ ಆಧುನಿಕ ಸೌಲಭ್ಯವಿರುವ ವಾಹನಗಳನ್ನು ಖರೀದಿಸಲು ಬೃಹತ್ ಪ್ರಮಾಣದ ಯೋಜನೆ ರೂಪಿಸಿದೆ ಎನ್ನಬಹುದು.