ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್
ಸ್ಟಾಕ್ ಯಾರ್ಡ್‌ನಿಂದ ಡೀಲರ್ಸ್ ಯಾರ್ಡ್‌ಗೆ ತೆಗದುಕೊಂಡು ಬರುವಾಗ ನಡೆದ ಒಂದು ಅಪಘಾತದಿಂದಾಗಿ ಹೊಸ ಕಾರನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗುವಂತಾಗಿದೆ.
ಆ ಗ್ರಾಹಕ ಇನ್ನೇನು ಕೆಲವೇ ನಿಮಿಷಗಳಲ್ಲಿ ತಾನು ಬುಕ್ ಮಾಡಿದ್ದ ಹೊಸ ಕಾರನ್ನು ಡೀಲರ್ಸ್ ಯಾರ್ಡ್‌ನಿಂದ ಮನೆಗೆ ತೆಗೆದುಕೊಂಡು ಹೋಗುವ ತವಕದಲ್ಲಿದ್ದ. ಆದ್ರೆ ಸ್ಟಾಕ್ ಯಾರ್ಡ್‌ನಿಂದ ಡೀಲರ್ಸ್ ಯಾರ್ಡ್‌ಗೆ ತೆಗದುಕೊಂಡು ಬರುವಾಗ ನಡೆದ ಒಂದು ಅಪಘಾತದಿಂದಾಗಿ ಹೊಸ ಕಾರನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗುವಂತಾಗಿದೆ.

ಹೌದು.. ಕೇರಳದ ತಿರುವನಂತಪುರದಲ್ಲಿ ನಡೆದ ಅಪಘಾತ ಪ್ರಕರಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ಮಾರುತಿ ಸುಜುಕಿ ಡಿಜೈರ್ ಕಾರನ್ನು ಗ್ರಾಹಕನಿಗೆ ವಿತರಣೆ ಮಾಡುವ ಉದ್ದೇಶದಿಂದ ಸ್ಟಾಕ್ ಯಾರ್ಡ್‌ನಿಂದ ಡೀಲರ್ಸ್ ಯಾರ್ಡ್‌ನತ್ತ ತರುವಾಗ ಅಪಘಾತ ಸಂಭವಿಸಿ ಡಿಜೈರ್ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ಮಾರುತಿ ಸುಜುಕಿ ಡಿಜೈರ್ ಖರೀದಿಗಾಗಿ ಬುಕ್ಕಿಂಗ್ ಮಾಡಿದ್ದ ಗ್ರಾಹಕ ಆಶಿಸ್ ಮೆನನ್ ಎಂಬುವರಿಗೆ ಹೊಸ ಕಾರುನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಿಗ್ನಲ್ ಒಂದರ ಬಳಿ ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಆಟೋ ರಿಕ್ಷಾ ಡಿಜೈರ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಆಟೋ ರಿಕ್ಷಾ ವೇಗದಲ್ಲಿದ್ದ ಕಾರಣ ಯು ಟರ್ನ್ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ್ದು, ಗುದ್ದಿದ ರಭಸಕ್ಕೆ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಆದ್ರೆ ಅದೃಷ್ಟವಶಾತ್ ಘಟನೆಯಲ್ಲಿ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ಇದೇ ಘಟನೆ ಕುರಿಕು ಪ್ರತ್ಯಕ್ಷದರ್ಶಿಯೊಬ್ಬರು ಕೂಡಾ ಅಭಿಪ್ರಾಯ ಹಂಚಿಕೊಂಡಿದ್ದು, ಈ ಅಪಘಾತವು ಯು ಟರ್ನ್‌ನಿಂದಾದ ಅವಘಡ ಅಲ್ಲ. ಬದಲಾಗಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ ಎಂದಿದ್ದಾರೆ.

ಇದರಿಂದಾಗಿ ಆಟೋ ರಿಕ್ಷಾಗಿಂತಲೂ ಹೊಸ ಡಿಜೈರ್ ಕಾರಿನ ಬಾಡಿ ಸಾಮರ್ಥ್ಯಕ್ಕಿಂತ ಕಡಿಮೆಯೇ? ಎನ್ನುವ ಪ್ರಶ್ನೆಗಳು ಸೆಡಾನ್ ಕಾರು ಪ್ರಿಯರನ್ನು ಕಾಡುತ್ತಿದೆ. ಆದರೂ, ವಾಸ್ತವವಾಗಿ ನೋಡುವುದಾರರೇ ಮುಖಾಮುಖಿ ಡಿಕ್ಕಿ ಹೊಡೆದ ಕಾರು ಆಟೋ ರಿಕ್ಷಾಗಿಂತ ಹೆಚ್ಚಿನ ಹಾನಿಗೆ ಒಳಗಾಗಿದೆ ಎನ್ನಬಹುದು.

ಆಟೋ ರಿಕ್ಷಾ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹೆಡ್‌ಲೈಟ್ ಅಸೆಂಬ್ಲಿ, ಕಾರಿನ ಬಂಪರ್ ಮತ್ತು ಮುಂಭಾಗ ಚಕ್ರಕ್ಕೆ ಹಾನಿಯಾಗಿದ್ದು, ವಿತರಣೆಗಾಗಿ ತರಲಾಗಿದ್ದ ಕಾರುನ್ನು ನೇರವಾಗಿ ಗ್ಯಾರೇಜ್ ನತ್ತ ತೆಗೆದುಕೊಂಡು ಹೋಗಲಾಗಿದೆ.

ಸಮಾಧಾನಕರ ಸಂಗತಿ ಅಂದ್ರೆ, ವಿತರಣೆಗಾಗಿ ತರಲಾಗುತ್ತಿದ್ದ ಕಾರು ಅಪಘಾತವಾದ ಹಿನ್ನೆಲೆ ಗ್ರಾಹಕನ ಬಳಿ ಕ್ಷಮೆ ಕೇಳಿರುವ ಕಾರ್ ಡೀಲರ್ಸ್, ಕೆಲ ಗಂಟೆಗಳ ನಂತರ ಹೊಸದೊಂದು ಕಾರು ಮಾದರಿಯನ್ನು ವಿತರಣೆ ಮಾಡಿದ್ದಾರೆ.

ಹೀಗಾಗಿ ಮಾರುತಿ ಸುಜುಕಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗ್ರಾಹಕ ಆಶಿಸ್ ಮೆನನ್, ತುರ್ತು ಸಂದರ್ಭದಲ್ಲೂ ಗ್ರಾಹಕರ ಬೇಡಿಕೆಗೆ ಸ್ವಂದಿಸಿದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ..!!
ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಜೆಪಿ ಮುಖಂಡನ ಹೊಸ ಫೋರ್ಡ್ ಎಂಡೀವರ್...

ಒಟ್ಟಿನಲ್ಲಿ ನಡೆದ ಘಟನೆ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ ಮಾರುತಿ ಸುಜುಕಿ ಕಾರು ವಿತಕರರು ಗ್ರಾಹಕನಿಗೆ ಮೋಸ ಮಾಡದೆ ಹೊಸ ಕಾರು ವಿತರಣೆ ಮಾಡಿದ್ದು, ಇದೇ ಸಂದರ್ಭದಲ್ಲಿ ಬೇರೆ ಕಾರು ಡೀಲರ್ಸ್ ಇದ್ದಿದ್ದರೇ ದೋಷಪೂರಿತ ಕಾರನ್ನೇ ರೀಪೆರಿ ಮಾಡಿ ವಿತರಣೆ ಮಾಡುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಮೊನ್ನೆಯಷ್ಟೇ ನಡೆದಿದ್ದ ರೆನಾಲ್ಟ್ ಡಸ್ಟರ್ ಕಾರಿನ ಸುದ್ದಿಯೇ ಸ್ಪಷ್ಟ ಉದಾಹರಣೆ.


Click it and Unblock the Notifications








