ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ..!!

ಸಮಸ್ಯೆಗೆ ಪರಿಹಾರ ತಿಳಿಸಬೇಕಿದ್ದ ಕಾರು ಡೀಲರ್ ಮಾತ್ರ ಗ್ರಾಹಕನ ಬೇಡಿಕೆ ಸ್ಪಂದಿಸದೇ ಅಸಡ್ಡೆ ತೋರಿದ್ದ. ಕೊನೆಗೆ ಕಾನೂನು ಹೋರಾಟದಲ್ಲಿ ತಪ್ಪೊಪ್ಪಿಕೊಂಡ ಕಾರ್ ಡೀಲರ್ ಇದೀಗ ಬರೋಬ್ಬರಿ 9.23 ಲಕ್ಷ ದಂಡ ಹಾಕಿಸಿಕೊಂಡಿದ್ದಾನೆ.

By Praveen Sannamani

ಆ ಗ್ರಾಹಕನು ಇಷ್ಟ ಪಟ್ಟು ತನ್ನ ನೆಚ್ಚಿನ ರೆನಾಲ್ಟ್ ಡಸ್ಟರ್ ಎಸ್‌ಯುವಿ ಕಾರು ಖರೀದಿಸಿದ್ದ. ಆದ್ರೆ ಕಾರು ಖರೀದಿ ಮಾಡಿದ್ದ ಕೆಲವೇ ದಿನಗಳಲ್ಲಿ ಕಾರಿನ ಅಸಲಿಯತ್ತು ಗೊತ್ತಾಗಿ ಹೋಗಿತ್ತು. ಇನ್ನು ಸಮಸ್ಯೆಗೆ ಪರಿಹಾರ ತಿಳಿಸಬೇಕಿದ್ದ ಕಾರು ಡೀಲರ್ ಮಾತ್ರ ಗ್ರಾಹಕನ ಬೇಡಿಕೆ ಸ್ಪಂದಿಸದೇ ಅಸಡ್ಡೆ ತೋರಿದ್ದ. ಕೊನೆಗೆ ಕಾನೂನು ಹೋರಾಟದಲ್ಲಿ ತಪ್ಪೊಪ್ಪಿಕೊಂಡ ಕಾರ್ ಡೀಲರ್ ಇದೀಗ ಬರೋಬ್ಬರಿ 9.23 ಲಕ್ಷ ದಂಡ ಹಾಕಿಸಿಕೊಂಡಿದ್ದಾನೆ.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಅಂದಹಾಗೆ, ಈ ಘಟನೆ ನಡೆದಿರುವುದು ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ. ರೆನಾಲ್ಟ್ ಅಧಿಕೃತ ಮಾರಾಟಗಾರರಾದ ಟಿವಿಎಸ್ ಸುಂದರಾಮ್ ಅಯ್ಯರ್ ಆ್ಯಂಡ್ ಸನ್ಸ್ ಲಿಮಿಟೆಡ್ ಕಾರು ಮಾರಾಟ ಮಳಿಗೆಯಲ್ಲಿ ಗ್ರಾಹಕರಾದ ಇಸ್ಮಾಯಿಲ್ ಸುನಾಲ್ ಎನ್ನುವವರು ಡಸ್ಟರ್ ಎಸ್‌ಯುವಿಯನ್ನು ಖರೀದಿಸಿದ್ದರು. ಆದ್ರೆ ಕಾರು ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಕಾರಿನಲ್ಲಿರುವ ಸಮಸ್ಯೆಗಳು ಗ್ರಾಹಕ ಇಸ್ಮಾಯಿಲ್ ಅವರನ್ನು ಚಿಂತೆಗೀಡಾಗುವಂತೆ ಮಾಡಿತ್ತು.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಯಾಕೆಂದ್ರೆ, ಫೆಬ್ರುವರಿ 2014ರಲ್ಲಿ ಒಟ್ಟು ರೂ.10.58 ಲಕ್ಷ ಕೊಟ್ಟು ರೆನಾಲ್ಟ್ ಡಸ್ಟರ್ ಖರೀದಿಸಿದ್ದ ಇಸ್ಮಾಯಿಲ್ ಸುನಾಲ್‌ಗೆ ಹೊಸ ಕಾರಿನಲ್ಲಿದ್ದ ಎಂಜಿನ್‌ ಸಮಸ್ಯೆಯು ಗೊತ್ತೆ ಆಗಿರಲಿಲ್ಲ. ಹೀಗಿದ್ದರೂ 19 ಸಾವಿರ ಕಿ.ಮಿ ಕಾರು ಓಡಿಸಿದ್ದ ಗ್ರಾಹಕ ಇಸ್ಮಾಯಿಲ್‌ಗೆ ಒಂದು ದಿನ ಶಾಕ್ ಕಾದಿತ್ತು.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಎಂದಿನಂತೆ ಒಂದು ದಿನ ಕಾರು ಚಾಲನೆ ಮಾಡುತ್ತಿರುವಾಗ ಕಾರಿನ ಬ್ಯಾನೆಟ್‌ನಲ್ಲಿ ಯಾವುದೋ ಒಂದು ರೀತಿಯ ಕರ್ಕಶ ಶಬ್ದ ಕೇಳಿಬಂದಿದೆ. ಇದರಿಂದ ಗಾಬರಿಗೊಂಡಿದ್ದ ಇಸ್ಮಾಯಿಲ್ ಸುನಾಲ್ ಅವರು ಬ್ಯಾನೆಟ್ ತೆರೆದು ನೋಡಿದಾಗ ಕಾರಿನ ರೇಡಿಯೆಟರ್ ಅಸೆಂಬ್ಲಿ ಸಂಪೂರ್ಣ ಬೇರೆ ಬೇರೆಗೊಂಡಿತ್ತು.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಸರಿ, ಕಾರಿನ ವಾರೆಂಟಿ ಇದೆ ಅಲ್ಲಾ ಅಂತಾ ಡೀಲರ್ ಬಳಿ ಬಂದ್ರೆ ಸಮಸ್ಯೆ ಪರಿಹಾರ ತಿಳಿಸಬೇಕಿದ್ದ ಡೀಲರ್ ಮಾತ್ರ ಇದು ನಮಗೆ ಸಂಬಂಧವೇ ಇಲ್ಲಾ ಎನ್ನುವ ರೀತಿ ಉತ್ತರ ಕೊಟ್ಟಿದ್ದಾರೆ. ಜೊತೆಗೆ ಕಾರು ಮಾಲೀಕರನೇ ಉದ್ದೇಶಪೂರ್ವಕವಾಗಿಯೇ ಈ ಸಮಸ್ಯೆ ಸೃಷ್ಠಿಸಿದ್ದಾರೆ ಅಂತಾ ಆರೋಪಿದ್ದರು.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಕೊನೆಗೂ ಕಾರು ಮಾಲೀಕನ ಬೇಡಿಕೆಗೆ ಮಣಿದು ಬೇಕಾಬಿಟ್ಟಿ ಸರ್ವಿಸ್ ಮಾಡಿದ್ದ ರೆನಾಲ್ಟ್ ಡೀಲರ್ಸ್, ಡಸ್ಟರ್ ಕಾರಿನ ರೇಡಿಯೆಟರ್ ಅಸೆಂಬ್ಲಿಯನ್ನು ಬದಲಾವಣೆ ಮಾಡಿಕೊಂಡಿದ್ದರಂತೆ. ಆದ್ರೆ ಸಮಸ್ಯೆಗೆ ಇಲ್ಲಿಗೆ ಬಗೆಹರಿಯಿಲ್ಲ.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಸರ್ವಿಸ್ ಮಾಡಿದ ನಂತರ ಕೆಲ ತಿಂಗಳು ಬಿಟ್ಟು ಡಸ್ಟರ್ ಕಾರಿನಲ್ಲಿ ಮತ್ತದೇ ಸಮಸ್ಯೆ ಉಲ್ಬಣಗೊಂಡಿತ್ತು. ಇದರಿಂದಾಗಿ ರೋಸಿ ಹೋಗಿದ್ದ ಗ್ರಾಹಕ ಇಸ್ಮಾಯಿಲ್ ಸುನಾಲ್ ಕಾರಿನಲ್ಲಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಡೀಲರ್ ಬಳಿ ವಾಗ್ವಾದ ಮಾಡಿದ್ದ.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಇಷ್ಟೆಲ್ಲಾ ಆದ್ರೂ ಗ್ರಾಹಕರನ ಮನವಿಗೆ ಸ್ಪಂದಿಸದ ರೆನಾಲ್ಟ್ ಅಧಿಕೃತ ಡೀಲರ್ ಕಾರಿನಲ್ಲಿ ಕಂಡುಬಂದಿರುವ ಸಮಸ್ಯೆಗೂ ನಮಗೂ ಯಾವುದೇ ಸಂಬಂಧವೇ ಎನ್ನುವಂತೆ ವರ್ತಿಸಿದ್ದಾರೆ. ಇದರಿಂದ ಕಾನೂನು ಹೋರಾಟಕ್ಕೆ ಮುಂದಾದ ಇಸ್ಮಾಯಿಲ್ ಸುನಾಲ್ ಅವರು ತಮಗಾದ ಅನ್ಯಾಯಕ್ಕೆ ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯದ ಮೋರೆ ಹೋಗಿದ್ದರು.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ವೃತ್ತಿಯಲ್ಲಿ ಸ್ವತಃ ವಕೀಲರಾಗಿರುವ ಇಸ್ಮಾಯಿಲ್ ಸುನಾಲ್ ತಮಗಾದ ಅನ್ಯಾಯದ ಕುರಿತು ನ್ಯಾಯಾಲದ ಮುಂದೆ ಸಾಕ್ಷಿ ಸಮೇತ ಅಳಲು ತೊಡಿ ಕೊಂಡಿದ್ದರು. ಇದಾದ ಬಳಿಕ ಸತತ ಮೂರು ವರ್ಷ ಕಾಲ ನಡೆದ ಕಾನೂನು ಹೋರಾಟದಲ್ಲಿ ಇದೀಗ ಇಸ್ಮಾಯಿಲ್ ಸುನಾಲ್ ಪರ ಗ್ರಾಹಕ ನ್ಯಾಯಾಲಯ ತೀರ್ಪು ಕೊಟ್ಟಿದೆ.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ದೋಷಪೂರಿತ ಕಾರು ಮಾದರಿಯನ್ನು ಮಾರಾಟ ಮಾಡಿದ್ದ ಟಿವಿಎಸ್ ಸುಂದರಾಮ್ ಅಯ್ಯರ್ ಆ್ಯಂಡ್ ಸನ್ಸ್ ಲಿಮಿಡೆಡ್‌ಗೆ ಛೀಮಾರಿ ಹಾಕಿರುವ ನ್ಯಾಯಾಲಯವು, ಗ್ರಾಹಕನ ಸಮಸ್ಯೆಗೆ ಸರಿಯಾಗಿ ಸ್ಪಂದಿಸದೇ ಕಾಲಹರಣ ಮಾಡಿದ್ದಕ್ಕೆ ಪ್ರತಿಯಾಗಿ ರೂ.9.23 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ

ಇನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 7.95ಲಕ್ಷದಿಂದ ರೂ.11.12ಲಕ್ಷ ಬೆಲೆ ಹೊಂದಿರುವ ರೆನಾಲ್ಟ್ ಡಸ್ಟರ್ ಕಾರುಗಳು 1.5-ಲೀಟರ್ ಮತ್ತು 1.5-ಲೀಟರ್ ಡೀಸೆಲ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಎಸ್‌ಯುವಿ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ದುಬಾರಿ ಬೆಲೆಯ ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಖರೀದಿಸಿದ ವಿರಾಟ್ ಕೊಹ್ಲಿ..

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

Most Read Articles

Kannada
Read more on renault duster
English summary
Renault Dealership To Pay Rs 9.23 Lakh As Compensation For Selling Faulty Renault Duster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X