ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ಈ ಸ್ಟೋರಿ ಮಾರುತಿ ಕಾರು ಮಾಲೀಕರಿಗೆ ಖಂಡಿತ ಲೈಟ್ ಆಗಿ ಹಾರ್ಟ್ ಅಟ್ಯಾಕ್ ಉಂಟು ಮಾಡಲಿದೆ. ಹೌದು, ಬೆಂಗಳೂರಿನ ಪ್ರಸಿದ್ಧ ಮಾರುತಿ ಅಧಿಕೃತ ಸರ್ವಿಸ್ ಕೇಂದ್ರದ ಕರ್ಮ ಕಾಂಡದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಈ ಸ್ಟೋರಿ ಮಾರುತಿ ಕಾರು ಮಾಲೀಕರಿಗೆ ಖಂಡಿತ ಲೈಟ್ ಆಗಿ ಹಾರ್ಟ್ ಅಟ್ಯಾಕ್ ಉಂಟು ಮಾಡಲಿದೆ. ಹೌದು, ಬೆಂಗಳೂರಿನ ಪ್ರಸಿದ್ಧ ಮಾರುತಿ ಅಧಿಕೃತ ಸರ್ವಿಸ್ ಕೇಂದ್ರದ ಕರ್ಮ ಕಾಂಡದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಒಂದೊಂದು ರೂಪಾಯಿ ಕೂಡಿಟ್ಟು ನಮ್ಮ ಕನಸಿನ ಕಾರನ್ನು ಕೊಂಡು, ಖುಷಿ ಪಡುತ್ತೇವೆ. ಕೆಲವರಂತೂ ತಾವು ಕೊಂಡ ಕಾರನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಾವು ಮುಖ ತೊಳೆಯುತ್ತಾರೋ ಇಲ್ಲವೋ, ಆದ್ರೆ ತಮ್ಮ ಕಾರನ್ನು ದಿನ ಬೆಳಗ್ಗೆ ಎದ್ದು ಸ್ವಚ್ಛಗೊಳಿಸುವುದು ನಿತ್ಯ ಕಾಯಕವಾಗಿರುತ್ತದೆ.

ಇಷ್ಟೆಲ್ಲಾ ಮಾಡುವವರು ತಮ್ಮ ಕಾರನ್ನು ಸರ್ವಿಸ್ ಮಾಡಿಸದೇ ಇರುತ್ತಾರೆಯೇ ? ಖಂಡಿತ ಮಾಡಿಸುತ್ತಾರೆ. 'ಅಧಿಕೃತ ಸರ್ವಿಸ್ ಸ್ಟೇಷನ್ ಹೊರತುಪಡಿಸಿ, ಹೊರಗಡೆ ಸರ್ವಿಸ್ ಮಾಡಿಸಿದರೆ ಮೋಸ ಮಾಡ್ತಾರೆ' ಎಂಬ ನಂಬಿಕೆ ಮೇಲೆ ಪ್ರತಿಯೊಬ್ಬರೂ ಸಹ ತಮ್ಮ ಕಾರುಗಳನ್ನು ಅಧಿಕೃತ ಸರ್ವಿಸ್ ಕೇಂದ್ರದಲ್ಲಿ ಸರ್ವಿಸ್ ಮಾಡಿಸುತ್ತಾರೆ.

ಆದ್ರೆ ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸುಜುಕಿ ಸಂಸ್ಥೆಯ ಅಧಿಕೃತ ಸರ್ವಿಸ್ ಕೇಂದ್ರದ ಮೋಸ ಈಗ ಭಾರತದಾದ್ಯಂತ ಸದ್ದು ಮಾಡುತ್ತಿದ್ದು, ಕಾರಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸರ್ವಿಸ್ ಸ್ಟೇಷನ್ ಮಾಡುತ್ತಿರುವ ಮೋಸದ ಪ್ರತಿಯೊಂದು ಮಾಹಿತಿಯನ್ನು ಸಹ ದಾಖಲಿಸಿದೆ.

ಘಟನೆಯ ವಿವರ :
ಈ ವಾರದ ಆರಂಭದಲ್ಲಿ, ರೋಗ್ ಎ.ಕೆ ಎಂಬ ಹೆಸರಿನ ಗ್ರಾಹಕರೊಬ್ಬರು ತಮ್ಮ ಮಾರುತಿ ಬಾಲೆನೊ ಆರ್‌ಎಸ್ ಕಾರನ್ನು ಬೆಂಗಳೂರಿನ ಮಾಂಡೊವಿ ಮೋಟಾರ್ಸ್‌ನಲ್ಲಿ 2ನೇ ಫ್ರೀ ಸರ್ವಿಸ್‌ಗೆ ಬಿಟ್ಟಿದ್ದರು.

ಕಾರನ್ನು ಸರ್ವಿಸ್‌ಗೆ ನೀಡುವಾಗ, "ಕಾರಿನಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ, ಆದ್ರೆ ಕಾರನ್ನು ಸ್ಟಾರ್ಟ್ ಮಾಡುವಾಗ ಪೆಟ್ರೋಲ್ ವಾಸನೆ ಬರುತ್ತಿದೆ" ಎಂಬ ಮಾಹಿತಿಯನ್ನು ನೀಡಿ ಸರ್ವಿಸ್ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಒಮ್ಮೆ ಪರಿಶೀಲಿಸಿ ಎಂದು ಕೇಳಿಕೊಂಡಿದ್ದರು.

ನಿರೀಕ್ಷೆಯಂತೆ, ಕಾರಿನ ಸರ್ವಿಸ್ ನಂತರ ಸರ್ವಿಸ್ ಕೇಂದ್ರವು ರೋಗ್ ಎ.ಕೆ ಅವರು ನೀಡಿದ್ದ ನಿರ್ದಿಷ್ಟ ವಿಳಾಸಕ್ಕೆ ಕಾರನ್ನು ಹಿಂತಿರುಗಿಸಿತ್ತು. ಕಾರನ್ನು ಡೆಲಿವರಿ ತೆಗೆದುಕೊಂಡ ನಂತರ ರೋಗ್ ಎ.ಕೆ, ತಾವು ಈ ಮೊದಲೇ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಸರ್ವಿಸ್ ಸ್ಟೇಷನ್ ಕರ್ಮ ಕಾಂಡದ ಇಂಚಿಂಚು ಮಾಹಿತಿ ದಾಖಲಾಗಿದೆ.

ರೆಕಾರ್ಡ್ ಆಗಿರುವಂತಹ ವಿಡಿಯೋ ತುಣುಕುಗಳನ್ನು ಪರಿಶೀಲಿಸಿದಾಗ ರೋಗ್ ಎ.ಕೆ ಅವರು ಆಘಾತಕ್ಕೊಳಗಾಗಿದ್ದು, ಮಾರುತಿ ಅಧಿಕೃತ ಸರ್ವಿಸ್ ಸ್ಟೇಷನ್ ಮಂದಿ ಕಾರನ್ನು ತೆಳೆದಿದ್ದು ಬಿಟ್ಟರೆ ಬೇರೆ ಯಾವುದೇ ರೀತಿಯ ಸರ್ವಿಸ್ ಮಾಡೇ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಈ ಸ್ಪೋಟಕ ಮಾಹಿತಿ ಇರುವಂತಹ ವಿಡಿಯೋ ತುಣುಕುಗಳನ್ನು ರೋಗ್ ಎ.ಕೆ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಾರು ಸರ್ವಿಸ್ ಸ್ಟೇಷನ್ ಒಳಗೆ ಸಹ ಹೋಗದೆ ಇರುವುದು ಮತ್ತು ಕಾರಿನ ತೈಲ ಮಟ್ಟವನ್ನು ತಿಳಿದುಕೊಳ್ಳಲು ಡಿಪ್ ಸ್ಟಿಕ್ ಸಹ ಪರಿಶೀಲಿಸದೆ ಇರುವುದು, ಮಾರುತಿ ಕೇಂದ್ರದ ಮತ್ತೊಂದು ಮೋಸದ ಮುಖವಾಡವನ್ನು ಬಯಲು ಮಾಡಿದೆ ಎನ್ನಬಹುದು.

ಈ ವಿಡಿಯೋದಲ್ಲಿ ನೆಡೆದ ಪ್ರತಿಯೊಂದು ಘಟನೆಯು ಸಹ ಸ್ವೀಕಾರಾರ್ಹವಲ್ಲ ಎನ್ನಬಹುದು. ಇದು ಮೋಸ ಕೇವಲ ಮಾರುತಿ ಸಂಸ್ಥೆಯೊಂದೇ ಮಾಡುತ್ತಿಲ್ಲ ಎಂಬ ವಿಚಾರ ಹೊಸದೇನಲ್ಲ. ಕಾರು ಮಾಲೀಕರು ತಮ್ಮ ಕಾರುಗಳನ್ನು ಹೆಚ್ಚಿನ ನಂಬಿಕೆಯೊಂದಿಗೆ ಅಧಿಕೃತ ಸರ್ವಿಸ್ ಸ್ಟೇಷನ್‌ಗಳಿಗೆ ಬಿಡುತ್ತಾರೆ. ಆದ್ರೆ, ಈ ರೀತಿ ಮೋಸ ಮಾಡಿ ಸಂಪಾದನೆ ಮಾಡುವ ಮಂದಿಗೆ ಏನೆನ್ನಬೇಕು ನೀವೇ ಹೇಳಿ...

ಎಷ್ಟೋ ಜನರು ಸರ್ವಿಸ್ ಮಾಡಿಸಿದ ನಂತರ ಕಾರನ್ನು ಪ್ರವಾಸಕ್ಕೆಂದು ಕಾರನ್ನು ಬಳಸುತ್ತಾರೆ. ಈ ರೀತಿಯ ಬೇಜವಾಬ್ದಾರಿ ಕೆಲಸದಿಂದ ಕಾರು ಕೆಟ್ಟು ನಿಂತರೆ, ಅತ್ವ ಅಪಘಾತ ಸಂಭವಿಸಿದರೆ, ಆ ಪ್ರಾಣಹಾನಿಗೆ ಯಾರು ಜವಾಬ್ದಾರರು ಎಂಬುದನ್ನು ಈ ಸರ್ವಿಸ್ ಸ್ಟೇಷನ್ ಮಾಲೀಕರು ಯೋಚನೆ ಮಾಡಿದ್ದಾರೆಯೇ? ಖಂಡಿತ ಇಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
Trending On DriveSpark Kannada:
ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು
ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್..!!


Click it and Unblock the Notifications








