ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್..!!

ಅಬ್ದುಲ್ ಅಜೀಜ್ ಅವರು ಮಾಸ್ಕೋ ಭೇಟಿ ವೇಳೆ ತಮ್ಮ ಖಾಸಗಿ ವಿಮಾನದಿಂದ ಹೊರಬರುತ್ತಿದ್ದಾಗ ಚಿನ್ನದ ಎಸ್ಕಲೇಟರ್ ಸ್ಥಗಿತಗೊಂಡಿದ್ದು, ಈ ವೇಳೆ ಸೌದಿ ರಾಜ ತಬ್ಬಿಬ್ಬಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ಸೌದಿ ಅರೇಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಮಾಸ್ಕೋ ಭೇಟಿ ವೇಳೆ ತಮ್ಮ ಖಾಸಗಿ ವಿಮಾನದಿಂದ ಹೊರಬರುತ್ತಿದ್ದಾಗ ಚಿನ್ನದ ಎಸ್ಕಲೇಟರ್ ಸ್ಥಗಿತಗೊಂಡಿದ್ದು, ಈ ವೇಳೆ ಸೌದಿ ರಾಜ ತಬ್ಬಿಬ್ಬಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ವಿಡಿಯೋ ವೈರಲ್..!

ಹೊಳೆಯೋದೆಲ್ಲಾ ಚಿನ್ನ ಅಲ್ಲ ಎಂಬ ಗಾದೆ ಮಾತಿದೆ. ಆದ್ರೆ ಇಲ್ಲಿ ಹೊಳೆಯುತ್ತಿದ್ದದ್ದು ಚಿನ್ನವೇ ಆದ್ರೂ ಅದು ಸರಿಯಾಗಿ ಕೆಲಸ ಮಾಡ್ತಾ ಇರಲಿಲ್ಲ ಅಷ್ಟೇ. ಹೌದು ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಕಳೆದ ವಾರ ಮಾಸ್ಕೋ ಭೇಟಿಗೆಂದು ಬಂದಿದ್ರು. ಈ ವೇಳೆ ಅವರು ತಮ್ಮ ಖಾಸಗಿ ಪ್ಲೇನ್‍ನಿಂದ ಹೊರಬರುತ್ತಿರುವಾಗ ತೊಂದರೆ ಸಿಲುಕಿದ್ದರು.

ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ವಿಡಿಯೋ ವೈರಲ್..!

ಅಲ್ಲದೇ ದುಬಾರಿ ಪ್ರಯಾಣ ಮಾಡೋದ್ರಲ್ಲಿ ಫೇಮಸ್ ಆಗಿರೋ ರಾಜ ಪ್ಲೇನ್‍ನಿಂದ ಹೊರಬಂದು ಮಿರಮಿರ ಮಿಂಚುತ್ತಿದ್ದ ಚಿನ್ನದ ಎಸ್ಕಲೇಟರ್ ಮೇಲೆ ನಿಂತ್ರು. ಆದ್ರೆ ಅದ್ಯಾಕೋ ಎಸ್ಕಲೇಟರ್ ಅರ್ಧಕ್ಕೇ ನಿಂತುಹೋಯ್ತು.

ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ವಿಡಿಯೋ ವೈರಲ್..!

ಇದರಿಂದ ಸ್ವಲ್ಪ ಸಮಯ ರಾಜ ಹಾಗೂ ಅವರ ಜೊತೆಯಿದ್ದ ಸಿಬ್ಬಂದಿ ಕನ್‍ಫ್ಯೂಸ್ ಆಗಿ ನಿಂತಲ್ಲೇ ನಿಂತಿದ್ರು. ತದನಂತರ ಅನಿವಾರ್ಯವಾಗಿ ರಾಜ ಕಾಲ್ನಡಿಗೆಯಲ್ಲೇ ಉಳಿದ ಮೆಟ್ಟಿಲುಗಳನ್ನ ಇಳಿದು ಬಂದ್ರು.

ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ವಿಡಿಯೋ ವೈರಲ್..!

81 ವರ್ಷದ ಸಲ್ಮಾನ್ ಅವರು ಕೆಳಗಿಳಿಯುತ್ತಿದ್ರೆ ಅವರ ಸಹಾಯಕರು ಗೊಂದಲದಲ್ಲೇ ಹಿಂಬಾಲಿಸಿದ್ರು. ಇದರ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಹಾಸ್ಯಾಸ್ಪದ ಕಮೆಂಟ್‍ಗಳಿಗೆ ಎಡೆಮಾಡಿದೆ.

ಸೌದಿ ರಾಜ ತಮ್ಮ ಚಿನ್ನದ ಎಸ್ಕಲೇಟರ್‌ನಲ್ಲಿ ಹೊರಬರುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ವಿಡಿಯೋ ವೈರಲ್..!

ಅಂದಹಾಗೆ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಸದ್ಯ 4 ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿದ್ದಾರೆ. ಇದಕ್ಕಾಗಿಯೇ ವಿಶೇಷ ಎಸ್ಕಲೇಟರ್ ಮಾತ್ರವಲ್ಲದೆ ತನ್ನ ಜೊತೆಗೆ 1500 ಜನರನ್ನ ಕರೆತಂದಿದ್ದಾರೆ. ಜೊತೆಗೆ ಕಾರ್ಪೆಟ್ ಸೇರಿದಂತೆ

ಸ್ವಂತ ಪೀಠೋಪಕರಣ ಹಾಗೂ 800 ಕೆಜಿ ಆಹಾರ ಸಾಮಗ್ರಿಗಳನ್ನ ಸೌದಿಯಿಂದಲೇ ಹೊತ್ತು ತಂದಿರುವುದು ಕೂಡಾ ಭಾರೀ ಚರ್ಚೆಗೆ ಕಾರಣವಾಗಿದೆ.

Most Read Articles

Kannada
English summary
Read in Kannada: When King Salman landed in Russia, it marked the first official visit to the country by a Saudi monarch.However, the trip didn't get off to the smoothest start, when the escalator set up to help him disembark the plane got stuck.
Story first published: Tuesday, October 10, 2017, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X