ವಿಮಾನ ಪ್ರಯಾಣಿಕರೇ ಎಚ್ಚರ... ಹಿಂಬದಿ ಸೀಟ್‌ಗಳ ಬಗ್ಗೆ ರಹಸ್ಯ ಬಿಚ್ಚಿಟ್ಟ ಪೈಲಟ್
ನೀವು ವಿಮಾನ ಪ್ರಯಾಣವನ್ನು ಯೋಜಿಸುವ ಮುನ್ನ ಹಿಂಭಾಗದ ಸೀಟುಗಳನ್ನು ಬುಕ್ ಮಾಡಬೇಡಿ ಎಂದು ಪೈಲಟ್ ಒಬ್ಬರು ಸಲಹೆ ನೀಡಿದ್ದು, ಇದಕ್ಕೆ ಕಾರಣ ಕೂಡ ಬಹಿರಂಗಪಡಿಸಿದ್ದಾರೆ. ಕೆಲವೊಮ್ಮೆ ಬಾತ್‌ರೂಂಗಳನ್ನು ಆ ಜಾಗದಲ್ಲಿ ಇರಿಸಲಾಗುತ್ತದೆ ಎಂದು ನಿಮಗನಿಸಬಹುದು ಆದ್ರೆ ಇದ್ಯಾವುದೂ ಅಲ್ಲ ಇದಕ್ಕೆ ಬೇರಯೇ ಕಾರಣವಿದೆ ಎಂದಿದ್ದಾರೆ.
ವಿಮಾನದಲ್ಲಿ ಹಿಂಬದಿ ಸೀಟುಗಳನ್ನು ಕಾಯ್ದಿರಿಸುವುದರ ಕುರಿತು ಪೈಲಟ್ ತಿಳಿಸಿರುವ ಮಾಹಿತಿಯು ಕುತೂಹಲ ಕೆರಳಿಸಿದೆ. ವಿಮಾನಯಾನ ಸಂಸ್ಥೆಯೊಂದರ ಪೈಲಟ್ ಆದ ಪ್ಯಾಟ್ರಿಕ್ ಸ್ಮಿತ್, ವಿಮಾನಗಳಲ್ಲಿನ ಕೆಲವು ಆಂತರಿಕ ರಹಸ್ಯಗಳನ್ನು ಹಾಗೂ ಉತ್ತಮ ಸೀಟುಗಳನ್ನು ಭದ್ರಪಡಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ನೀಡಿದ್ದಾರೆ. ನಿಜಕ್ಕೆ ವಿಮಾನ ಸಿಬ್ಬಂದಿ ಕೂಡ ಸಾಧ್ಯವಾದಷ್ಟು ಮುಂಭಾಗದ ಸೀಟುಗಳನ್ನು ಆಯ್ಕೆ ಮಾಡಲು ಹೇಳುತ್ತಾರೆ.

ವಾಸ್ತವದಲ್ಲಿ, ಏರ್‌ಲೈನ್ ಉದ್ಯೋಗಿಗಳು ವಿಮಾನ ಮುಂಭಾಗ ಅಥವಾ ಕ್ಯಾಬಿನ್ ಬಳಿ ಆಸನಗಳನ್ನು ಖರೀದಿಸಲು ಪ್ರೋತ್ಸಾಹಿಸುವುದು ಏಕೆ ಗೊತ್ತಾ? ವಿಮಾನದ ಕೊನೆಯಲ್ಲಿ ಪ್ರಕ್ಷುಬ್ಧತೆಯನ್ನು (turbulence) ಸಾಮಾನ್ಯವಾಗಿ ಗಮನಿಸಬಹುದು. ಹಾಗಾಗಿ ಅತ್ಯಂತ ಆರಾಮದಾಯಕವಾದ ಆಸನಗಳ ವಿಷಯಕ್ಕೆ ಬಂದಾಗ ಮುಂಭಾಗದಲ್ಲಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಅವರು ಹೇಳಿದ್ದಾರೆ.
"ವಿಮಾನದಲ್ಲಿ ಒಂದೆರಡು ಘಂಟೆಗಳ ಪ್ರಯಾಣವಾದ್ರೆ ಯಾವುದೆ ಸೀಟುಗಳಾದ್ರೂ ಚಿಂತೆಯಿಲ್ಲ. ಆದ್ರೆ ದೀರ್ಘಾವಧಿಯ ಪ್ರಯಾಣವಿದ್ದಲ್ಲಿ ನಿಮ್ಮ ಆಸನದ ಆಯ್ಕೆ ಕೂಡ ಇಲ್ಲಿ ಮುಖ್ಯವಾಗುತ್ತದೆ. "ಅಗ್ಗದ ದರವನ್ನು ಆಯ್ಕೆ ಮಾಡುವ ಮೂಲಕ ಹಣವನ್ನು ಉಳಿಸುವುದು ನಿಮ್ಮ ಮುಖ್ಯ ಗುರಿಯಾಗಿದ್ದರೆ, ಕಡೆ ಪಕ್ಷ ನೀವು ಮಧ್ಯಮ ಸೀಟನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ಧೀರ್ಘಾವಧಿಯ ಹಾರಾಟವಿದ್ದಾಗ ಹೆಚ್ಚು ಹಣ ಖರ್ಚಾದರೂ ಚಿಂತಿಸದೇ ಆದಷ್ಟು ಮುಂಭಾಗದಲ್ಲೇ ಆಸನವನ್ನು ಆಯ್ಕೆ ಮಾಡಲು ಸಲಹೆ ನೀಡಿದ್ದಾರೆ. ಮಾಡಲ್ ಮತ್ತು ಮಾರುಕಟ್ಟೆಯ ಆಧಾರದ ಮೇಲೆ ವಿಮಾನಗಳನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗುತ್ತದೆ ಎಂದ ಅವರು, ಡೊಮೆಸ್ಟಿಕ್ (ದೇಶೀಯ) ವಿಮಾನದಲ್ಲಿನ ಸೀಟ್ 15B ಗಿಂತಲೂ ದೀರ್ಘ-ಪ್ರಯಾಣದ ವಿಮಾನದಲ್ಲಿನ ಸೀಟ್ 15B ಗಮನಾರ್ಹವಾಗಿ ಭಿನ್ನವಾಗಿರುತ್ತದೆ.
ಈ ಸೀಟ್‌ಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದರೆ SeatGuru.com ನಂತಹ ಸೈಟ್‌ಗಳಲ್ಲಿನ ಚಿತ್ರಗಳು ಮತ್ತು ವಿಮರ್ಶೆಗಳನ್ನು ನೋಡಿದ್ರೆ ನಿಮಗೊಂದು ಐಡಿಯಾ ಬರಬಹುದು ಎಂದು ಹೇಳಿದರು. ಒಟ್ಟಾರೆ ಟರ್ಬುಲೆನ್ಸ್‌ನಿಂದಾಗಿ ಹಿಂಬದಿಯ ಸಿಟುಗಳಿಗೆ ಒತ್ತಡ ಹಾಗೂ ಅರಾಮದಾಯಕವಲ್ಲದ ಅನುಭವವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.

ಫ್ಲೈಟ್ ಅಟೆಂಡೆಂಟ್ ರೋಸಿ ಅವದ್ ಎಂಬುವವರು ಕೂಡ ಪ್ರಯಾಣಿಕರಿಗೆ ವಿಮಾನದ ಮುಂಭಾಗದಲ್ಲಿ ಸಾಧ್ಯವಾದಷ್ಟು ಹತ್ತಿರ ಕೂರಲು ಸಲಹೆ ನೀಡಿದ್ದಾರೆ. ವಿಶೇಷವಾಗಿ ಶೌಚಾಲಯವನ್ನು ಹೆಚ್ಚಾಗಿ ಬಳಸುವವರು ಮುಂಭಾಗದ ಸೀಟುಗಳನ್ನು ಆಯ್ಕೆ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ಅಲ್ಲದೇ ಇದು ಇಳಿಯಲು ಹತ್ತಲು ಹತ್ತಿರದಲ್ಲಿರುವುದಲ್ಲದೇ ವಿಮಾನದಲ್ಲಿನ ಯಾವುದೇ ಸೇವೆ ಪಡೆಯಲು ತುಂಬಾ ಅನುಕೂಲವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








