ವಿಮಾನದಲ್ಲಿ ಸ್ನೇಹಿತೆಯ ಕೋರಿಕೆ ಪೂರೈಸಿ ಲೈಸೆನ್ಸ್ ಕಳೆದುಕೊಂಡ ಪೈಲಟ್

ಏರ್‌ ಇಂಡಿಯಾ ಪೈಲಟ್ ಒಬ್ಬರು ವಿಮಾನ ಹಾರಾಟದಲ್ಲಿದ್ದಾಗ ತನ್ನ ಸ್ನೇಹಿತೆಯ ಕೋರಿಕೆಯಂತೆ ಕಾಕ್‌ಪಿಟ್‌ಗೆ (ಪೈಲಟ್ ಕ್ಯಾಬಿನ್) ಕರೆಸಿಕೊಂಡು ಕೆಲಸ ಕಳೆದುಕೊಂಡಿದ್ದಾರೆ. ಇದು ಪ್ಯಾಸೆಂಜರ್ ವಿಮಾನವಾಗಿರುವ ಕಾರಣ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA), ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಪೈಲಟ್ ಪರವಾನಗಿಯನ್ನು ರದ್ದುಗೊಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಏರ್ ಇಂಡಿಯಾದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಚಂಡೀಗಢ- ಲೇಹ್ ಮಾರ್ಗದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನದ ಕಾಕ್‌ಪಿಟ್‌ಗೆ ಅನಧಿಕೃತ ವ್ಯಕ್ತಿಯನ್ನು ಅನುಮತಿಸಿದ್ದಕ್ಕಾಗಿ ಏರ್ ಇಂಡಿಯಾ ಪೈಲಟ್‌ನ ಪರವಾನಗಿಯನ್ನು ದೇಶದ ವಾಯುಯಾನ ನಿಯಂತ್ರಕ - ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA) ಅಮಾನತುಗೊಳಿಸಿದೆ.

air-india-pilot-license-cancelled-by-dgca

ಮಹಿಳೆ ವಿಮಾನದ ಸಂಪೂರ್ಣ ಅವಧಿಯವರೆಗೆ ಕಾಕ್‌ಪಿಟ್‌ನಲ್ಲಿಯೇ ಇದ್ದರು ಎಂದು ವರದಿಯಾಗಿದೆ. ಉಲ್ಲಂಘನೆಯನ್ನು ತಡೆಗಟ್ಟುವಲ್ಲಿ ಮತ್ತು ವರದಿ ಮಾಡದಿರುವಲ್ಲಿ ನಿಯಂತ್ರಕದಿಂದ ವಿಮಾನದ ಮೊದಲ ಅಧಿಕಾರಿಗೆ ದಂಡ ವಿಧಿಸಲಾಗಿದ್ದು, ಡಿಜಿಸಿಎ ತನ್ನ ತನಿಖೆಯ ನಂತರ ಮೊದಲ ಅಧಿಕಾರಿಯ ಪರವಾನಗಿಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದೆ.

ಇನ್ನು ಮಹಿಳಾ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಕರೆಸಿಕೊಂಡ ಪೈಲಟ್ ವಿಷಯಕ್ಕೆ ಬಂದರೆ, ಏರ್‌ಕ್ರಾಫ್ಟ್ ನಿಯಮಗಳು 1937 ರ ಅಡಿಯಲ್ಲಿ ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, DGCA ನಿಯಮಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪೈಲಟ್ ಇನ್ ಕಮಾಂಡ್‌ನ ಪರವಾನಗಿಯನ್ನು ಒಂದು ವರ್ಷದ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು DGCA ಹೇಳಿದೆ.

air-india-pilot-license-cancelled-by-dgca

DGCA ಪ್ರಕಾರ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಆಯಾ ವಿಮಾನಯಾನ ಸಂಸ್ಥೆಗಳು ಕ್ರಮಕ್ಕೆ ಮುಂದಾಗಬೇಕು, ಇಲ್ಲದಿದ್ದರೇ DGCA ನೇರವಾಗಿ ರಂಗಕ್ಕಿಳಿದು ಕಠಿಣ ನಿರ್ಣಯ ಅಥವಾ ಭಾರೀ ಮೊತ್ತವನ್ನು ದಂಡ ವಿಧಿಸುತ್ತದೆ. ಈ ಹಿಂದೆ ನಡೆದ ಘಟನೆಯೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಇದೇ ವರ್ಷದ ಫೆಬ್ರವರಿ 27 ರಂದು, ದೆಹಲಿ- ದುಬೈ ವಿಮಾನದ ಪೈಲಟ್ ಇನ್ ಕಮಾಂಡ್ ಒಬ್ಬ ಪ್ರಯಾಣಿಕನನ್ನು ವಿಮಾನ ಹಾರಾಟದಲ್ಲಿದ್ದಾಗ ಕಾಕ್‌ಪಿಟ್‌ಗೆ ಅನುಮತಿಸಿದರು. ಈ ಕುರಿತು ಏರ್‌ಲೈನ್‌ನ ಆಗಿನ ಉನ್ನತ ನಿರ್ವಹಣೆಗೆ ವರದಿ ಮಾಡಲಾಗಿತ್ತು. ಆದ್ರೂ ಕೂಡ ವಿಮಾನಯಾನ ಸಂಸ್ಥೆ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ಕ್ಯಾಬಿನ್ ಸಿಬ್ಬಂದಿಯೊಬ್ಬರು DGCA ಗೆ ಹೋದ ಬಳಿಕ ಘಟನೆ ಬೆಳಕಿಗೆ ಬಂದಿತ್ತು.

ತನಿಖೆಯ ನಂತರ, DGCA ಮೇ ತಿಂಗಳಲ್ಲಿ ಪೈಲಟ್ ಇನ್ ಕಮಾಂಡ್ ಅವರ ಪರವಾನಗಿಯನ್ನು ಮೂರು ತಿಂಗಳ ಕಾಲ ರದ್ದುಗೊಳಿಸಿ, ಸಮಸ್ಯೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾಗೆ ರೂ. 30 ಲಕ್ಷ ದಂಡ ವಿಧಿಸಲಾಯಿತು. ಇದರಿಂದ ಎಚ್ಚತ್ತು ಈ ಬಾರಿ ಏರ್‌ ಇಂಡಿಯಾ ಕೂಡಲೇ ವರದಿ ಮಾಡಿದೆ ಎನ್ನಲಾಗಿದೆ.

ಚಂಡೀಗಢ- ಲೇಹ್ ವಿಮಾನ ಘಟನೆಯಲ್ಲಿ, ಏರ್ ಇಂಡಿಯಾ ತಕ್ಷಣವೇ ಪೈಲಟ್‌ಗಳನ್ನು ವಿಚಾರಣೆ ಮಾಡಿ DGCA ಗೆ ವಿಷಯವನ್ನು ವರದಿ ಮಾಡಿದೆ. ವಿಮಾನದ ಕಾಕ್‌ಪಿಟ್‌ಗೆ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶ ನೀಡುವುದು ತುಂಬಾ ಅಪಾಯಕಾರಿ, ಅವರಿಂದ ಆಗಬಾರದ್ದಾದರೆ ವಿಮಾನದಲ್ಲಿನ ನೂರಾರು ಪ್ರಯಾಣಿಕರ ಜೀವಕ್ಕೆ ಕುತ್ತು ಬರಬಹುದು. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Friday, June 23, 2023, 11:39 [IST]
English summary
Air india pilot license cancelled by dgca inviting friend cockpit
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+