ಏಷ್ಯಾದ ಅತೀ ದೊಡ್ಡ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ
ಬೆಂಗಳೂರಿನಲ್ಲಿ ಇಂದಿನಿಂದ ಫೆಬ್ರವರಿ 17ರವರಗೆ ನಡೆಯುವ 14ನೇ ಆವೃತಿಯ ಏರೋ ಇಂಡಿಯಾ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಭಾನುವಾರ ಭಾರತೀಯ ವಾಯುಸೇನೆ ವಿಮಾನದಲ್ಲಿ ಹೆಚ್‌ಎಎಲ್‌ಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿಯವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಇಂದು ಬೆಳಗ್ಗೆ 8:50ಕ್ಕೆ HQTCಗೆ ಪ್ರಧಾನಿ ಮೋದಿ ಅವರು ತೆರಳಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಲಹಂಕ ವಾಯುನೆಲೆಗೆ ತಲಪುತ್ತಾರೆ. ಬೆಳಗ್ಗೆ 9:30 ಕ್ಕೆ ಏರ್ ಶೋಗೆ ಬಂದು ಉದ್ಘಾಟಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನ, ಕೇವಲ ಪ್ರದರ್ಶನವಲ್ಲ. ಇದು ಭಾರತದ ಶಕ್ತಿಯ ಪ್ರದರ್ಶನವೂ ಹೌದು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಏರ್ ಶೋ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಈ ಏರ್ ಶೋ ಭಾರತದ ಸಾಮರ್ಥ್ಯ ಸಾಕ್ಷಿ ಆಗಲಿದೆ. ಭಾರತದ ಮೇಲೆ ಇರುವ ವಿಶ್ವದ ವಿಶ್ವಾಸ ಹೆಚ್ಚಾಗಲಿದ್ದು, ಬಹುತೇಕ ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ಭಾಗಿಯಾಗುತ್ತಿವೆ. ದೇಶಗಳ ರಕ್ಷಣಾ ಸಚಿವರು, ವಿಶ್ವದ ಅನೇಕ ರಕ್ಷಣಾ ತಂತ್ರಜ್ಞಾನ ಹಾಗೂ ಪರಿಕರಗಳ ನಿರ್ಮಿಸುವ ಕಂಪನಿಗಳ ಸಿಇಒಗಳು ಕೂಡ ಭಾಗಿಯಾಗಿದ್ದಾರೆ ಎಂದು ತಿಳಿಸಿದರು. ಈ ಶೋನಲ್ಲಿ ಭಾರತದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉತ್ಪಾದನಾ ಕಂಪನಿಗಳು, ಸ್ವದೇಶಿ ಸ್ಟಾರ್ಟ್ ಅಪ್ ಕೂಡಾ ಭಾಗಿಯಾಗುತ್ತಿವೆ.
ಏರೋ ಇಂಡಿಯಾವನ್ನು ಅತ್ಯಂತ ಅಚ್ಚುಕಟ್ಟಾಗಿ ಏರ್ ಶೋವನ್ನು ಆಯೋಜಿಸಿರುವುದಕ್ಕೆ ರಕ್ಷಣಾ ಇಲಾಖೆಯನ್ನು ಅಭಿನಂದಿಸಸಿದ್ದರು. ಭಾರತದ ತಂತ್ರಜ್ಞಾನ ವಿಶ್ವದಲ್ಲೇ ಅತ್ಯಾಧುನಿಕವಾಗಿದ್ದು, ಈ ಏರ್ ಶೋನಲ್ಲಿ ಭಾಗವಹಿಸುವಂತೆ ಕರ್ನಾಟಕದ ಯುವಜನರಿಗೆ ನಾನು ಸ್ವಾಗತ ಕೋರುತ್ತೇನೆ. ಎಲ್ಲರೂ ಈ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ, ಹೊಸ ಸಂಶೋಧನೆಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು. ನಮ್ಮ ತಂತ್ರಜ್ಞಾನ ಕಡಿಮೆ ವೆಚ್ಚದ್ದಾಗಿರುತ್ತದೆ ಜೊತೆಗೆ, ನಂಬಲರ್ಹವಾದ ತಂತ್ರಜ್ಞಾನವೂ ಆಗಿರುತ್ತದೆ.ದೇಶಗಳ ರಕ್ಷಣಾ ಸಚಿವರು, ಸಿಇಒಗಳು ಭಾಗಿಯಾಗಿದ್ದಾರೆ.

ಭಾರತದ ತಂತ್ರಜ್ಞಾನದ ಸಾಮರ್ಥ್ಯ ಏನು ಎಂಬುದಕ್ಕೆ ತೇಜಸ್ ಎಂಬ, ಮೇಕ್ ಇನ್ ಇಂಡಿಯಾದ ಅಡಿ ಆರಂಭವಾದ ಬಹುಕಾರ್ಯ ನಿರ್ವಹಣೆಯ ಸಾಮರ್ಥ್ಯದ ಯುದ್ಧ ವಿಮಾನವೇ ಸಾಕ್ಷಿ. ಇದನ್ನು ಭಾರತದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ್ದಾರೆ. ತುಮಕೂರಿನಲ್ಲಿರುವ HAL ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನಗಳನ್ನು ನಿರ್ಮಿಸುವ ದೊಡ್ಡ ಕೇಂದ್ರ ಆರಂಭವಾಗಿದೆ. ಇದೆಲ್ಲವೂ ಆತ್ಮನಿರ್ಭರ ಭಾರತದ ಉದಾಹರಣೆಗಳಷ್ಟೇ' ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ನಿನ್ನೆ ರಾತ್ರಿ ರಾಜಭವನದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಮೋದಿ ಸಂವಾದ ನಡೆಸಿದರು. ಹಲವು ಗಣ್ಯರನ್ನು ಪ್ರದಾನಿ ಮೋದಿ ಅವರ ಜೊತೆಗೆ ಡಿನ್ನರ್ಗೆ ಆಹ್ವಾನಲಾಗಿತ್ತು. ಮೋದಿ ಜೊತೆ ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ಕುಮಾರ್, ನಿರ್ದೇಶಕ ಪ್ರಶಾಂತ್ ನೀಲ್, ಶ್ರದ್ಧಾ ಜೈನ್ನೆ ಮೋದಿ ಆಹ್ವಾನಿಸಿದ್ರು. ಇನ್ನು ಕ್ರಿಕೆಟ್ ಕ್ಷೇತ್ರದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಹಾಗೂ ಉದ್ಯಮಿಗಳಾದ ನಿತಿನ್ ಕಾಮತ್, ಮೋದಿ ಆಹ್ವಾನಿಸಿದ್ದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ 100ಕ್ಕೂ ಅಧಿಕ ದೇಶಗಳು ಭಾಗಿಯಾಗುತ್ತಿದೆ. ಕಳೆದ ಎಲ್ಲಾ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಬಾರಿಯ ಏರ್ ಶೋನಲ್ಲಿ ಬ್ರೇಕ್ ಮಾಡಲಿದೆ. 14ನೇ ಆವೃತಿಯ ಏರೋ ಇಂಡಿಯಾ ಏರ್ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ ಒಂದು ಪ್ರಮುಖ ಆಕರ್ಷಣೆಯಾಗಿದೆ. ಎಲ್‌ಎಎಲ್‌ನಿಂದ ತಯಾರಿಸಲ್ಪಟ್ಟ HLFT-42 ಎಂಬ ವಿಮಾನಕ್ಕೆ ಮಾರುತ ಎಂಬ ಹೆಸರನ್ನು ಇಡಲಾಗಿದೆ. ಮೊದಲ ದಿನದಲ್ಲಿ ಶೋನಲ್ಲಿ ಹನುಮಂತನ ಲೋಗೋ ಇರುವ ಮಾರುತ ವಿಮಾನ ಮುಖ್ಯ ಆಕರ್ಷಣೆ ಆಗಿದೆ.
ಏರೋ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ ಒಂದು ಗಮನ ಸೆಳೆಯುತ್ತಿದೆ. ಎಲ್‌ಎಎಲ್‌ನಿಂದ ತಯಾರಿಸಲ್ಪಟ್ಟ HLFT-42 ಎಂಬ ವಿಮಾನಕ್ಕೆ ಮಾರುತ ಎಂದು ನಾಮಕರಣ ಮಾಡಲಾಗಿದೆ. ಹನುಮಂತ ಲೋಗೋ ಇರುವ ವಿಮಾನದ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದು, "ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ" ಎಂದು ಬರೆದುಕೊಂಡಿದ್ದಾರೆ. ಸದ್ಯ ಏರೋ ಇಂಡಿಯಾ ಶೋನಲ್ಲಿ ಹನುಮಂತನ ಲೋಗೋ ಇರುವ ಮಾರುತ ವಿಮಾನ ನೋಡುಗರ ಮುಖ್ಯ ಆಕರ್ಷಣೆ ಆಗಿದೆ.


Click it and Unblock the Notifications








