ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

Written By:

ಹೆದ್ದಾರಿಯಲ್ಲಿ ಬಸ್ಸೊಂದು ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿದ್ದು, ಅಪಘಾತದ ದೃಶ್ಯಗಳು ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದ್ರೆ ಅದೃಷ್ಟವಶಾತ್ ಸೀಟ್ ಬೆಲ್ಟ್ ಧರಿಸಿದ್ದ ಹಿನ್ನೆಲೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಅಂದಹಾಗೆ ಈ ಘಟನೆಯೂ ನಡೆದಿರುವುದು ಪೂರ್ಣ ಚೀನಾದಲ್ಲಿ. ಸದ್ಯ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಈ ಅಪಘಾತವು ಅಕ್ಟೋಬರ್ 1ರಂದು ಸುಮಾರು ಮಧ್ಯಾಹ್ನ 1.55ಕ್ಕೆ ಚೀನಾದ ಝುಝೌ ಸಿಟಿ ಬಳಿಯ ಹೆದ್ದಾರಿಯಲ್ಲಿ ನಡೆದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Recommended Video - Watch Now!
MV Agusta Brutale Launched In India | In Kannada - DriveSpark ಕನ್ನಡ
ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಘಟನೆಗೂ ಮುನ್ನ ಹೆದ್ದಾರಿಯಲ್ಲಿ ಬಸ್ ಅತಿ ವೇಗದಿಂದ ಹೋಗುತ್ತಿತ್ತು. ಈ ವೇಳೆ ಬಸ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಿಡಿಯೋದಲ್ಲಿ ಬಿಳಿ ಶರ್ಟ್ ತೊಟ್ಟಿರುವ ಮಹಿಳೆಯನ್ನು ಹೊರತುಪಡಿಸಿ, ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರು.

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಇದರಿಂದ ಸೀಟ್ ಬೆಲ್ಟ್ ಹಾಕದೇ ಇದ್ದ ಮಹಿಳೆ ಮಾತ್ರ ಬಸ್ ನ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದು, ಇನ್ನುಳಿದ ಪ್ರಯಾಣಿಕರೆಲ್ಲಾ ಸೀಟ್ ಬೇಟ್‌ನಿಂದ ಬಚಾವ್ ಆಗಿದ್ದಾರೆ.

ಇನ್ನು ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಅನ್ನು ಧರಿಸಬೇಕೆಂಬ ನಿಯಮವಿದ್ದರೂ, ಹಲವರು ಧರಿಸಲ್ಲ. ಇದರಿಂದ ಅಪಘಾತದ ತೀವ್ರತೆ ಹೆಚ್ಚಾಗುತ್ತಿದ್ದು, ದಯವಿಟ್ಟು ವಾಹನ ಸವಾರರು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಕಡ್ಡಾಯವಾಗಿ ಉಪಯೋಗಿಸುವುದು ಒಳಿತು.

English summary
Read in Kannada about A bus rolled over after being hit by a car in Zhuzhou City of central China's Hunan Province, leaving one passenger injured.
Story first published: Thursday, October 12, 2017, 19:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark