ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಮನರಂಜನೆಯ ತಾಣವಾಗಿದ್ದ ಟಿಕ್ ಟಾಕ್ ಆ್ಯಪ್‌ನಲ್ಲಿ ಇದೀಗ ಸಮಾಜ ಘಾತುಕ ವಿಡಿಯೋಗಳೇ ಹೆಚ್ಚು ಶೇರ್ ಆಗುತ್ತಿವೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ತಾಜಾ ನಿದರ್ಶನ ಎಂಬುವಂತೆ ವ್ಯಕ್ತಿಯೊಬ್ಬ ತನ್ನ ಟಿಕ್ ಟಾಕ್ ವಿಡಿಯೋವನ್ನು ವೈರಲ್ ಮಾಡುವ ಉದ್ದೇಶದಿಂದ ಕಾರಿಗೆ ಬೆಂಕಿಯಿಟ್ಟಿದ್ದಾನೆ.

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಟಿಕ್ ಟಾಕ್ ಆ್ಯಪ್​ನಲ್ಲಿ ಸಾಹಸ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಾಮನ್. ಇದರಿಂದಲೇ ಅದೆಷ್ಟೋ ಪ್ರತಿಭೆಗಳಿಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಸಿಕ್ಕಿರುವ ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬ ಭೂಪ ಮಾತ್ರ ತಾನು ಮಾಡಿದ ಟಿಕ್ ಟಾಕ್ ವಿಡಿಯೋ ರಾತ್ರೋರಾತ್ರಿ ಫುಲ್ ಫೇಮಸ್ ಆಗಬೇಕೆಂಬ ಕಾರಣಕ್ಕೆ ದುಬಾರಿ ಕಾರನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಬೆಂಕಿಹಚ್ಚಿ ವಿಡಿಯೋ ಮಾಡಿರುವ ಘಟನೆ ನಡೆದಿದೆ.

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಕಾರಿಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಿರುವ ವಿಡಿಯೋ ಇದೀಗ ಟಿಕ್ ಟಾಕ್ ಆ್ಯಪ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಕ್ಷೇಪಾರ್ಹ ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ನಡುರಸ್ತೆಯಲ್ಲಿಯೇ ಜೀಪ್ ಕಾರನ್ನು ನಿಲ್ಲಿಸಿ ಬೆಂಕಿ ಹಚ್ಚುತ್ತಿರುವ ವಿಡಿಯೋ ಇದಾಗಿದ್ದು, ಕಾರು ಮಾಲೀಕನೇ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿಯಿಡುತ್ತಿರುವ ದ್ಯಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚಗೆ ಕಾರಣವಾಗಿದೆ.

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಮಾಹಿತಿಗಳ ಪ್ರಕಾರ, ಇದು ಗುಜರಾತಿನ ರಾಜ್‌ಕೋಟ್ ಪಟ್ಟಣದ ಪ್ರಮುಖ ರಸ್ತೆಯೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ನೀಡಿದ ದೂರಿನ ಮೇರಿಗೆ ಆಕ್ಷೇಪಾರ್ಹ ವಿಡಿಯೋ ಮಾಡಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತನಾದ ವ್ಯಕ್ತಿಯನ್ನು ಇಂದ್ರಜಿತ್ ಸಿಂಗ್ ಜಡೇಜಾ ಎಂದು ಗುರುತಿಸಲಾಗಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಬೆಂಕಿಯೊಂದಿಗೆ ಚೆಲ್ಲಾಟವಾಡಿದ್ದಕ್ಕೆ ಜೈಲಿಗೆ ಕಳುಹಿಸಲಾಗಿದೆ.

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಇಂದ್ರಜಿತ್ ಸಿಂಗ್ ಜಡೇಜಾ ಮಾಲೀಕ್ವದ ಜೀಪ್ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಬೆಂಕಿಯಿಟ್ಟಿದ್ದಾರೆ ಎನ್ನಲಾಗಿದ್ದು, ತದನಂತರ ಆ ವಿಡಿಯೋ ಟಿಕ್ ಟಾಕ್ ಆ್ಯಪ್‌ನಲ್ಲಿ ವೈರಲ್ ಆಗಿದೆ.

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಜೀಪ್ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎನ್ನುವ ಕೋಪದಿಂದ ಬೆಂಕಿಹಚ್ಚಿರುವ ಇಂದ್ರಜಿತ್ ಸಿಂಗ್ ಜಡೇಜಾ ತದನಂತರ ಟಿಕ್ ಟಾಕ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಹೇಳಿದ್ದು, ಅದು ರಾತ್ರೋರಾತ್ರಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಹೀಗಾಗಿ ಈ ಘಟನೆಯು ಟಿಕ್ ಟಾಕ್ ವಿಡಿಯೋಗಾಗಿ ಮಾಡಿರುವ ವಿಡಿಯೋ ಅಲ್ಲ ಎಂದಿರುವ ಇಂದ್ರಜಿತ್ ಸಿಂಗ್ ಜಡೇಜಾ ಸಂಬಂಧಿಗಳು ಕಾರು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಕೂಪಗೊಂಡು ಹೀಗೆ ಮಾಡಿದ್ದಾರೆ ಎಂದಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಈ ಕುರಿತು ತನಿಖೆ ಮುಂದುವರಿಸಿರುವ ರಾಜಕೋಟ್ ಪೊಲೀಸರು ಸದ್ಯಕ್ಕೆ ಕಾರು ಮಾಲೀಕ ಇಂದ್ರಜಿತ್ ಸಿಂಗ್ ಜಡೇಜಾ ಬಂಧನ ಮಾಡಿ ವಿಚಾರಣೆ ನಡೆಸಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಟಿಕ್ ಟಾಕ್ ಮಾಡಲು ದುಬಾರಿ ಕಾರಿಗೆ ಬೆಂಕಿಯಿಟ್ಟವನು ಕೊನೆಗೂ ಅಂದರ್..!

ಇದರೊಂದಿಗೆ ಕಾರಿಗೆ ಬೆಂಕಿ ಹಚ್ಚಲು ಸಹಕರಿಸಿದ ಮತ್ತಿಬ್ಬರು ಆರೋಪಿಗಳಿಗೂ ಬಲೆಬಿಸಿರುವ ಪೊಲೀಸರು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಟಿಕ್ ಟಾಕ್ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ವಿಚಾರಕ್ಕೆ ಮಾತ್ರ ಬಳಸಿಕೊಳ್ಳುವುದು ಉತ್ತಮ ಎಂದು ರಾಜಕೋಟ್ ಎಸ್ಪಿ ಎ.ಎನ್. ರಾಠೋಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

More from DriveSpark

Article Published On: Wednesday, September 4, 2019, 13:54 [IST]
English summary
Youngster Burns Jeep For Tik Tok Video. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+