ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ನೀವು ಒಂದು ವಿಚಾರವನ್ನು ತಪ್ಪದೇ ಗಮನಿಸಲೇಬೇಕು. ಬಹುತೇಕ ವಾಹನ ಮಾಲೀಕರು ಹೇಳುವುದು ಏನೆಂದ್ರೆ ನಮ್ಮ ಗಾಡಿ ಮೈಲೇಜ್ ಸರಿಯಾಗಿ ನೀಡುತ್ತಿಲ್ಲ ಎನ್ನುವುದೇ ಆಗುತ್ತದೆ. ಹೌದು, ನೂರರಲ್ಲಿ ಶೇ.90ರಷ್ಟು ವಾಹನ ಮಾಲೀಕರ ಈ ಅಸಮಾಧಾನ ಹೊಂದಿದ್ದಾರೆ. ಆದ್ರೆ ಅದು ವಾಹನ ಎಂಜಿನ್ ಸಮಸ್ಯೆಯಾಗಲಿ ಅಥವಾ ನಿಮ್ಮ ಚಾಲನಾ ಶೈಲಿಯ ಪರಿಣಾಮ ಅಲ್ಲವೇ ಅಲ್ಲ. ಸಮಸ್ಯೆ ಇರುವುದು ಪೆಟ್ರೋಲ್ ಬಂಕ್‌ಗಳಲ್ಲಿ ಅಂದ್ರೆ ನೀವು ನಂಬಲೇಬೇಕು.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ನೀವು ಪೆಟ್ರೋಲ್ ಬಂಕ್‌ಗೆ ಹೋಗುವ ಮುನ್ನ ಸ್ಟೋರಿಯನ್ನು ಒಮ್ಮೆ ಪೂರ್ತಿಯಾಗಿ ಓದಲೇಬೇಕು. ಯಾಕೇಂದ್ರೆ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ಹೇಗೆಲ್ಲಾ ಯಾಮಾರಿಸುತ್ತಾರೆ ಅದನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಆಗ ನಿಮಗೆ ನಿಮ್ಮ ವಾಹನ ಯಾಕೆ ಇಷ್ಟು ಕಡಿಮೆ ಮೈಲೇಜ್ ನೀಡುತ್ತೆ ಎನ್ನುವುದು ಸಂಪೂರ್ಣವಾಗಿ ಅರ್ಥವಾಗಲಿದೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಪೆಟ್ರೋಲ್ ಬಂಕ್‌ಗಳಲ್ಲಿ ನಾವು ಎಷ್ಟೇ ಎಚ್ಚರ ವಹಿಸಿದ್ರು ಒಂದಲ್ಲಾ ಒಂದು ರೀತಿಯ ತಂತ್ರಜ್ಞಾನವನ್ನು ಉಪಯೋಗಿ ಪೆಟ್ರೋಲ್‌ ಪ್ರಮಾಣದಲ್ಲಿ ಗ್ರಾಹಕರಿಗೆ ಯಾಮಾರಿಸುವ ಬಂಕ್ ಮಾಲೀಕರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಹೇಗಿರುತ್ತೆ ಹೇಳಿ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೌದು, ಹೈದ್ರಾಬಾದ್‌ನಲ್ಲಿ ಲೀಗಲ್ ಮೆಟ್ರೊಲಜಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಅಂಕಿಅಂಶಗಳಲ್ಲಿ ತೊರಿಸುವ ಪ್ರಮಾಣಕ್ಕಿಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಪೆಟ್ರೋಲ್ ಬಂಕ್‌ಗಳ ಔಟ್‌ಲೆಟ್‌ಗಳಲ್ಲಿ ಇಂಧನ ತುಂಬಿಸಿದ ಲೀಗಲ್ ಮೆಟ್ರೊಲಜಿ ಅಧಿಕಾರಿಗಳು 7ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳ ಮೇಲೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಕನಿಷ್ಠ 40ಎಂಎಲ್ ನಿಂದ 100 ಎಂಎಲ್ ವರೆಗೆ ಇಂಧನ ಪ್ರಮಾಣವನ್ನು ತಪ್ಪಾಗಿ ತೊರಿಸಿ ದೋಖಾ ಮಾಡಲಾಗುತ್ತಿದೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇದು ಕೇವಲ ಹೈದ್ರಾಬಾದ್‌ನಲ್ಲಿ ಸಮಸ್ಯೆಯಲ್ಲ. ನಮ್ಮ ಬೆಂಗಳೂರಿನಲ್ಲೂ ಬಹುತೇಕ ಪೆಟ್ರೋಲ್ ಬಂಕ್‌ಗಳು ಇದೇ ರೀತಿಯಾಗಿ ಗ್ರಾಹಕರನ್ನು ಮೋಸಗೊಳಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದ್ರೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹಿಡಿತದಲ್ಲಿರುವ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುತ್ತಿರುವ ಹಗಲು ದರೋಡೆಯನ್ನು ತಡೆಯುವವರು ಬರಬೇಕಿದೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಳೆದ ತಿಂಗಳ ಹಿಂದಷ್ಟೇ ಈ ಬಗ್ಗೆ ನಾವು ಒಂದು ವರದಿ ಮಾಡಿದ್ದು ನಿಮಗೆ ನೆನಪಿರಬಹುದು. ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಒಂದರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರೊಬ್ಬರು ಪೆಟ್ರೋಲ್ ಪ್ರಮಾಣದಲ್ಲಿ ಮೋಸಗೊಳಿಸುತ್ತಿರುವ ಡೀಲರ್ಸ್ ಬಗ್ಗೆ ಸಾಕ್ಷಿ ಸಮೇತ ಪೆಟ್ರೋಲ್ ಕಳ್ಳಾಟವನ್ನು ಬಯಲು ಮಾಡಿದ್ದರು.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇದು ಹೊಸ ಸಮಸ್ಯೆ ಏನು ಅಲ್ಲಾ. ಆದ್ರೆ ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ಗೊತ್ತಿದ್ರು ಸಹ ಕಣ್ಮುಚ್ಚಿ ಕುಳಿತಿರುವುದು ಮಾತ್ರ ದುರಷ್ಟಕರ. ಯಾಕೆಂದ್ರೆ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಮೋಸ ಮಾತ್ರ ಅಷ್ಟಿಷ್ಟಲ್ಲ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಳೆದ ಕೆಲ ದಿನಗಳ ಹಿಂದೆಯೂ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹತ್ತಾರು ಪ್ರಕರಣಗಳು ದಾಖಲಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಆದ್ರೆ ಇದೀಗ ಅದೇ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತೆ ಕಳ್ಳ ದಂಧೆ

ಹೌದು.. ಇದು ನಿಮಗೆ ನಂಬಲು ಸಾಧ್ಯವಾಗದಿದ್ದರು ನಿಜ. ಕಳೆದ ತಿಂಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಎಸ್‌ಐಟಿ ಅಧಿಕಾರಿಗಳು ಗ್ರಾಹಕರ ದೂರಿನ ಮೇಲೆ ನಡೆಸಿದ ದಾಳಿ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ನೂರಾರು ರಿಮೋಟ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ರಿಮೋಟ್ ಮೂಲಕ ಪೆಟ್ರೋಲ್ ಬಂಕ್‌ನ ಫ್ಯೂಲ್ ಯೂನಿಟ್‌ಗಳನ್ನು ನಿಯಂತ್ರಿಸುವ ಮಾಲೀಕರು ಬೈಕ್ ಸವಾರರಗಿಂತ 1 ಸಾವಿರ, 2 ಸಾವಿರ ರೂಪಾಯಿ ಲೆಕ್ಕದಲ್ಲಿ ಡೀಸೆಲ್, ಪೆಟ್ರೋಲ್ ತುಂಬಿಸುವ ಕಾರು ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಾರೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸುವಾಗ ಮೋಸ ಮಾಡಿದ್ದಲ್ಲಿ ಮಾಲೀಕರಿಗೆ ಇದು ಗೊತ್ತಾಗಬಹುದಾದ ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ತುಂಬಿಸುವಾಗ ಮಾತ್ರ ರಿಮೋಟ್ ಕಂಟ್ರೋಲ್ ಬಳಕೆ ಮಾಡಿ ಇಂಧನ ಪ್ರಮಾಣದಲ್ಲಿ ಕಡಿತ ಮಾಡುತ್ತಾರೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅದು ಹೇಗೆ ಅಂದ್ರೆ, ನೀವು ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿದ್ದರೆ ನಿಮ್ಮ ವಾಹನದಲ್ಲಿ ಕೇವಲ 900ಮಿ. ಲೀಟರ್ ಮಾತ್ರ ತುಂಬಿಕೊಳ್ಳುತ್ತದೆ. ಆದ್ರೆ ಮೀಟರ್‌ನಲ್ಲಿ ಮಾತ್ರ 1 ಲೀಟರ್ ಹಾಕಿದ್ದಾಗಿ ಲೆಕ್ಕ ತೋರಿಸುತ್ತದೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಒಂದು ಮಾಹಿತಿ ಪ್ರಕಾರ, ದೇಶಾದ್ಯಂತ ಸುಮಾರು 25 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಈ ರೀತಿಯಾಗಿ ಮೋಸ ನಡೆಯುತ್ತಿದ್ದು, ಮೋಸದ ವ್ಯವಹಾರ ಪತ್ತೆ ಹಚ್ಚಲು ಸಾಧ್ಯವಾಗದೇ ವಾಹನನ ಸವಾರರು ಪರದಾಡುತ್ತಿದ್ದಾರೆ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕರ್ನಾಟಕದಲ್ಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಈ ರೀತಿಯಾಗಿ ಮೋಸ ನಡೆಯುತ್ತಿದ್ದು, ಮೋಸದ ವ್ಯವಹಾರದ ಹಿಂದೆ ಕೆಲವು ರಾಜಕೀಯ ಮುಖಂಡರೇ ಬೆನ್ನೆಲುಬಾಗಿ ನಿಂತಿರುವುದು ದುರಾದೃಷ್ಠಕರ ಸಂಗತಿ.

ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅನುಮಾನ ಬಂದ್ರೆ ಬಿಡಲೇಬೇಡಿ..!

ವಾಹನ ಸವಾರರೇ ಯಾವುದೇ ಕಾರಣಕ್ಕೂ ಅನ್ಯಾಯವನ್ನು ಸಹಿಸಿಕೊಳ್ಳಬೇಡಿ. ನಿಮಗೆ ಅನುಮಾನ ಬಂದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರಮಾಣದ ಬಗ್ಗೆ ಮಾಲೀಕರ ಬಳಿ ಅನುಮಾನ ಬಗೆಹರಿಸಿಕೊಳ್ಳಿ. ಒಂದು ವೇಳೆ ನಿಮ್ಮ ಅನುಮಾನ ನಿಜವಾಗಿದ್ದಲ್ಲಿ ಮೋಸ ಮಾಡುತ್ತಿರುವ ಬಂಕ್ ವಿರುದ್ಧ ದೂರು ದಾಖಲಿಸಲು ಹಿಂಜರಿಯಬೇಡಿ. ದೂರು ದಾಖಲಿಸಿ ಮೋಸದ ವ್ಯವಹಾರಕ್ಕೆ ಬ್ರೇಕ್ ಹಾಕಿ.

Most Read Articles

Kannada
English summary
Fuel Meter Fraud Detected In 7 Petrol Pumps In Andhra Pradesh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more