ಮನೆ ಮಾರಿದ ದುಡ್ಡಲ್ಲಿ ರೂ.3 ಕೋಟಿ ಮೌಲ್ಯದ ಹೊಸ ಕಾರು ಖರೀದಿಸಿದ ನಟಿ!

ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ (Malaika Arora), ತಮ್ಮ ಸ್ಟೈಲಿಶ್ ಲುಕ್ ಹಾಗೂ ವೈಭವೋಪೇತ ಜೀವನಶೈಲಿಯಿಂದಲೇ ಖ್ಯಾತಿ ಗಳಿಸಿದ್ದಾರೆ. 1998ರಲ್ಲಿ ತೆರೆಕಂಡ 'ದಿಲ್ ಸೇ' ಸಿನಿಮಾದ 'ಚೈಯ್ಯಾ ಚೈಯ್ಯಾ' ಹಾಡಿಗೆ ಹೆಜ್ಜೆ ಹಾಕಿದ್ದರು. ಆ ಬಳಿಕ ಅವರ ಅದೃಷ್ಟವೇ ಬದಲಾಯಿತು. ಸಾಲು ಸಾಲು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಇತ್ತೀಚೆಗೆ 51ರ ಹರೆಯದ ಮಲೈಕಾ ಅರೋರಾ, ಹೊಚ್ಚ ಹೊಸ ರೇಂಜ್ ರೋವರ್ ಆಟೋಬಯಾಗ್ರಫಿ (Range Rover Autobiography) ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.

ಈಚೆಗೆ ನಟಿ ಮಲೈಕಾ ಅರೋರಾ, ಮುಂಬೈನ ಅಂಧೇರಿಯಲ್ಲಿದ್ದ ಐಷಾರಾಮಿ ಫ್ಲಾಟ್‌ನ್ನು ರೂ.5.3 ಕೋಟಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಅದರಿಂದ ಬಂದ ಹಣದಿಂದಲೇ ಈ ಕಾರನ್ನು ಕೊಂಡುಕೊಂಡಿದ್ದಾರೆ ಎಂಬ ವಿವರಗಳು ಲಭ್ಯವಾಗಿವೆ. 2018ರಲ್ಲಿ ಇದೇ ಫ್ಲಾಟ್‌ನ್ನು ರೂ.3.26 ಕೋಟಿ ಖರೀದಿಸಿದ್ದರು.

Malaika Arora Buys New Range Rover Autobiography Details

ರೇಂಜ್ ರೋವರ್ ಆಟೋಬಯಾಗ್ರಫಿ ವಿಶೇಷತೆಗಳೇನು:

ಇದೊಂದು ದುಬಾರಿ ಬೆಲೆಯ ಐಷಾರಾಮಿ ಎಸ್‌ಯುವಿಯಾಗಿದೆ. ರೂ.2.57 ಕೋಟಿ ಎಕ್ಸ್-ಶೋರೂಂ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಆದರೆ, ಬೆಂಗಳೂರು, ದೆಹಲಿ, ಹೈದರಾಬಾದ್, ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿನ ಆನ್-ರೋಡ್ ದರದಲ್ಲಿ ಸಾಕಷ್ಟು ವ್ಯತ್ಯಾಸವಿರಲಿದೆ. ಅಲ್ಲಿ ರೂ.2.95 ಕೋಟಿಯಿಂದ ರೂ.3.38 ಕೋಟಿ ಬೆಲೆಯನ್ನು ಒಳಗೊಂಡಿದೆ.

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಫ್ಲಶ್ ಡಿಪ್ಲಾಯಬೆಲ್ ಡೋರ್ ಹ್ಯಾಂಡಲ್ ಹಾಗೂ 23 ಇಂಚಿರುವ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸ್ಯಾಂಟೊರಿನಿ ಬ್ಲ್ಯಾಕ್, ಒಬ್ಸಿಡಿಯನ್ ಬ್ಲ್ಯಾಕ್, ಬ್ರಿಟಿಷ್ ರೇಸಿಂಗ್ ಗ್ರೀನ್, ಫೈರೆಂಜ್ ರೆಡ್, ವಾರೆಸಿನ್ ಬ್ಲ್ಯೂ, ಕಾನ್ಸ್ಟೆಲ್ಲೇಷನ್ ಬ್ಲ್ಯೂ ಹಾಗೂ ಅಯೋನಿಯನ್ ಸಿಲ್ವರ್, ಟೂರ್‌ಮ್ಯಾಲಿನ್ ಬ್ರೌನ್, ಹಾಗೂ ಬೆಲ್ಗ್ರೇವಿಯಾ ಗ್ರೀನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿಯು ತುಂಬಾ ವಿಶಾಲ ಗಾತ್ರದಲ್ಲಿದೆ. 5,252 ಎಂಎಂ ಉದ್ದ, 2,209 ಎಂಎಂ ಅಗಲ ಹಾಗೂ 1,870 ಎಂಎಂ ಎತ್ತರವು ಇದೆ. ಜೊತೆಗೆ 219 ಗ್ರೌಂಡ್ ಕ್ಲಿಯರೆನ್ಸ್ ಮತ್ತು 3,197 ವೀಲ್‌ಬೇಸ್‌ನ್ನು ಒಳಗೊಂಡಿದೆ. 2,569 ಕೆಜಿ ತೂಕವಿದೆ.

ಇದು 5/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 1050 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಹೊಸ ರೇಂಜ್ ರೋವರ್ ಆಟೋಬಯಾಗ್ರಫಿ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 3.0-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್-6 ಪೆಟ್ರೋಲ್, 4.4-ಲೀಟರ್ ಸೂಪರ್‌ಚಾರ್ಜ್ಡ್ ವಿ8 ಪೆಟ್ರೋಲ್ ಹಾಗೂ 3.0-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್-6 ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 8-ಸ್ಪೀಡ್ ಮತ್ತು 9-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ಈ ಕಾರಿನ ಇಂಧನ ದಕ್ಷತೆಯೂ ಉತ್ತಮವಾಗಿದೆ. 12 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 90 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 242 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 5.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ನೂತನ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿಯು ಹೈ-ಡೆಫಿನಿಷನ್ 11.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪನೋರಮಿಕ್ ಸ್ಲೈಡಿಂಗ್ ರೂಫ್, ಹೀಟೆಡ್ ಸ್ಟೀರಿಂಗ್ ವೀಲ್ ಹಾಗೂ ಮಲ್ಟಿ ಜೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Monday, September 15, 2025, 13:51 [IST]
English summary
Malaika arora buys new range rover autobiography details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+