ಬಂಡೆಯಂತಹ ಟ್ರಯಂಫ್ ರಾಕೆಟ್ 3 ಬೈಕ್ ಖರೀದಿಸಿದ ನಟ.. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ?

ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಥವಾ ಸ್ಯಾಂಡಲ್‌ವುಡ್‌ನ ಹೆಚ್ಚಿನ ಸೆಲೆಬ್ರಿಟಿಗಳು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ, ಬೆರಳೆಣಿಕೆಯಷ್ಟು ಸೆಲೆಬ್ರಿಟಿಗಳಿಗೆ ಮಾತ್ರ ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷವಾದ ಪ್ರೀತಿಯಿರುತ್ತದೆ. ಆ ಸಾಲಿನಲ್ಲಿ ಜನಪ್ರಿಯ ಹಿಂದಿ ಕಿರುತೆರೆ ನಟ ವಿವೇಕ್ ದಹಿಯಾ (Vivek Dahiya) ಕೂಡ ಇದ್ದಾರೆ. ಈಚೆಗೆ ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3 (Triumph Rocket 3) ಬೈಕ್‌ನ್ನು ಖರೀದಿ ಮಾಡಿದ್ದಾರೆ. ಈ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲೂ ಕಾಣಿಸಿಕೊಂಡಿವೆ. ವಿವೇಕ್ ಅವರ ಪತ್ನಿ ದಿವ್ಯಾಂಕ ತ್ರಿಪಾಠಿಯು ಪ್ರಮುಖ ಕಿರುತೆರೆ ನಟಿಯಾಗಿದ್ದು, ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 ಮೋಟಾರ್‌ಸೈಕಲ್‌ನ ಒಡತಿಯಾಗಿದ್ದಾರೆ.

ಟ್ರಯಂಫ್ ರಾಕೆಟ್ 3 ವಿಶೇಷತೆಗಳೇನು:

ಇದೊಂದು ಐಷಾರಾಮಿ ಬೈಕ್ ಆಗಿದ್ದು, ತುಂಬಾ ದುಬಾರಿ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಕನಿಷ್ಠ ರೂ.22.49 ಲಕ್ಷ ಹಾಗೂ ಗರಿಷ್ಠ ರೂ.23.09 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಸ್ಟಾರ್ಮ್ ಆರ್ (Storm R) ಹಾಗೂ ಸ್ಟಾರ್ಮ್ ಜಿಟಿ (Storm GT) ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

Actor Vivek Dahiya Buys Triumph Rocket 3 Bike Details

ಈ ಮೋಟಾರ್‌ಸೈಕಲ್‌ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸಿಗ್ನೇಚರ್ ಟ್ವಿನ್ ಎಲ್ಇಡಿ ಹೆಡ್‌ಲೈಟ್‌ಗಳು, ಸ್ಟೇನ್‌ಲೆಸ್ ಸ್ಟೀಲ್ ಎಕ್ಸಾಸ್ಟ್‌ಗಳು, ಎತ್ತರವಿರುವ ವಿಂಡ್‌ಸ್ಕ್ರೀನ್, ಪಿಲಿಯನ್ ಬ್ಯಾಕ್‌ರೆಸ್ಟ್ ಹಾಗೂ ಹೆಚ್ಚು ಅಗಲವಿರುವ ಹ್ಯಾಂಡಲ್‌ಬಾರ್‌ಗಳನ್ನು ಪಡೆದಿದೆ. ಮ್ಯಾಟ್ ಸಿಲ್ವರ್ ಐಸ್, ಸಿಲ್ವರ್ ಐಸ್, ಕಾರ್ನಿವಲ್ ರೆಡ್ ಹಾಗೂ ಸ್ಯಾಟಿನ್ ಪೆಸಿಫಿಕ್ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ ಟ್ರಯಂಫ್ ರಾಕೆಟ್ 3 ಬೈಕ್ ದೊಡ್ಡ ಗಾತ್ರದಲ್ಲಿದೆ. ಬರೋಬ್ಬರಿ 2,360 ಎಂಎಂ ಉದ್ದವಿದೆ. 1,677 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಹ್ಯಾಂಡಲ್‌ಬಾರ್ 920 ಎಂಎಂ ಅಗಲವಿದೆ. ಸೀಟ್ ಎತ್ತರ 773 ಎಂಎಂ ಇದೆ. ಜೊತೆಗೆ 320 ಕೆಜಿ ತೂಕವಿದೆ.

ಇದು ಸಾಕಷ್ಟು ಬಲಿಷ್ಠವಾದ ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 2,458 ಸಿಸಿ ಲಿಕ್ವಿಡ್-ಕೋಲ್ಡ್ ಡಿಒಹೆಚ್‌ಸಿ ಇನ್‌ಲೈನ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 7,000 ಆರ್‌ಪಿಎಂನಲ್ಲಿ 182 ಬಿಎಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 4,000 ಆರ್‌ಪಿಎಂನಲ್ಲಿ 225 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಈ ಮೋಟಾರ್‌ಸೈಕಲ್‌ನ ಇಂಧನ ದಕ್ಷತೆಯು ಉತ್ತಮವಾಗಿದೆ. 15.15 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 18 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 220 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 2.73 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಹೊಸ ಟ್ರಯಂಫ್ ರಾಕೆಟ್ 3 ಬೈಕ್ ಪುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಕ್ಸೆಸರಿ-ಫಿಟ್ ನ್ಯಾವಿಗೇಷನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಕೀಲೆಸ್ ಇಗ್ನಿಷನ್ ಹಾಗೂ ಸ್ಟೀರಿಂಗ್ ಲಾಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೈನ್, ರೋಡ್ ಹಾಗೂ ಸ್ಪೋರ್ಟ್ಸ್ ಸೇರಿದಂತೆ ವಿವಿಧ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಅಲ್ಯೂಮಿನಿಯಂ ವೀಲ್‌ಗಳು ಹಾಗೂ 150/80 ಆರ್17 ವಿ ಮತ್ತು 240/50 ಆರ್16 ವಿ ಟೈಯರ್‌ಗಳನ್ನು ಪಡೆದಿದೆ.

ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) 47 ಎಂಎಂ ಅಪ್‌ಸೈಡ್-ಡೌನ್ ಕಾರ್ಟ್ರಿಡ್ಜ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ರಿಮೋಟ್ ಹೈಡ್ರಾಲಿಕ್ ಪ್ರಿಲೋಡ್ ಅಡ್ಜಸ್ಟೇಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಟ್ರಾಕ್ಷನ್ ಕಂಟ್ರೋಲ್, ಆಪ್ಟಿಮೈಸ್ಡ್ ಕಾರ್ನರಿಂಗ್ ಎಬಿಎಸ್‌ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Tuesday, September 16, 2025, 15:29 [IST]
English summary
Actor vivek dahiya buys triumph rocket 3 bike details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+