ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಬೈಕ್ ಖರೀದಿಸುವ ಗ್ರಾಹಕರು ಮೊದಲು ನೋಡುವುದು ಆ ಬೈಕ್ ಎಷ್ಟು ಮೈಲೇಜ್ ನೀಡುತ್ತದೆ ಎಂದು. ಇದರಿಂದ ತಿಳಿಯುತ್ತದೆ ಮೈಲೇಜ್ ಬಗ್ಗೆ ವಾಹನ ಖರೀದಿದಾರರೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಇನ್ನು ಕುತೂಹಲಕಾರಿ ಅಂಶವೆಂದರೆ ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳೇ ಉತ್ತಮವಾಗಿ ಮಾರಾಟವಾಗುತ್ತವೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬೈಕ್ ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಬೈಕಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಇದರಿಂದ ನಿಮಗಾಗಿ ಅಧಿಕ ಮೈಲೇಜ್ ನೀಡುವ ಟಾಪ್-10 ಬಿಎಸ್-6 ಬೈಕುಗಳ ಮಾಹಿತಿ ಇಲ್ಲಿವೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ದ್ವಿಚಕ್ರ ವಾಹನಗಳ ಮೈಲೇಜ್ ವಿಷಯಕ್ಕೆ ಬಂದಾಗ, ಇದರಲ್ಲಿ ಅಗ್ರಗಣ್ಯನಾಗಿರುವುದು ಬಜಾಜ್ ಸಿಟಿ 110 ಬೈಕ್. ಬಜಾಜ್ ಸಿಟಿ 110 ಬೈಕ್ ಪ್ರತಿ ಲೀಟರ್‌ಗೆ ಸುಮಾರು 104 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮೈಲೇಜ್ ವಿಷಯದಲ್ಲಿ ಈ ಬೈಕಿಗೆ ಸರಿಸಾಟಿ ಯಾರೂ ಇಲ್ಲ ಎಂದು ಹೇಳಬಹುದು.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಜನಪ್ರಿಯ ಬಜಾಜ್ ಸಿಟಿ 110 ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.50 ಸಾವಿರ ಗಳಾಗಿದೆ. ಅಗ್ಗದ ಬೆಲೆ ಮತ್ತು ಹೆಚ್ಚಿನ ಮೈಲೇಜ್ ಬೈಕನ್ನು ಖರೀದಿಸಲು ಬಯಸುವವರಿಗೆ ಬಜಾಜ್ ಸಿಟಿ 110 ಬೈಕ್ ಉತ್ತಮ ಆಯ್ಕೆಯಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಬಜಾಜ್ ಸಿಟಿ 110 ಬೈಕಿನ ಬಳಿಕ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಎರಡನೇ ಸ್ಥಾನವನ್ನು ಪಡೆಸಿದೆ. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಪ್ರತಿ ಲೀಟರ್‌ಗೆ 85 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.62,784 ಗಳಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಬಜಾಜ್ ಪ್ಲಾಟಿನಾ ಎಚ್-ಗೇರ್ ಬೈಕ್ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಬಜಾಜ್ ಪ್ಲಾಟಿನಾ ಎಚ್-ಗೇರ್ ಬೈಕ್ ಪ್ರತಿ ಲೀಟರ್‌ಗೆ ಗರಿಷ್ಠ 84 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪ್ಲಾಟಿನಾ ಎಚ್-ಗೇರ್ ಬೈಕಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಇದರ ನಂತರದ ಸ್ಥಾನಗಳನ್ನು ಕ್ರಮವಾಗಿ ದೇಶಿಯ ಬ್ರ್ಯಾಂಡ್‌ನ ಅತಿ ಹೆಚ್ಚು ಮಾರಾಟವಾಗುವ ಸೂಪರ್ ಸ್ಪ್ಲೆಂಡರ್ ಮತ್ತು ಸ್ಪ್ಲೆಂಡರ್ ಪ್ಲಸ್ ಬೈಕುಗಳು ಪಡೆದುಕೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಇನ್ನು ಹೋಂಡಾ ಸಿಡಿ 110 ಡ್ರೀಮ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೈಕುಗಳಲ್ಲಿ ಒಂದಾಗಿದೆ. ಇದು ತನ್ನ 110ಸಿಸಿ ಎಂಜಿನ್‌ನಿಂದ ಪ್ರತಿ ಲೀಟರ್‌ಗೆ 74 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇದರ ನಂತರ ಸ್ಥಾನವನ್ನು ಟಿವಿಎಸ್ ರೆಡಿಯಾನ್ 110 ಸಿಸಿ ಬೈಕ್ ಪಡೆದುಕೊಂಡಿದೆ.

ಸಂಖ್ಯೆ ಬೈಕ್ ಮಾದರಿಯ ಇಂಧನ ದಕ್ಷತೆ (ಎಆರ್‌ಎಐ ಪ್ರಮಾಣಿಕೃತ) ಬೆಲೆ
1 ಬಜಾಜ್ ಸಿಟಿ100 104ಕಿ.ಮೀ/ಪ್ರತಿ ಲೀಟರ್ ರೂ. 48,704
2 ಟಿವಿಎಸ್ ಸ್ಟಾರ್ ಸಿಟಿ 85ಕಿ.ಮೀ/ಪ್ರತಿ ಲೀಟರ್ ರೂ. 62,784
3 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ 84ಕಿ.ಮೀ/ಪ್ರತಿ ಲೀಟರ್ ರೂ. 62,899
4 ಹೀರೋ ಸೂಪರ್ಸ್ಪ್ಲೆಂಡರ್ 83ಕಿ.ಮೀ/ಪ್ರತಿ ಲೀಟರ್ ರೂ. 71,650
5

ಹೀರೋ ಸ್ಪ್ಲೆಂಡರ್ ಪ್ಲಸ್

80ಕಿ.ಮೀ/ಪ್ರತಿ ಲೀಟರ್ ರೂ. 60,310
6 ಹೋಂಡಾ ಸಿಡಿ110 ಡ್ರೀಮ್ 74ಕಿ.ಮೀ/ಪ್ರತಿ ಲೀಟರ್ ರೂ. 65,505
7 ಟಿವಿಎಸ್ ರೆಡಿಯಾನ್ 69ಕಿ.ಮೀ/ಪ್ರತಿ ಲೀಟರ್ ರೂ. 59,742
8 ಹೋಂಡಾ ಶೈನ್ 65ಕಿ.ಮೀ/ಪ್ರತಿ ಲೀಟರ್ ರೂ. 68,812
9 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ 61ಕಿ.ಮೀ/ಪ್ರತಿ ಲೀಟರ್ ರೂ. 65,672
10 ಹೀರೋ ಪ್ಯಾಷನ್ ಪ್ರೊ 100 60 ಕಿ.ಮೀ/ಪ್ರತಿ ಲೀಟರ್ ರೂ. 65,750
ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಇನ್ನು ಹೋಂಡಾ ಶೈನ್ ಬೈಕ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಭಾರತದ ಅತ್ಯಂತ ಸುಗಮ ಮತ್ತು 125 ಸಿಸಿ ಎಂಜಿನ್ ಹೊಂದಿರುವ ಬೈಕ್ ಆಗಿದೆ. ಹೋಂಡಾ ಶೈನ್ ಬೈಕ್ ಪ್ರತಿ ಲೀಟರ್‌ಗೆ 65 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು

ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ನಗರ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಹೆಚ್ಚು ಪ್ರಸಿದ್ದವಾಗಿದೆ. ಈ ಬೈಕಿನ ಮೈಲೇಜ್ ಅನ್ನು ಸುಧಾರಿಸಲು 3ಎಸ್ (ಐಡಲ್ ಸ್ಟಾಪ್-ಸ್ಟಾರ್ಟ್) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇನ್ನು ಈ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಹೀರೋ ಪ್ಯಾಶನ್ ಪ್ರೊ 110 ಬೈಕ್ ಪಡೆದುಕೊಂಡಿದೆ.

Most Read Articles

Kannada
English summary
Top 10 Most Fuel Efficient BS6 Bikes In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X