ಒಮ್ಮೆ ಈ ಬೈಕ್‌ನ್ನು ಖರೀದಿಸಿದ್ರೆ 10 ವರ್ಷ ಬಾಳಿಕೆ ಬರುತ್ತದೆ.. ಬೆಲೆಯೂ ಕಮ್ಮಿ.. ಪ್ರತಿದಿನ 10,000 ಗಾಡಿಗಳು ಸೇಲ್ಸ್!

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ನಂಬರ್ 1 ಬೈಕ್ ಎಂದೇ ಮನೆ ಮಾತಾಗಿದೆ. ಈ ಮೋಟಾರ್‌ಸೈಕಲ್‌ಗೆ ದಶಕಗಳಿಂದ ಉತ್ತಮವಾದ ಬೇಡಿಕೆಯಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 3,10,802 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 2,45,315 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 21.1% ಪ್ರಗತಿಯಾಗಿದೆ.

2025 ಡಿಸೆಂಬರ್‌ನಲ್ಲಿಯೂ 2,72,441 ಯುನಿಟ್‌ 'ಸ್ಪ್ಲೆಂಡರ್ ಪ್ಲಸ್' ಬೈಕ್‌ಗಳನ್ನು ಮಾರಾಟ ಮಾಡಲಾಗಿದೆ. ಅಂದರೆ ತಿಂಗಳಿಂದ ತಿಂಗಳಿಗೆ ಶೇಕಡ 12.34% ಬೆಳವಣಿಗೆಯಾಗಿದೆ. ವಿಶೇಷವಾಗಿ ಈ ಜನವರಿಯಲ್ಲಿ ಪ್ರತಿದಿನ ಸರಿ ಸುಮಾರು 10,000 ಯುನಿಟ್‌ 'ಸ್ಪ್ಲೆಂಡರ್'ಗಳು ಮಾರಾಟವಾಗಿವೆ.

Hero Splendor Plus January 2026 Sales Details

'ಹೀರೋ ಸ್ಪ್ಲೆಂಡರ್ ಪ್ಲಸ್' ಮಾರಾಟವು ಅಧಿಕಗೊಳ್ಳಲು ಹಲವು ಕಾರಣಗಳಿವೆ. ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಗಿದೆ. ಜೊತೆಗೆ ದೀರ್ಘಕಾಲ ಬಾಳಿಕೆ ಬರುತ್ತದೆ. ಹೀಗಾಗಿ, ಮಾರಾಟ ಸಂಖ್ಯೆಯು ಹೆಚ್ಚಳಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

'ಸ್ಪ್ಲೆಂಡರ್ ಪ್ಲಸ್' ವಿಶೇಷತೆಗಳೇನು:

ಈ ಬೈಕ್ ಅಗ್ಗದ ದರದಲ್ಲೂ ಲಭ್ಯವಿದೆ. ಕನಿಷ್ಠ ರೂ.74,152 ಹಾಗೂ ಗರಿಷ್ಠ ರೂ.76,437 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಡ್ರಮ್ ಬ್ರೇಕ್, ಐ3ಎಸ್, ಸ್ಪೆಷಲ್ ಎಡಿಷನ್ ಮತ್ತು ಮಿಲಿಯನ್ ಎಡಿಷನ್ ಎಂಬ 4 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.

Hero Splendor Plus January 2026 Sales Details

ಇದು ಸರಳವಾದ ವಿನ್ಯಾಸವನ್ನು ಒಳಗೊಂಡಿದೆ. ಅತ್ಯುತ್ತಮವಾದ ಹೆಡ್‌ಲ್ಯಾಂಪ್, ಇಂಡಿಕೇಟರ್‌ಗಳು ಹಾಗೂ ಟೈಲ್ ಲ್ಯಾಂಪ್‌ನ್ನು ಒಳಗೊಂಡಿದೆ. ಬ್ಲೂ-ಬ್ಲ್ಯಾಕ್, ಬ್ಲ್ಯಾಕ್ ಹೆವಿ ಗ್ರೇ, ಫೋರ್ಸ್ ಸಿಲ್ವರ್, ಬ್ಲ್ಯಾಕ್-ರೆಡ್ ಪರ್ಪಲ್ & ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಹೊಸ 'ಹೀರೋ ಸ್ಪ್ಲೆಂಡರ್ ಪ್ಲಸ್' ತುಂಬಾ ವಿಶಾಲವಾಗಿದೆ. 2,000 ಎಂಎಂ ಉದ್ದ, 720 ಎಂಎಂ ಅಗಲ ಮತ್ತು 1,052 ಎಂಎಂ ಎತ್ತರವಿದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,236 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 112 ಕೆಜಿ ತೂಕವಿದೆ.

Hero Splendor Plus January 2026 Sales Details

ಈ ಮೋಟಾರ್‌ಸೈಕಲ್‌ ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 97.2-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕಿಲೋಮೀಟರ್‌ಗೆ ಮೈಲೇಜ್ ಕೊಡುತ್ತದೆ.

ಇದು ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಐ3ಎಸ್ ಟೆಕ್ನಾಲಜಿಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ. 93 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

ನೂತನ 'ಸ್ಪ್ಲೆಂಡರ್ ಪ್ಲಸ್' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್-ಪ್ರಿಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಈ ಮೋಟಾರ್‌ಸೈಕಲ್‌ಗೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಬಜಾಜ್ ಪ್ಲಾಟಿನಾ 100 (Bajaj Platina 100), ಹೋಂಡಾ ಶೈನ್ 100 (Honda Shine 100), ಟಿವಿಎಸ್ ರೇಡಿಯನ್ (TVS Radeon), ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) ಮತ್ತು ಹೋಂಡಾ ಲಿವೋ (Honda Livo) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Sunday, February 22, 2026, 15:15 [IST]
English summary
Hero splendor plus january 2026 sales details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+