ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಕೆ ಎಷ್ಟು ಗೊತ್ತಾ?

Written By:

ಕರ್ನಾಟಕದ ಪ್ರತಿಷ್ಠಿತ ಸರ್ಕಾರಿ ಸಾರ್ವಜನಿಕ ವಾಹನ ಸೇವಾ ಸಂಸ್ಥೆಯಾದ ಕೆಎಸ್‌ಆರ್‌‌ಟಿಸಿಯು ಕೇವಲ ಒಂದೇ ದಿನದಲ್ಲಿ 13.46 ಕೋಟಿ ರೂ.ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ.

ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಸಿದ್ದು ಎಷ್ಟು ಕೋಟಿ ಗೊತ್ತ ?

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೊನ್ನೆ ನಡೆದ ದಸರಾ ಹಬ್ಬದಂದು ಈ ದಾಖಲೆ ಪ್ರಮಾಣದ ಆದಾಯ ಗಳಿಕೆ ಮಾಡಿದ್ದು, ಈ ಮೂಲಕ ಹೊಸ‌ ಇತಿಹಾಸ ಸೃಷ್ಠಿಸಿದೆ. ಈ ಮೂಲಕ 2015ರಲ್ಲಿದ್ದ ದಾಖಲಾಗಿದ್ದ ಅತ್ಯಧಿಕ ಗಳಿಕೆಯ ದಾಖಲೆಯನ್ನು ಕೆಎಸ್‌ಆರ್‌‌ಟಿಸಿ ಅಳಿಸಿ ಹಾಕಿದೆ.

ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಸಿದ್ದು ಎಷ್ಟು ಕೋಟಿ ಆದಾಯ ಗೊತ್ತ ?

ವಿಜಯದಶಮಿ, ಆಯುಧಪೂಜೆ, ಗಾಂಧಿ ಜಯಂತಿಯ ಸಾಲು ಸಾಲು ಸರಕಾರಿ ರಜೆ ಬಂದಿದ್ದರಿಂದ ಸಾರ್ವಜನಿಕರು ಹೆಚ್ಚು ಕೆಎಸ್‌ಆರ್‌‌ಟಿಸಿ ಬಸ್ಸುಗಳನ್ನು ಅವಲಂಬಿಸಿದ್ದರ ಪರಿಣಾಮ ಸಂಸ್ಥೆಗೆ ಅಧಿಕ ಆದಾಯ ಬಂದಿದೆ ಎನ್ನಲಾಗಿದೆ.

ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಸಿದ್ದು ಎಷ್ಟು ಕೋಟಿ ಆದಾಯ ಗೊತ್ತ ?

ಕಳೆದ ವರ್ಷದ ದಸರಾ ಹಬ್ಬದ ಸಂದರ್ಭದಲ್ಲಿ 12.75 ಕೋಟಿ ರೂ.ಗಳ ಸಂಗ್ರಹವೇ ಈವರೆಗಿನ ಒಂದು ದಿನದ ಅತ್ಯದಿಕ ಆದಾಯ ಗಳಿಕೆಯಾಗಿತ್ತು. ಆದರೆ ಈ ವರ್ಷ ಆ ದಾಖಲೆಯನ್ನು ಕೆಎಸ್‌ಆರ್‌ಟಿಸಿ ಸಂಸ್ಥೆ ಮುರಿದು ಹಾಕಿದ್ದು, ಇತಿಹಾಸದಲ್ಲೇ ಅತ್ಯಧಿಕ ಗಳಿಕೆಯನ್ನು ಮಾಡಿದೆ.

ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಸಿದ್ದು ಎಷ್ಟು ಕೋಟಿ ಆದಾಯ ಗೊತ್ತ ?

"ಕೆಎಸ್‌ಆರ್‌ಟಿಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 13.46 ಕೋಟಿ ರೂ. ದಾಖಲೆ ಆದಾಯ ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ 132.16 ಕೋಟಿ ರೂ. ಅಧಿಕ ಆದಾಯವನ್ನು ಸಂಸ್ಥೆ ಗಳಿಸಿದೆ,''ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಸಿದ್ದು ಎಷ್ಟು ಕೋಟಿ ಆದಾಯ ಗೊತ್ತ ?

ದಸರಾ ಟ್ರಿಪ್‌‌ನಲ್ಲಿಯೂ 1 ಕೋಟಿ ಹೆಚ್ಚುವರಿ ಆದಾಯ ಪಡೆದ ಕೆಎಸ್‌ಆರ್‌ಟಿಸಿ :

ಈ ಬಾರಿ ದಸರಾ ಮಹೋತ್ಸವದ ಅವಧಿಯಲ್ಲಿ ಸರಕಾರಿ ರಜೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ, ಮೈಸೂರಿನಲ್ಲಿ ನಡೆದ ನಾಡಹಬ್ಬ ದಸರಾ ಮಹೋತ್ಸವದ ಅವಧಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ಕೋಟಿ ರೂ. ಹೆಚ್ಚುವರಿ ಸಾರಿಗೆ ಆದಾಯ ಗಳಿಸಿದೆ.

ಒಂದೇ ದಿನದಲ್ಲಿ ಕೆಎಸ್‌ಆರ್‌‌ಟಿಸಿ ಗಳಿಸಿದ್ದು ಎಷ್ಟು ಕೋಟಿ ಆದಾಯ ಗೊತ್ತ ?

ಮೈಸೂರಿನ ಸುತ್ತಮುತ್ತಲಿನ ಜಿಲ್ಲೆಗಳ ಜನತೆ ಹಾಗು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಮೈಸೂರಿನ ಕಡೆ ಹರಿದು ಬಂದ ಕಾರಣ ಬೆಂಗಳೂರು-ಮೈಸೂರಿನ ನಡುವೆ ಸಂಚಾರ ಹೆಚ್ಚಾಗಿದೆ. ಹಾಗಾಗಿ ಕೆಎಸ್‌ಆರ್‌ಟಿಸಿಗೆ ಈ ಬಾರಿ ನಿರೀಕ್ಷೆಗೂ ಮೀರಿ ಸಾರಿಗೆ ಆದಾಯ ಬಂದಿದೆ.

English summary
Read in kannada about KSRTC earned 13.5 crores in one day only. when compared to last year, this year KSRTC earned so much revenue.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark