Duster: ಮಾರ್ಚ್ 17ಕ್ಕೆ ಹೊಸ ಹೈಬ್ರಿಡ್ SUV ಬಿಡುಗಡೆ: ದಶಕದ ಹಿಂದೆ ಮಿಂಚಿ ಮರೆಯಾಗಿದ್ದ ಕಾರಿದು

ರೆನಾಲ್ಟ್ ಡಸ್ಟರ್ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಎಸ್‌ಯುವಿ ಎಂದ ತಕ್ಷಣ ನೆನಪಾಗುವ ಮೊದಲ ಕಾರಾಗಿತ್ತು. ದಶಕದ ಹಿಂದೆ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ರೆನಾಲ್ಟ್ ಡಸ್ಟರ್ (Renault duster) ಅನ್ನು ಮೊದಲಿಗೆ 2012 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಆಗ ಇದರ ಡಿಸೈನ್‌ ಹಾಗೂ ಪರ್ಫಾಮೆನ್ಸ್‌ಗೆ ಜನ ಫಿದಾ ಆಗಿದ್ದರು, ನಂತರ ಇತರ ಬ್ರಾಂಡ್‌ಗಳ ಪೈಪೋಟಿ ಹಾಗೂ ವಿವಿಧ ಕಾರಣಾಂತರಗಳಿಂದ 2022 ರಲ್ಲಿ ಕಾರನ್ನು ಸ್ಥಗಿತಗೊಳಿಸಲಾಯಿತು. ಆದರೆ ಜನರಲ್ಲಿ ಇಂದಿಗೂ ಈ ಕಾರಿನ ಮೇಲೆ ಕ್ರೇಜ್ ಇರುವ ಕಾರಣ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವಂತಹ ಡಿಸೈನ್, ಫೀಚರ್ಸ್ ಹಾಗೂ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

ರೆನಾಲ್ಟ್ ಕಂಪನಿಯು ಈಗ ಡಸ್ಟರ್ ಅನ್ನು ಹೊಸ ಡಿಸೈನ್‌ನಲ್ಲಿ ಮರಳಿ ತರಲು ಸಜ್ಜಾಗಿದೆ. ಮುಂಬರುವ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿ ಸಖತ್ ರಗಡ್ ಹಾಗೂ ಪವರ್‌ಫುಲ್‌ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ. ಜನವರಿ 26 ಗಣರಾಜ್ಯೋತ್ಸವದಂದು ಕಂಪನಿಯು ಇದನ್ನು ಅನಾವರಣಗೊಳಿಸಿ ಕಾರಿನ ವಿಶೇಷತೆಗಳನ್ನು ಹಂಚಿಕೊಂಡಿತ್ತು. ಇದೀಗ ಮಾರ್ಚ್ 17 ರಂದು ಬೆಲೆಗಳನ್ನು ಘೊಷಿಸಿ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

new-2026-renault-duster-all-set-launch-on-march-17th

ಹೊಸ ರೆನಾಲ್ಟ್ ಡಸ್ಟರ್ CMF-B LS ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದು, ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಿ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಹೊಸ ರೆನಾಲ್ಟ್ ಡಸ್ಟರ್ ಆಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಹೈ-ಪರ್ಫಾಮೆನ್ಸ್‌ನೊಂದಿಗೆ ಬರಲಿದೆ ಎಂದು ರೆನಾಲ್ಟ್ ಇಂಡಿಯಾ ಸಿಇಒ ಸ್ಟೀಫನ್ ಡೆಬ್ಲೈಸ್ ಹೇಳಿದ್ದಾರೆ.

ಹೊಸ ಡಸ್ಟರ್ ವಿಶೇಷತೆಗಳು

ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಎಂಜಿನ್ ವಿಷಯಕ್ಕೆ ಬಂದರೆ 1.0-ಲೀಟರ್, 3-ಸಿಲಿಂಡರ್, ಟರ್ಬೊ - ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್, 4-ಸಿಲಿಂಡರ್, ಟರ್ಬೊ - ಪೆಟ್ರೋಲ್, ಡೈರೆಕ್ಟ್ - ಇಂಜೆಕ್ಷನ್ ಎಂಜಿನ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಸಲಾದ 1.8-ಲೀಟರ್, 4-ಸಿಲಿಂಡರ್, ಡೈರೆಕ್ಟ್ - ಇಂಜೆಕ್ಷನ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.

new-2026-renault-duster-all-set-launch-on-march-17th

ಮೂಲಗಳ ಪ್ರಕಾರ 2026ರ ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್‌ನ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಬಹುದು. ಆರಂಭಿಕ ಬೆಲೆ ರೂ. 10 ಲಕ್ಷ (ಎಕ್ಸ್-ಶೋರೂಂ)ಕ್ಕಿಂತ ಕಡಿಮೆ ಇರಬಹುದು ಎನ್ನಲಾಗಿದೆ. ಒಂದೆಡೆ ಮಾರ್ಚ್‌ನಲ್ಲಿ ಅಧಿಕೃತವಾಗಿ ಬಿಡುಗಡೆಗೆ ಸಜ್ಜಾಗಿದ್ದರೆ, ಮತ್ತೊಂದೆಡೆ ಹಲವು ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರಿಗಾಗಿ ಈ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕಾರಿನ ಮೇಲೆ ಕ್ರೇಜ್ ಹೆಚ್ಚಾಗಿದ್ದು, ಬಿಡುಗಡೆ ಬಳಿಕ ಯಾವ ಮಟ್ಟಿಗೆ ಸದ್ದು ಮಾಡಲಿದೆ ನೋಡಬೇಕಿದೆ.

ಈಗಾಗಲೇ ಹೊಸ ಡಸ್ಟರ್‌ಗಾಗಿ ಬುಕಿಂಗ್‌ಗಳು ಆರಂಭವಾಗಿದ್ದು, 21,000 ರೂ. ಪಾವತಿಸಿ ಬುಕ್ ಮಾಡಿಕೊಳ್ಳಬಹುದು. ಕೆಲ ವರದಿಗಳ ಪ್ರಕಾರ ಏಪ್ರಿಲ್‌ನಲ್ಲಿ ಡೆಲಿವರಿಗಳು ನೀಡಬಹುದು ಎಂದು ಹೇಳಲಾಗುತ್ತಿದೆ. ಒಮ್ಮೆ ಬಿಡುಗಡೆಯಾದ ಬಳಿಕ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಸಿಯೆರಾ ಮತ್ತು ಈ ವಿಭಾಗದಲ್ಲಿನ ಇತರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ.

new-2026-renault-duster-all-set-launch-on-march-17th

ಹೊಸ ರೆನಾಲ್ಟ್ ಡಸ್ಟರ್‌ನ ಒಳಾಂಗಣವು ಪನೋರಮಿಕ್ ಸನ್‌ರೂಫ್, ಪವರ್ಡ್ ಫ್ರಂಟ್ ಸೀಟುಗಳು, ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಆರ್ಮ್‌ರೆಸ್ಟ್, ಪವರ್ಡ್ ಟೈಲ್‌ಗೇಟ್ ಮತ್ತು 60:40 ಸ್ಪ್ಲಿಟ್ ರಿಯರ್ ಸೀಟುಗಳೊಂದಿಗೆ ಬರುತ್ತದೆ. ಜೊತೆಗೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್-ಸ್ಕ್ರೀನ್ ಲೇಔಟ್, ಆಂಬಿಯೆಂಟ್ ಲೈಟಿಂಗ್, ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳ ಮೇಲೆ ಕಾರ್ಬನ್ ಫೈಬರ್ ಇನ್ಸರ್ಟ್‌ಗಳು ಇವೆ.

ಇವಿಷ್ಟೆ ಅಲ್ಲದೆ ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿ ಮತ್ತು ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್‌, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒಳಗೊಂಡಿದೆ. ಇತರ ಮುಖ್ಯಾಂಶಗಳಲ್ಲಿ ಅರ್ಕಾಮಿಸ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಇದರ ಪ್ರೀಮಿಯಂ ಆಕರ್ಷಣೆಯ ಸೇರ್ಪಡೆಯಾಗಿದ್ದು, ಡಸ್ಟರ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ.

More from DriveSpark

Article Published On: Thursday, March 5, 2026, 12:15 [IST]
English summary
New 2026 renault duster all set launch on march 17th
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+