TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...
ದೇಶದಲ್ಲಿ ದಿನಂಪ್ರತಿ ಒಂದಿಲ್ಲಾ ಒಂದು ಭೀಕರ ಅಪಘಾತಗಳು ಘಟಿಸುತ್ತಲೇ ಇರುತ್ತವೆ. ಅವುಗಳಲ್ಲಿ ರೈಲು ದುರಂತಗಳು ಸಹ ಹೊರತಾಗಿಲ್ಲ. ಭಾರತದಲ್ಲಿ ರೈಲ್ವೆ ಸೇವೆಗಳು ಆರಂಭವಾದ ದಿನಗಳಿಂದಲೂ ಇದುವರೆಗೆ ಸಾವಿರಾರು ಅವಘಡ ದಾಖಲಾಗಿದ್ದು, ದೇಶದ ಜನತೆಯನ್ನು ಬೆಚ್ಚಿಬೀಳಿಸಿದ್ದ ಪ್ರಮುಖ 10 ಅಪಘಾತಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ರೈಲ್ವೆ ಸೇವೆಗಳು ದೇಶದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿ ಬೆಳೆದು ನಿಂತಿದ್ದು, ಕೈಗೆಟುವ ದರಗಳಲ್ಲಿ ದಿನಂಪ್ರತಿ ಲಕ್ಷಾಂತರ ಜನರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸುರಕ್ಷಿತವಾಗಿ ತಲುಪಿಸುವಲ್ಲಿನ ಅದರ ಪಾತ್ರ ಹಿರಿಯದು. ಆದರೂ ದೇಶದಲ್ಲಿ ನಡೆದ ಕೆಲವು ರೈಲು ದುರಂತಗಳು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ.
1. ಪಂಬನ್-ಧನುಸ್ಕೊಡಿ ಪ್ಯಾಸೆಂಜರ್ ರೈಲು ದುರಂತ
1964 ರ ಡಿಸೆಂಬರ್ 23 ರಂದು ನಡೆದ ಪಂಬನ್-ಧನುಸ್ಕೊಡಿ ಪ್ಯಾಸೆಂಜರ್ ರೈಲು ಅಪಘಾತ 150ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು ಇಂದಿಗೂ ಮರೆಯಲಾಗದ ಅತಿ ದೊಡ್ಡ ದುರಂತ. ಘಟನೆ ಕೆಲವರು ಚಂಡಮಾರುತವೇ ಕಾರಣ ಎಂದರೇ ಮತ್ತೆ ಕೆಲವರು ದುಷ್ಕರ್ಮಿಗಳ ಕೃತ್ಯವೇ ಇದಕ್ಕೆ ಕಾರಣ ಎಂದಿದ್ದಾರೆ. ಆದರೂ ಘಟನೆಗೆ ಬಗ್ಗೆ ಇದುವರೆಗೂ ನಿಖರ ಕಾರಣವಿಲ್ಲ.
2. ಹೈದರಾಬಾದ್ ರೈಲು ದುರಂತ
28 ಸೆಪ್ಟೆಂಬರ್ 1954ರಲ್ಲಿ ನಡೆದ ಹೈದರಾಬಾದ್ ರೈಲು ದುರಂತದಲ್ಲಿ ಸುಮಾರು 139 ಜನ ಪ್ರಯಾಣಿಕರು ಮೃತಪಟ್ಟು ನೂರಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ಹೈದರಾಬಾದ್‌ನ ದಕ್ಷಿಣಕ್ಕೆ 75 ಕಿಮೀ ದೂರದಲ್ಲಿ ನಡೆದ ಈ ಘಟನೆಯು ಅತಿ ದೊಡ್ಡ ರೈಲು ಅಪಘಾತಗಳಲ್ಲಿ ಒಂದಾಗಿದೆ.
3. ಸಂತ ಕಬೀರ್ ನಗರ ರೈಲು ಅಪಘಾತ
ಮೇ 26, 2014 ರಂದು ಉತ್ತರ ಪ್ರದೇಶದ ಸಂತ ಕಬಿರ್ ನಗರ ಜಿಲ್ಲೆಯ ಖಲೀಲಾಬಾದ್ ನಿಲ್ದಾಣದ ಬಳಿ ನಡೆದ ಈ ಅಪಘಾತ ಪ್ರಕರಣದಲ್ಲಿ ಗೋರಖ್‌ಪುರ್ ಟು ಗೋರಖ್‌ಧಾಮ್ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 25 ಪ್ರಯಾಣಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು.
4. ಅನಂತಪುರ ರೈಲು ಅಪಘಾತ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ನಡೆದ ನಾಂದೇಡ್ ಟು ಬೆಂಗಳೂರು ಎಕ್ಸಪ್ರೆಸ್ ರೈಲು ದುರಂತವು ಸಹ ಇಂದಿಗೂ ಮರೆಯಲಾಗದ ಕರಾಳ ನೆನಪು. ಯಾಕೇಂದ್ರೆ ವಿದ್ಯುತ್ ಅವಘಡದಲ್ಲಿ ಸುಮಾರು 26ಕ್ಕೂ ಹೆಚ್ಚು ಸ್ಥಳದಲ್ಲೇ ಅಸುನಿಗಿದ್ದರು. ಈ ಘಟನೆಯು ಅನಂತಪುರ ಜಿಲ್ಲೆಯ ಕೋಥೆಚ್ಯೂರು ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿತ್ತು.
5. ಮಧ್ಯ ಪ್ರದೇಶ ರೈಲು ದುರಂತ
ಮಧ್ಯಪ್ರದೇಶದ ಬಡಾರ್ವಾಸ್ ನಿಲ್ದಾಣದ ಬಳಿ ಸಂಭವಿಸಿದ ಪ್ರಯಾಣಿಕ ರೈಲು ಅಪಘಾತದಲ್ಲಿ ಸುಮಾರು 20 ಪ್ರಯಾಣಿಕರು ಸಾವನ್ನಪ್ಪಿದ್ದಲ್ಲದೇ 50ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಹಳಿ ಬದಲಾವಣೆ ವೇಳೆ ಸರಕು ರೈಲುಗೆ ಪ್ರಯಾಣಿಕ ರೈಲು ಡಿಕ್ಕಿ ಹೊಡೆದಿತ್ತು.
6. ಬಿಹಾರ ರೈಲು ಅಪಘಾತ
ಜೂನ್ 6, 1981ರಲ್ಲಿ ನಡೆದ ಬಿಹಾರ ರೈಲು ದುರಂತ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನಲ್ಲಿ ಅತಿ ದೊಡ್ಡ ರೈಲ್ವೆ ದುರಂತ ಅದು. ಬಗ್ಮತಿ ನದಿಗೆ ಬಿದ್ದ ಪ್ರಯಾಣಿಕ ರೈಲು ಬರೋಬ್ಬರಿ 800 ಜನ ಪ್ರಯಾಣಿಕರ ಜೀವ ಪಡೆದಿತ್ತು. ಅಪಘಾತಕ್ಕೆ ನಿಖರ ಕಾರಣವಿಲ್ಲದಿದ್ದರೂ ಕೆಲವು ತನಿಖಾ ವರದಿಗಳನ್ನು ಆಧರಿಸಿ ರೈಲ್ವೆ ಬ್ರಿಡ್ಜ್ ಮೇಲೆ ಬರುತ್ತಿದ್ದ ಹಸುಗಳ ಗುಂಪನ್ನು ರಕ್ಷಿಸಲು ಹೋಗಿ ನಡೆದ ಘಟನೆ ಇದಾಗಿದೆ ಎಂದಿದ್ದಾರೆ.
7. ಅಸ್ಸಾಂ ರೈಲು ದುರಂತ
ಆಗಸ್ಟ್ 2, 1999 ರಂದು ನಡೆದ ಈ ರೈಲು ದುರಂತದಲ್ಲಿ ದೆಹಲಿ ಕಡೆಯಿಂದ ಬರುತ್ತಿದ್ದ ಅವಧ್ ಅಸ್ಸಾಂ ಎಕ್ಸ್‌ಪ್ರೆಸ್ ಮತ್ತು ದಿಬ್ರೂರ್ಘದಿಂದ ಕಡೆಯಿಂದ ಬರುತ್ತಿದ್ದ ಬ್ರಹ್ಮಪುತ್ರ ಮೇಲ್ ರೈಲು ಮುಖಾಮುಖಿ ಡಿಕ್ಕಿ ಹೊಡೆದಿದ್ದವು. ಹೈ ಸ್ಪೀಡ್‌ನಲ್ಲಿ ಡಿಕ್ಕಿ ಹೊಡೆದ ಪರಿಣಾಮ 290 ಜನ ಮೃತಪಟ್ಟಿದ್ದರು.
8. ಫಿರೋಜಾಬಾದ್ ರೈಲು ದುರಂತ
ಆಗಸ್ಟ್ 20,1995ರಲ್ಲಿ ನಡೆದ ಪುರುಷೋತ್ತಮ್ ಎಕ್ಸ್‌ಪ್ರೆಸ್ ಮತ್ತು ಕಾಳಿಂದಿ ಎಕ್ಸ್‌ಪ್ರೆಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸುಮಾರು 350ಕ್ಕೂ ಹೆಚ್ಚು ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು. ರೈಲು ನಿಲ್ದಾಣದಲ್ಲಿ ಹಳಿ ಬದಲಾವಣೆಯಲ್ಲಿ ಆದ ಒಂದು ಸಣ್ಣ ವ್ಯತ್ಯಾಸವೇ ಈ ಘೋರ ದುರಂತಕ್ಕೆ ಕಾರಣವಾಗಿತ್ತು.
Source: themangonews
9. ಪಂಜಾಬ್ ರೈಲು ದುರಂತ
ನವೆಂಬರ್ 26, 1998 ರಂದು ನಡೆದ ಜಮ್ಮು ತಾವಿ ಸೀಲ್ದಾ ಎಕ್ಸ್‌ಪ್ರೆಸ್ ಹಳಿತಪ್ಪಿದ ಪರಿಣಾಮ ಬರೋಬ್ಬರಿ 212 ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡರು. ಪಂಜಾಬ್ ಖನ್ನಾ ಬಳಿಯ ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಬಳಿಯ ಈ ಘಟನೆ ನಡೆದಿತ್ತು. ಘಟನೆ ನಂತರ ಜಮ್ಮು ತಾವಿ ಸೀಲ್ದಾ ಎಕ್ಸ್‌ಪ್ರೆಸ್ ಹಿಂದೆಯೇ ಬರುತ್ತಿದ್ದ ಮತ್ತೊಂದು ಎಕ್ಸ್‌ಪ್ರೆಸ್ ಕೂಡಾ ಹಳಿತಪ್ಪಿದ ರೈಲಿಗೆ ಡಿಕ್ಕಿಹೊಡೆದಿತ್ತು.
10. ದೆಹಲಿ ಎಕ್ಸ್‌ಪ್ರೆಸ್ ದುರಂತ
ಸೆಪ್ಟೆಂಬರ್ 9, 2002ರಲ್ಲಿ ನಡೆದ ಹೌರಾ-ನವದೆಹಲಿ-ರಾಜಧಾನಿ ಎಕ್ಸ್‌ಪ್ರೆಸ್ ಹಳಿತಪ್ಪಿದ ಅವಘಡದಲ್ಲಿ ಸುಮಾರು 140 ಪ್ರಯಾಣಿಕರು ತಮ್ಮ ಜೀವ ಕಳೆದುಕೊಂಡಿದ್ದರು. ಬಿಹಾರದಲ್ಲಿ ನಡೆದ ಈ ಘಟನೆಗೆ ದುರ್ಬಲವಾದ ರೈಲ್ವೆ ಟ್ರ್ಯಾಕ್ ಕಾರಣ ಎನ್ನಲಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಜೆಪಿ ಮುಖಂಡನ ಹೊಸ ಫೋರ್ಡ್ ಎಂಡೀವರ್...
ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ..!!
ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..