ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

Written By: Rahul
Recommended Video - Watch Now!
Auto Rickshaw Explodes In Broad Daylight

ಇತ್ತೀಚೆಗಷ್ಟೆ ತಮ್ಮ ಬಹುದಿನಗಳ ಗೆಳತಿ ಅನುಷ್ಕಾ ಶರ್ಮಾ ಕೈಹಿಡಿದಿರುವ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಮಾಡಿದ್ದರು. ಕೇವಲ ವ್ಯಯಕ್ತಿಕ ಬುದುಕಿನಲ್ಲಿ ಅಷ್ಟೇ ವೃತ್ತಿಪರ ಜೇವನದಲ್ಲೂ ಬಹಳಷ್ಟು ಹೆಸರು ಮಾಡಿರುವ ಈ ಜೋಡಿಯು ಐಷಾರಾಮಿ ಕಾರುಗಳ ಸಂಗ್ರಹದಲ್ಲಿ ಯಾವ ಸ್ಟಾರ್‌ಗೂ ಕಡಿಮೆ ಇಲ್ಲಾ ಅಂದ್ರೆ ನೀವು ನಂಬಲೇಬೇಕು.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಸದ್ಯ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಆಡಿಯ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ವಿರಾಟ್ ಕೊಹ್ಲಿ, ಅನೇಕ ಪ್ರಸಂಗಗಳಲ್ಲಿ ತಮ್ಮ ಕಾರು ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ಬಳಿಯಿರುವ ಕೆಲವು ಐಷಾರಾಮಿ ಕಾರುಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ರೇಂಜ್ ರೋವರ್ ವೋಗ್

ವಿರಾಟ್ ಕೊಹ್ಲಿ ಕೆಲವು ಐಷಾರಾಮಿ SUV ಕಾರುಗಳನ್ನು ಹೊಂದಿದ್ದರೂ ಲ್ಯಾಂಡ್ ರೋವರ್ ವೋಗ್ ತಮ್ಮ ಕಾರ್ ಕಲೆಕ್ಷನ್ ಗಳಲ್ಲಿ ಹೈಲೆಟ್ ಆಗಿದೆ. ವಿರಾಟ್ ಅವರ ವಿಶೇಷ ಸಂದರ್ಭಗಳಲ್ಲಿ ಲ್ಯಾಂಡ್ ರೋವರ್ ನೆಚ್ಚಿನ ಆಯ್ಕೆಯಾಗಿದ್ದು, ಈ ಕಾರು 4.4ಲೀಟರ್ ಎಸ್ ಡಿವಿ8 ಎಂಜಿನ್ ನಿಂದ ಶಕ್ತಿಯನ್ನು ಹೊಂದುತ್ತದೆ, ಇದರಿಂದ 335ಬಿಹೆಚ್ ಪಿ-740 ಟಾರ್ಕನ್ನು ಉತ್ಪಾದಿಸುತ್ತದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಆಡಿ ಎಸ್5

ವಿರಾಟ್ ಹೊಂದಿರುವ ತನ್ನ ಆಡಿ ಕಾರುಗಳಿಗೆ ಅವರೇ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಅದರಲ್ಲಿ ಹೊಸದಾದ ಆಡಿ ಎಸ್ 5 ಕೂಪೆ ಶೈಲಿಯ ಸೆಡಾನ್ ಕೂಡಾ ಒಂದು. ಇದು ಭಾರತದಲ್ಲಿ ಬಿಡುಗಡೆ ಮಾಡಲಾದ ಇತ್ತೀಚಿನ ಕಾರುಗಳಲ್ಲಿ ಒಂದಾಗಿದ್ದು, ಕ್ರಿಡಾ ಸ್ಪೂರ್ತಿ ಪಡೆದುಕೊಡಿದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಈ ಕಾರಿನ ಬೆಲೆಯು ಎಕ್ಸ್ ಶೋರೂಮಿನಲ್ಲಿ 70.60 ಲಕ್ಷ ರುಪಾಯಿಗಳಾಗಿದ್ದು, ಇದು 3-ಲೀಟರ್ ವಿ6 ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 349-ಬಿಹೆಚ್‌ಪಿ, 500-ಎನ್ಎಮ್ ಉತ್ಪಾದಿಸುತ್ತದೆ. 8ಕ್ವಿಡ್ ಟ್ರಾನ್ಸಿಷನ್ ಮೂಲಕ ಶಕ್ತಿಯನ್ನು ಎಲ್ಲಾ ಚಕ್ರಗಳನ್ನು ಕಳುಹಿಸುವ ಗುಣಹೊಂದಿದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ರೇಂಜ್ ರೋವರ್

ತಮ್ಮ ನಟನಾ ಶೈಲಿ ಮೂಲಕವೇ ಬಿ ಟೌನ್ ತನ್ನದೇ ಆದ ಹೆಸರು ಮಾಡಿರುವ ಅನುಷ್ಕ ಶರ್ಮಾ ಕೂಡಾ ದುಬಾರಿ ಬೆಲೆಯ ರೇಂಜ್ ರೋವರ್ ಡಿಸ್ಕವರಿ ಕಾರನ್ನು ಖರೀದಿಸಿ ಸುದ್ದಿ ಮಾಡಿದ್ದರು. ಈ ಕಾರು ಅನುಷ್ಕಾ ಶರ್ಮಾ ಅವರ ನೆಚ್ಚಿನ ಕಾರಾಗಿದ್ದು, ಇದು ವಿರಾಟ್ ಕೊಹ್ಲಿರವರ ರೇಂಜ್ ರೋವರ್ ವೋಗ್ ಕಾರನ್ನು ಹೋಲುತ್ತದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಆಡಿ ಆರ್8

5.2-ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ 8 ಆರ್‌ಎಲ್‌ಎಂಎಕ್ಸ್ ಮಾದರಿಯು ಬರೋಬ್ಬರಿ 570-ಬಿಎಚ್‌ಪಿ ಉತ್ಪಾದಿಸುವ ಗುಣ ಹೊಂದಿದ್ದು, 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದೆ. ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಕೂಡಾ ಹೊಂದಿದ್ದು, ವಿರಾಟ್ ನೆಚ್ಚಿನ ಈ ಕಾರು ದೆಹಲಿ ಹಾಗೂ ಮುಂಬೈ ಎಕ್ಸ್ ಶೋ ರೂಂ ಪ್ರಕಾರ ರೂ. 2.63 ಕೋಟಿ ಬೆಲೆ ಹೊಂದಿದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಆಡಿ ಆರ್8 ವಿ10

ಕೊಹ್ಲಿ ಆಡಿ ಆರ್8 ವಿ10 ಕಾರು 5.2ಲೀಟರ್ ವಿ10 ಎಂಜಿನ್ ಪ್ರೇರಣೆ ಹೊಂದಿದ್ದು, ಇದು 525-ಬಿಹೆಚ್‌ಪಿ, 535-ಎನ್ಎಮ್ ಟಾರ್ಕನ್ನು ಉತ್ಪಾದಾನಾ ಶಕ್ತಿ ಹೊಂದಿದ್ದು, ಈ ಕಾರಿನ ಬೆಲೆಯು ರೂ. 2 ಕೋಟಿಯಾಗಿದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಆಡಿ ಎ8 ಎಲ್

ಕೊಹ್ಲಿಯ ಆಡಿ ಎ8 ಎಲ್ ಕಾರು ಆಡಿ ಬಿಡುಗಡೆ ಮಾಡಿರುವ ಐಷಾರಾಮಿ ಕಾರುಗಳಲ್ಲಿ ಇದು ಕೂಡ ಒಂದಾಗಿದ್ದು, 6.8-ಲೀಟರ್ ಡಬ್ಲ್ಯೂ12 ಎಂಜಿನ್ ಹೊಂದಿದೆ. ಹೀಗಾಗಿ ಹೊಸ ಕಾರು 494-ಬಿಹೆಚ್‌ಪಿ, 565-ಎನ್ಎಮ್ ಟಾರ್ಕನ್ನು ಉತ್ಪಾದಿಸಬಲ್ಲದು. ಇದರ ಬೆಲೆಯು ದೆಹಲಿ ಎಕ್ಸ್ ಶೋರಂ ಪ್ರಕಾರ 2 ಕೋಟಿಗೂ ಅಧಿಕವಾಗಿದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಆಡಿ ಕ್ಯೂ 7 45ಟಿಡಿಐ

ಕಳೆದ ವರ್ಷ ಕೊಹ್ಲಿ ಆಡಿ ಕ್ಯೂ 7 45 ಟಿಡಿಐ ಕಾರನ್ನು ಬಿಡುಗಡೆಗೊಳಿಸಿದ್ದಲ್ಲದೇ ಕೊಹ್ಲಿಯೇ ಇದರ ಮೊದಲ ಗ್ರಾಹಕರಾಗಿದ್ದರು. ಇದು 3.0-ಲೀಟರ್ ವಿ6 ಎಂಜಿನ್‌ನೊಂದಿಗೆ 145-ಬಿಹೆಚ್‌ಪಿ, 600-ಎನ್ಎಮ್ ಟಾರ್ಕನ್ನು ಉತ್ಪಾದಿಸುತ್ತದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಟೊಯೊಟಾ ಫಾರ್ಚ್ಯುನರ್

ಸರಿ ಸುಮಾರು 35 ಲಕ್ಷ ರು.ಗಳಷ್ಟು ದುಬಾರಿಯೆ ಟೊಯೊಟಾ ಫಾರ್ಚ್ಯುನರ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವು ಕೊಹ್ಲಿ ಬಳಿಯಿದೆ. ಈ 4x4 ಚಾಲನಾ ವ್ಯವಸ್ಥೆಯ ಕಾರಿನಲ್ಲಿ ತ್ರಿ ಲೀಟರ್, ಫೋರ್ ಸಿಲಿಂಡರ್ ಡಿ4ಡಿ ಟರ್ಬೊ ಎಂಜಿನ್ ಆಳವಡಿಸಲಾಗಿದ್ದು, 170 ಅಶ್ವಶಕ್ತಿ (343 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ರೆನಾಲ್ಟ್ ಡಸ್ಟರ್

ಕೇಲವ ಐಷಾರಾಮಿ ಕಾರುಗಳಷ್ಟೇ ಅಲ್ಲದೇ ರೆನಾಲ್ಟ್ ಡಸ್ಟರ್ ಕೂಡಾ ವಿರಾಟ್ ಕೊಹ್ಲಿ ಐಷಾರಾಮಿ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನ ಗಿಟ್ಟಿಸಿದೆ. ಕಳೆದ ವರ್ಷ ಶ್ರೀಲಂಕಾ ಜೊತೆ ನಡೆದ ಸರಣಿ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಪಡೆದಿದ್ದ ವಿರಾಟ್ ಈ ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.

English summary
Virat Kohli & Anushka Sharma & the cars they own, from Range Rovers to Toyotas.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark