ಬಹುಕೋಟಿ ಮೌಲ್ಯದ ಕಾರುಗಳ ಒಡೆಯ ಸಿ.ಜೆ. ರಾಯ್: ಮಾರುತಿ 800 ನಿಂದ ರೋಲ್ಸ್ ರಾಯ್ಸ್

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್, ಜನವರಿ 30, 2026 ರಂದು ಶವವಾಗಿ ಪತ್ತೆಯಾಗಿದ್ದಾರೆ. ಕಾನ್ಪಿಡೆಂಟ್ ಗ್ರೂಪ್ ಮತ್ತು ಸಿ.ಜೆ. ರಾಯ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಇದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತುಂಬಾ ಚುರುಕಾದ ವ್ಯಕ್ತಿತ್ವದೊಂದಿಗೆ ಸದಾ ಖುಷಿಯಾಗಿ ಕಾಣಿಸಿಕೊಳ್ಳುವ ಇವರು, ಕಾರು ಉತ್ಸಾಹಿಯೂ ಆಗಿದ್ದರು. ಯಾರಿಗೂ ತಿಳಿಯದ ಅವರ ಕಾರ್ ಕಲೆಕ್ಷನ್ ಬಗ್ಗೆ ಒಂದು ನೋಟ ಇಲ್ಲಿದೆ.

ಭಾರತದ ಶ್ರೀಮಂತ ಉದ್ಯಮಿ ಸಿ.ಜೆ. ರಾಯ್, ತಮ್ಮ ಮೊದಲ ಕಾರಾಗಿ ಅತ್ಯಂತ ಪುಟ್ಟ ಮಾರುತಿ 800 ಖರೀದಿಸಿದ್ದರು, ಈಗ (ಸಾವಿಗೂ ಮುನ್ನ) ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್‌ನಲ್ಲಿ ಓಡಾಡುತ್ತಿದ್ದರು. ಇದೊಂದೆ ಅಲ್ಲದೆ ಬುಗಾಟಿ, ಲ್ಯಾಂಬೋರ್ಘಿನಿ ಮತ್ತು ಫೆರಾರಿ ಕಾರುಗಳಿಂದ ತುಂಬಿದ ದೊಡ್ಡ ಗ್ಯಾರೇಜ್ ಇವರ ಬಳಿಯಿತ್ತು.

maruti-800-to-rolls-royce-cj-roy-owner-of-multi-crore-cars

ಮೂಲಗಳ ಪ್ರಕಾರ ಭಾರತ ಮತ್ತು ದುಬೈನ ಗ್ಯಾರೇಜ್‌ಗಳಲ್ಲಿ 12 ರೋಲ್ಸ್ ರಾಯ್ಸ್ ಫ್ಯಾಂಟಮ್ಸ್, ಬುಗಾಟಿ ವೇರಾನ್, ಕೊಯೆನಿಗ್ಸೆಗ್ ಅಗೇರಾ, ಹಲವು ಲ್ಯಾಂಬೋರ್ಘಿನಿಗಳು, ಮೆಕ್‌ಲಾರೆನ್‌ಗಳು ಮತ್ತು ಫೆರಾರಿಗಳು ಸೇರಿದಂತೆ 200 ಕ್ಕೂ ಹೆಚ್ಚು ಐಷಾರಾಮಿ ವಾಹನಗಳನ್ನು ಹೊಂದಿದ್ದರು. ಅವರು ತಮ್ಮ ಮೊದಲ ಮಾರುತಿ 800 ಕಾರನ್ನು ಭಾವನಾತ್ಮಕ ಮೌಲ್ಯದಿಂದಾಗಿ ರೂ.10 ಲಕ್ಷಕ್ಕೆ ಮತ್ತೆ ಖರೀದಿಸಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು.

ರಾಯ್ ಅವರು ಬಹುಕೋಟಿ ಮೌಲ್ಯದ ಕಾರುಗಳನ್ನು ಹೊಂದಿದ್ದರೂ, ಮಾರುತಿ 800 ವಾಹನವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಿದ್ದರು. ತಮ್ಮ ಗಮನಾರ್ಹ ಕಾರು ಸಂಗ್ರಹಕ್ಕಾಗಿಯೂ ವ್ಯಾಪಕವಾಗಿ ಗುರ್ತಿಸಿಕೊಂಡಿದ್ದರು, ಅಲ್ಟ್ರಾ-ಐಷಾರಾಮಿ ಸೂಪರ್ ಕಾರುಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಚುರುಕಾಗಿದ್ದರು. 10 ಲಕ್ಷದ ಕಾರಿನಿಂದ ಹಿಡಿದು ಬಹುಕೋಟಿ ಕಾರುಗಳವರೆಗೆ ಪ್ರತ್ಯೇಕ ಶೋರೂಂ ಹೊಂದಿದ್ದರು.

maruti-800-to-rolls-royce-cj-roy-owner-of-multi-crore-cars

ಅವರ ಕಾರುಗಳು ಮತ್ತು ಮೌಲ್ಯ: ಲ್ಯಾಂಬೋರ್ಘಿನಿ ಹುರಾಕನ್ ಮತ್ತು ಅವೆಂಟಡಾರ್ - ಐಷಾರಾಮಿ ಇಟಾಲಿಯನ್ ಸೂಪರ್‌ಕಾರ್‌ಗಳ ಆನ್ ರೋಡ್ ಬೆಲೆ ರೂ. 5 ರಿಂದ 8.5 ಕೋಟಿಗೂ ಹೆಚ್ಚು. ಹೈ ಪರ್ಫಾಮೆನ್ಸ್‌ನೊಂದಿಗೆ ಐಕಾನಿಕ್ ಹೈಪರ್‌ಕಾರ್ ಬುಗಾಟಿ ವೇಯ್ರಾನ್ ಅನ್ನು ಹೊಂದಿದ್ದು, ಇದರ ಬೆಲೆ ಅಂದಾಜು (ಬಿಡುಗಡೆ ಸಮಯದಲ್ಲಿ) ರೂ. 16 ಕೋಟಿಗೂ ಹೆಚ್ಚು.

ಅಪರೂಪದ ಸ್ವೀಡಿಷ್ ಹೈಪರ್‌ಕಾರ್ ಕೊಯೆನಿಗ್ಸೆಗ್ ಅಗೇರಾ ಕೂಡ ಇವರ ಬಳಿಯಿದ್ದು, ಭಾರತದಲ್ಲಿ ನೋಂದಾಯಿಸಿದರೆ ಅಂದಾಜು ರೂ. 12 ಕೋಟಿಗೂ ಹೆಚ್ಚು. ಫೆರಾರಿ ಮಾಡಲ್‌ಗಳು (458, SF90, 812 ಸೂಪರ್‌ಫಾಸ್ಟ್) ಇವು ಹೈ ಪರ್ಫಾಮೆನ್ಸ್ ಕಾರುಗಳಾಗಿದ್ದು, ರೂ. 7.5 ಕೋಟಿಗೂ ಹೆಚ್ಚು. ಅಲ್ಟ್ರಾ-ಐಷಾರಾಮಿ ರೋಲ್ಸ್ ರಾಯ್ಸಸ್ ಫ್ಯಾಂಟಮ್VIII - ಫ್ಲ್ಯಾಗ್‌ಶಿಪ್ ಆನ್-ರೋಡ್ ಬೆಲೆಯು ರೂ. 10 ರಿಂದ 12 ಕೋಟಿ.

ಇತರ ಕಾರುಗಳಲ್ಲಿ ವ್ರೈತ್, ಸ್ಪೆಕ್ಟರ್ ಮತ್ತು ಘೋಸ್ಟ್ ಸೇರಿವೆ, ಇವೆಲ್ಲವೂ ಕೋಟಿಗಳಲ್ಲಿ ಮೌಲ್ಯಯುತವಾಗಿವೆ. ಇಲ್ಲಿಗೆ ಮುಗಿಯುವುದಿಲ್ಲ, ಉನ್ನತ-ಮಟ್ಟದ ವಾಹನಗಳಾದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ - ಐಷಾರಾಮಿ ಗ್ರ್ಯಾಂಡ್ ಟೂರರ್ ಆನ್-ರೋಡ್ ಬೆಲೆಯು ರೂ.5-8 ಕೋಟಿಗೂ ಹೆಚ್ಚು. ಭಾರತದಲ್ಲೂ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ನಂತಹ ಉನ್ನತ-ಮಟ್ಟದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಅವರ ಪ್ರಯಾಣವು 1994 ರಲ್ಲಿ 25 ವರ್ಷ ವಯಸ್ಸಿನವರಿದ್ದಾಗ ರೂ.1.10 ಲಕ್ಷಕ್ಕೆ ಖರೀದಿಸಿದ ಮಾರುತಿ 800 ಕಾರಿನ ಮೂಲಕ ಪ್ರಾರಂಭವಾಗಿ ಬಹುಕೋಟಿ ಮೌಲ್ಯದ ಕಾರುಗಳನ್ನು ಖರೀದಿಸುವ ಮಟ್ಟಕ್ಕೆ ಬೆಳೆದಿದ್ದರು. ಅವರ ಆತ್ಮಹತ್ಯೆಯೂ ಎಲ್ಲರಿಗೂ ಆಘಾತವನ್ನು ನೀಡಿದೆ. ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೆ ಕಾರಣ ಹೊರಬರಲಿದೆ. ಇವರ ಅಕಾಲಿಕ ಮರಣದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Saturday, January 31, 2026, 19:31 [IST]
English summary
Maruti 800 to rolls royce cj roy owner of multi crore cars
Read more on celebrity car offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+